ADVERTISEMENT

ಉತ್ತಮ ಕಾರ್ಯದಿಂದ ಯಶಸ್ಸು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2017, 9:05 IST
Last Updated 30 ಆಗಸ್ಟ್ 2017, 9:05 IST
ಬ್ರಹ್ಮಾವರ ಬಾರ್ಕೂರಿನ ಪಟ್ಟಾಭಿರಾಮಚಂದ್ರ ದೇವಸ್ಥಾನದಲ್ಲಿ ಈಚಗಎೆಬಾರ್ಕೂರು ಮಹಾ ಸಂಸ್ಥಾನದ ಡಾ.ವಿಶ್ವಸಂತೋಷ ಭಾರತೀ ಸ್ವಾಮೀಜಿ ಧಾರ್ಮಿಕ ಪ್ರವಚನ ನೀಡಿದರು.
ಬ್ರಹ್ಮಾವರ ಬಾರ್ಕೂರಿನ ಪಟ್ಟಾಭಿರಾಮಚಂದ್ರ ದೇವಸ್ಥಾನದಲ್ಲಿ ಈಚಗಎೆಬಾರ್ಕೂರು ಮಹಾ ಸಂಸ್ಥಾನದ ಡಾ.ವಿಶ್ವಸಂತೋಷ ಭಾರತೀ ಸ್ವಾಮೀಜಿ ಧಾರ್ಮಿಕ ಪ್ರವಚನ ನೀಡಿದರು.   

ಬಾರ್ಕೂರು(ಬ್ರಹ್ಮಾವರ) : ‘ಹುಳುಕನ್ನು ಹುಡುಕಿ ಮಾತನಾಡುವುದರ ಬಗ್ಗೆ ಚಿಂತಿಸದೆ ಉತ್ತಮ ಕಾರ್ಯದಲ್ಲಿ ತೊಡಗಿದರೆ ಅದರ ಸಂಪೂರ್ಣ ಫಲ ನಮಗೆ ದೊರೆಯುತ್ತದೆ’ ಎಂದು ಬಾರ್ಕೂರು ಮಹಾ ಸಂಸ್ಥಾನದ ಡಾ.ವಿಶ್ವಸಂತೋಷ ಭಾರತೀ ಸ್ವಾಮೀಜಿ ಹೇಳಿದರು.

ಬಾರ್ಕೂರು ಪಟ್ಟಾಭಿರಾಮಚಂದ್ರ ದೇವಸ್ಥಾನದಲ್ಲಿ ಭಾನುವಾರ ೫೦ನೇ ವರ್ಷದ ಸಂಭ್ರಮಾಚರಣೆಯ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ನೀಡಿ ಮಾತನಾಡಿದರು.

ನಮ್ಮ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗಳ ಬಗ್ಗೆ ಒಂದಿಷ್ಟು ಮಾರ್ಗದರ್ಶನ ಪಡೆಯುವ ಸಲುವಾಗಿ ಧಾರ್ಮಿಕ ಪ್ರವಚನಗಳನ್ನು ಏರ್ಪಡಿಸಲಾಗುತ್ತದೆ. ಭಗವಂತನನ್ನು ಒಲಿಸಿಕೊಳ್ಳಲು ಭಕ್ತಿ ಮಾರ್ಗ, ಕರ್ಮ ಮಾರ್ಗ ಮತ್ತು ಜ್ಞಾನ ಮಾರ್ಗ ಮೂಲಕ ಸಾಧ್ಯವಿದೆ ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ಸುವರ್ಣ ಮಹೋತ್ಸವ ವರ್ಷದ ಅಧ್ಯಕ್ಷ ಎಂ.ವೆಂಕಟರಮಣ ಭಂಡಾರ್‌ಕರ್, ಕಾರ್ಯದರ್ಶಿ ವೈ.ಮೋಹನ್ ಕಾಮತ್, ಖಚಾಂಚಿ ಸುರೇಶ್ ಪೈ. ಮತ್ತಿತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.