ADVERTISEMENT

ಉತ್ತಮ ಭವಿಷ್ಯಕ್ಕೆ ಇತಿಹಾಸ ಅರಿಯಿರಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 7:10 IST
Last Updated 18 ಏಪ್ರಿಲ್ 2017, 7:10 IST

ಉಡುಪಿ: ‘ಪ್ರಾಚೀನ ಸಾಹಿತ್ಯ ಮತ್ತು ವಸ್ತುಗಳ ಅಧ್ಯಯನದಿಂದ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಲು ಸಾಧ್ಯ ವಿದೆ’ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.ಉಡುಪಿಯ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಭಾರತೀಯ ಪ್ರಾಚೀನ ವಿಜ್ಞಾನ ಮತ್ತು ಪುರಾತತ್ವ ಇಲಾಖೆಯ 9ನೇ ಅಖಿಲ ಭಾರತ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

‘ಹಿಂದೆ ಏನೆಲ್ಲಾ ನಡೆದಿತ್ತು, ಮುಂದೆ ಯಾವ ರೀತಿಯ ಬದಲಾವಣೆ ಆಗಬ ಹುದು ಎಂಬುವುದರ ಬಗ್ಗೆ ಸ್ಪಷ್ಟ ಕಲ್ಪನೆ ಇರಬೇಕು. ಆಗ ಮಾತ್ರ ಉತ್ತಮ ಭವಿಷ್ಯವನ್ನು ನಮ್ಮದಾಗಿಸಿಕೊಳ್ಳಬ ಹುದು’ ಎಂದರು.‘ಭವಿಷ್ಯ ಮತ್ತು ಭೂತಕಾಲದ ಬಗ್ಗೆ ನಾವು ಯೋಚಿಸುತ್ತಿಲ್ಲ, ಕೇವಲ ವರ್ತ ಮಾನ ಕಾಲದ ಬಗ್ಗೆ ಮಾತ್ರ ಚಿಂತಿಸುತ್ತಿದ್ದೇವೆ. ಇದು ಇತಿಹಾಸದ ಸಂಶೋಧನೆ ಮತ್ತು ಅಧ್ಯಯನಕ್ಕೆ ತೊಡ ಕಾಗಿದೆ’ ಎಂದು ಅಭಿಪ್ರಾಯಪಟ್ಟರು.

ಇತಿಹಾಸ ಸಂಶೋಧಕ ಪುಂಡಿ ಕಾಯಿ ಗಣಪಯ್ಯ ಭಟ್‌ ಮಾತನಾಡಿ, ‘ಇಂದು ಪ್ರಾಚೀನ ವಿಜ್ಞಾನದ ಅವಗಣನೆ ಮತ್ತು ವೈಭವೀಕರಣ ಆಗುತ್ತಿದೆ. ಇದು ತಪ್ಪು. ನೈಜವಾದ ಪ್ರಾಚೀನ ವಿಷಯಗಳ ಬಗ್ಗೆ ಅಧ್ಯಯನ ಆಗಬೇಕು’ ಎಂದರು.‘ಪ್ರಸ್ತುತ ಇತಿಹಾಸ ಅಧ್ಯಯನ ಕಾವಲು ದಾರಿಯಲ್ಲಿದ್ದು, ಉತ್ತಮ ಕೌಶಲವುಳ್ಳ ವಿದ್ಯಾರ್ಥಿಗಳು ಈ ಕ್ಷೇತ್ರಕ್ಕೆ ಬರುತ್ತಿಲ್ಲ. ಅನೇಕ ಕಡೆಗಳಲ್ಲಿ ಇತಿಹಾ ಸದ ವಿಷಯ ಮುಚ್ಚುವ ಸ್ಥಿತಿಯಲ್ಲಿದೆ’ ಎಂದು ಬೇಸರ ವ್ಯಕ್ತಪಡಿಸಿದರು. 

ADVERTISEMENT

ಶ್ರೀಶೈಲಂ ತೆಲುಗು ವಿಶ್ವವಿದ್ಯಾಲ ಯದ ಡಾ.ಪಿ. ಚೆನ್ನಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.ಭಾರತೀಯ ಪ್ರಾಚೀನ ವಿಜ್ಞಾನ ಮತ್ತು ಪುರಾತತ್ವ ಇಲಾಖೆಯ ಅಧ್ಯಕ್ಷ ಡಾ.ಟಿ. ಸತ್ಯಮೂರ್ತಿ, ಚೆನ್ನೈನ ಭಾರತೀಯ ಪ್ರಾಚ್ಯವಸ್ತು ವಿಜ್ಞಾನ ಪರಿ ಷ್ಠಾನದ ಅಧ್ಯಕ್ಷ ರವಿ ಶ್ಯಾಂ, ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯದರ್ಶಿ ಕೆ. ಗಣೇಶ್‌ ರಾವ್‌, ಡಾ.ಎಂ.ಡಿ. ಸಂಪತ್‌ ಉಪಸ್ಥಿತರಿದ್ದರು.ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಎನ್‌.ನಾಗರಾಜ ಬಲ್ಲಾಳ್‌ ಸ್ವಾಗತಿ ಸಿದರು, ಪ್ರೊ. ಮುರುಗೇಶಿ ನಿರೂಪಿ ಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.