ADVERTISEMENT

‘ಇಲಾಖೆ ನಡಿಗೆ ರೈತರ ಬಾಗಿಲಿಗೆ’

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 8:45 IST
Last Updated 12 ಜುಲೈ 2017, 8:45 IST

ಕಾರ್ಕಳ: ಮುಂಡ್ಕೂರಿನಲ್ಲಿ ಇತ್ತೀಚೆಗೆ ಉಡುಪಿ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಸಹಯೋಗದಲ್ಲಿ ‘ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ’ ಎಂಬ ಕಾರ್ಯಕ್ರಮ ನಡೆಯಿತು. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಗೋಪಾಲ ಮೂಲ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಕೃಷಿ ಇಲಾಖೆಯಿಂದ ರೈತರು ಅವಶ್ಯವಿರುವ ಉಪಯುಕ್ತ ಮಾಹಿತಿ ಪಡೆದು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ಮುಂಡ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶುಭಾ ಪಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ ರಾಧಾ ಕಿಣಿ, ಜಯ ಕೊಟ್ಯಾನ್ ಹಾಗೂ ಬೊರ್ಗಗಲ್‌ಗುಡ್ಡೆ ರೈತ ಶಕ್ತಿ ಗುಂಪು ಇವರನ್ನು ಸನ್ಮಾನಿಸಲಾಯಿತು. ಫಲಾನುಭವಿಗಳಿಗೆ ಮಿನಿಟ್ರಾಕ್ಟರ್ ಮತ್ತು ಟಿಲ್ಲರ್‌ಗಳನ್ನು ವಿತರಿಸಲಾಯಿತು.

ಬ್ರಹ್ಮಾವರ ಕೃಷಿ  ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಧನಂಜಯ, ಸಹಾಯಕ ಕೃಷಿ ನಿರ್ದೇಶಕ ಜಯಪ್ರಕಾಶ್, ಸಹಾಯಕ ತೋಟಗಾರಿಕ ನಿರ್ದೇಶಕ ಶ್ರೀನಿವಾಸ್, ಕೃಷಿ ಸಹಾಯಕ ಅಧಿಕಾರಿ ಮಧುರಾ ರೈತರಿಗೆ ಸೂಕ್ತ ಮಾಹಿತಿ ನೀಡಿದರು.

ADVERTISEMENT

ಬೆಳ್ಮಣ್ ತಾಲ್ಲೂಕು ಪಂಚಾಯಿತಿ ಸದಸ್ಯೆ ಆಶಾದೇವೇಂದ್ರ ಶೆಟ್ಟಿ, ಇನ್ನಾ ಪಂಚಾಯಿತಿ ಉಪಾಧ್ಯಕ್ಷ ಕುಶಾ ಆರ್. ಮೂಲ್ಯ, ರಾಧಕೃಷ್ಣ ಶೆಟ್ಟಿ, ರಮೇಶ್ ಉಳ್ಳಗಡ್ಡೆ, ಆತ್ಮ ಯೋಜನಾಧಿಕಾರಿ ಚೈತ್ರಾ, ಉಮಾ ಎಳ್ಳಾರೆ, ಅರಣ್ಯ ಇಲಾಖೆಯ ಅಧಿಕಾರಿ ಪುಟ್ಟಣ್ಣ, ಕೃಷಿ ಇಲಾಖೆಯ ಅನುವುಗಾರ ಪ್ರಭಾಕರ್ ಶೆಟ್ಟಿ ಮುಂಡ್ಕೂರು, ಪ್ರಗತಿಪರ ಕೃಷಿಕ ಉಪೇಂದ್ರ ನಾಯಕ್  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.