ADVERTISEMENT

‘ಉಪ್ಪು ನೀರನ್ನು ಸಿಹಿ ನೀರಾಗಿ ಪರಿವರ್ತಿಸಿ’

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2017, 4:52 IST
Last Updated 4 ಫೆಬ್ರುವರಿ 2017, 4:52 IST
ಉಡುಪಿ: ಉಪ್ಪು ನೀರನ್ನು ಸಿಹಿ ನೀರಾಗಿ ಪರಿವರ್ತಿಸಿ ಬಳಸುವ ಮೂಲಕ ಕರಾ ವಳಿ ಜಿಲ್ಲೆಗಳು ಎದುರಿಸುತ್ತಿರುವ ಕುಡಿ ಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ನಗರಾ ಭಿವೃದ್ಧಿ ಸಚಿವ ರೋಶನ್ ಬೇಗ್‌ ಅಭಿಪ್ರಾಯಪಟ್ಟರು.
 
ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರ ವಾರ ನಡೆದ ಸಭೆಯಲ್ಲಿ ಅವರು ಮಾತ ನಾಡಿ, ಉಪ್ಪು ನೀರನ್ನು ಸಿಹಿ ನೀರಾಗಿ ಪರಿವರ್ತಿಸಿ ಬಳಸುವ ಹಲವು ದೇಶಗ ಳಿವೆ. ಅಂತಹ ತಂತ್ರಜ್ಞಾವನ್ನು ನಾವು ಸಹ ಪರಿಚಯಿಸಬೇಕು. ಅಸಮರ್ಪಕ ಒಳ ಚರಂಡಿ ವ್ಯವಸ್ಥೆ ಹಲವಾರು ಕಾಯಿ ಲೆಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ಎಲ್ಲ ನಗರಗಳಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಅಮೃತ್ ಯೋಜನೆಯಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
 
ಮುಂದೆಯೂ ಕಾಂಗ್ರೆಸ್‌ ಸರ್ಕಾರ: ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇಂತಹ ಸುಳ್ಳು ಸುದ್ದಿ ಗಳಿಗೆ ಕಾರ್ಯಕರ್ತರು ಕಿವಿಗೊಡದೆ ಪಕ್ಷದ ಸಂಘಟನೆ ಕೆಲಸ ಮಾಡಿ. ಮುಂದೆ ಯೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಸ್ತಿತ್ವಕ್ಕೆ ಬರಲಿದೆ. ನೋಟು ರದ್ದತಿ ಯಿಂದ ಜನರು ತೀವ್ರ ತೊಂದರೆ ಅನುಭ ವಿಸುತ್ತಿದ್ದಾರೆ. ಹಣ ಬದಲಾಯಿಸಲು ಬ್ಯಾಂಕ್ ಎದುರು ಸಾಲಿನಲ್ಲಿ ನಿಂತ 100 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಬಿಜೆಪಿಯ ಜನ ವಿರೋಧಿ ನೀತಿ ಕಾಂಗ್ರೆಸ್‌ಗೆ ವರವಾಗಲಿದೆ ಎಂದರು.
 
ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹಮೂರ್ತಿ, ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್‌, ಉಡುಪಿ ಬ್ಲಾಕ್‌ ಕಾಂ ಗ್ರೆಸ್ ಅಧ್ಯಕ್ಷ ಸತೀಶ್ ಅಮಿನ್ ಪಡುಕೆರೆ, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ನಿತ್ಯಾನಂದ ಶೆಟ್ಟಿ, ಕಾಂಗ್ರೆಸ್‌ ಜಿಲ್ಲಾ ಮಹಿ ಳಾ ಘಟಕದ ಅಧ್ಯಕ್ಷೆ ವೆರೋನಿಕ ಕರ್ನೆ ಲಿಯೊ, ಚಂದ್ರಿಕಾ ಶೆಟ್ಟಿ ಉಪಸ್ಥಿತರಿದ್ದರು.
 
**
ಬಿಜೆಪಿಯವರು ದೇಶ ಭಕ್ತಿಯನ್ನು ಅಪ್ಪನ ಮನೆಯ ಸ್ವತ್ತು ಎಂದುಕೊಂಡಿದ್ದಾರೆ, ನಮಗೂ ಈ ದೇಶದ ಬಗ್ಗೆ ಭಕ್ತಿ, ಗೌರವ ಇದೆ.
-ರೋಶನ್ ಬೇಗ್‌, ಸಚಿವ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.