ADVERTISEMENT

ಅಮೆರಿಕದಲ್ಲಿ ಭಾರತೀಯರ ಮೇಲೆ ದಾಳಿ ಖಂಡಿಸಿ ಎಸ್‌ಐಒ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2017, 9:10 IST
Last Updated 10 ಮಾರ್ಚ್ 2017, 9:10 IST

ಉಡುಪಿ: ಅಮೆರಿಕದಲ್ಲಿರುವ ಭಾರ ತೀಯ ಪ್ರಜೆಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿ ಸ್ಟೂಡೆಂಟ್‌ ಇಸ್ಲಾಮಿಕ್ ಆರ್ಗನೈಸೇಷನ್‌ ಸಂಘಟ ನೆಯ ಸದಸ್ಯರು ನಗರದ ಸರ್ವೀಸ್ ಬಸ್ ನಿಲ್ದಾಣದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರಾದ ನಂತರ ಅಲ್ಲಿ ಜನಾಂಗೀಯ ದಾಳಿಗಳು ಹೆಚ್ಚಾಗಿವೆ. ಅನ್ಯ ದೇಶದ ಪ್ರಜೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗುತ್ತಿದೆ. ಕಪ್ಪು– ಬಿಳುಪು ತಾರತಮ್ಯ, ಹಿಯಾಳಿಕೆ ಹೆಚ್ಚಾಗಿದ್ದು ಜನರು ಭೀತಿಯಲ್ಲಿ ಬದುಕುವಂತಾಗಿದೆ.

ಟ್ರಂಪ್ ಅವರ ಹೇಳಿಕೆಗಳು ದಾಳಿಕೋರ ರಿಗೆ ಉತ್ತೇಜನ ನೀಡುತ್ತಿವೆ. ಇನ್ನಾದರೂ ಇಂತಹ ದಾಳಿಗಳನ್ನು ನಿಲ್ಲಿಸಬೇಕು. ಭಾರತ ಸರ್ಕಾರ ದೇಶದ ಪ್ರಜೆಗಳ ರಕ್ಷಣೆಗೆ ಮುಂದಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಭಾರತೀಯ ಮೂಲದ ಎಂಜಿನಿ ಯರ್ ಶ್ರೀನಿವಾಸ ಕೊಚಿಭೊಟ್ಲ ಅವ ರನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ದಾಳಿ ಕೋರ ಗುಂಡಿಕ್ಕುವ ಮೊದಲು ‘ದೇಶ ಬಿಟ್ಟು ತೊಲಗು’ ಎಂದು ಕೂಗಿದ್ದ. ಆ ನಂತರ ಹರ್ನೀಶ್ ಪಟೇಲ್‌ ಎಂಬುವರ ಮೇಲೆ ಸಹ ಗುಂಡಿನ ದಾಳಿ ನಡೆದಿದೆ. ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯಗಳು ನಡೆದಿವೆ ಎಂಬುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕಿಲ್ಲ.

ಈ ಹಿಂದೆ ಸಹ ಅಮೆರಿಕದಲ್ಲಿ ಜನಾಂಗೀಯ ದಾಳಿಗಳು ನಡೆಯುತ್ತಿ ದ್ದವು, ಆದರೆ ಟ್ರಂಪ್‌ ಅಧ್ಯಕ್ಷರಾದ ನಂತರ ಅವು ಹೆಚ್ಚಾಗಿವೆ. ಅಮೆರಿಕ ಒಂದು ದೊಡ್ಡ ನಾಗರಿಕ ದೇಶ ಎಂಬ ಭ್ರಮೆ ಈಗ ಕಳಚುತ್ತಿದ್ದು ಅದರ ನಿಜ ವಾದ ಮುಖ ಈಗ ಬಯಲಾಗುತ್ತಿದೆ. ಗಡಿ, ದೇಶ, ಭಾಷೆ ಒಂದು ಕಡೆಯಾದರೆ ಮಾನವೀಯ ಮೌಲ್ಯಗಳನ್ನು ಉಳಿಸ ಬೇಕಾದದ್ದು ಅದಕ್ಕಿಂತ ಮುಖ್ಯವಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಜಿ. ಶೋಯಬ್ ಮಲ್ಪೆ ಹೇಳಿದರು.

ಯಾಸೀನ್ ಕೋಡಿಬೆಂಗ್ರೆ ಮಾತ ನಾಡಿ, ನಿರ್ದಿಷ್ಟ ಸಮುದಾಯವೊಂದರ ವಿರುದ್ಧ ಟ್ರಂಪ್ ಅವರು ಕಿಡಿಕಾರಿದ್ದೇ ಇಂತಹ ಘಟನೆಗಳು ನಡೆಯಲು ಕಾರಣವಾಗಿದ್ದು, ದಾಳಿಕೋರರಿಗೆ ನೈತಿಕ ಬೆಂಬಲ ನೀಡಿದಂತಾಗಿದೆ. ಅಮೆರಿಕ ದಲ್ಲಿರುವ ಭಾರತೀಯರಿಗೆ ಮಾನಸಿಕ ಕಿರುಕುಳ ಸಹ ನೀಡಲಾಗುತ್ತಿದೆ.

ಇಷ್ಟೆಲ್ಲಾ ಘಟನೆಗಳು ನಡೆದರೂ ಭಾರತ ಸರ್ಕಾರ ತನ್ನ ಪ್ರಜೆಗಳ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜನಾಂಗೀಯ ದಾಳಿ ನಿಲ್ಲಿ ಸುವಂತೆ ಅಮೆರಿಕದ ಮೇಲೆ  ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಎಂ. ಬಿಲಾಲ್‌, ಶಾರುಖ್‌ ತೀರ್ಥಹಳ್ಳಿ, ಅವುಸಾಫ್ ಮಲ್ಪೆ, ಅಫ್ವಾನ್‌ ಹೂಡೆ, ಸಲಾಹುದ್ದೀನ್ ಹೂಡೆ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.