ADVERTISEMENT

‘ಕರಾವಳಿ ಸಮಸ್ಯೆಗೆ ಸ್ಪಂದಿಸಲು ಸರ್ಕಾರಕ್ಕೆ ಆಸಕ್ತಿಯಿಲ್ಲ’

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 7:08 IST
Last Updated 18 ಏಪ್ರಿಲ್ 2017, 7:08 IST

ಕುಂದಾಪುರ: ‘ಪಕ್ಷದ ಕಚೇರಿಗಳು ಸಮಾಜದಲ್ಲಿ ನೊಂದ, ಶೋಷಿತರ, ಅಶಕ್ತರ ಹಾಗೂ ಜನಸಾಮಾನ್ಯರ ಸಂಕಷ್ಟಗಳನ್ನು ಪರಿಹರಿಸುವ ಆಶ್ರಯ ತಾಣಗಳಾಗಿರಬೇಕು. ಬೂತ್‌ ಮಟ್ಟದ ಕಾರ್ಯಕರ್ತರ ಜೋಡಣೆ ಹಾಗೂ ಸಂಘಟನೆಯ ನಿಯಂತ್ರಣ ಪಕ್ಷದ ಕಚೇರಿಯಿಂದ ಆಗಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಇಲ್ಲಿಗೆ ಸಮೀಪದ ತೆಕ್ಕಟ್ಟೆಯ ಪುರಾಣಿಕ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ಬಿಜೆಪಿಯ ನೂತನ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಲು ರಾಜ್ಯ ಸರ್ಕಾರಕ್ಕೆ ಆಸಕ್ತಿಯಿಲ್ಲದೆ, ಅಸಡ್ಡೆ ಧೋರಣೆಯನ್ನು ಹೊಂದಿದೆ. ಮರಳು ಗಾರಿಕೆ ಹಾಗೂ 94ಸಿ ಯಂತಹ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಚಿಂತನೆ ಮಾಡದ ಕಾಂಗ್ರೆಸ್‌ ಮುಖಂಡರು, ಕೇಂದ್ರ ಸರ್ಕಾರದ ಸಾಧನೆಗಳನ್ನು ತಮ್ಮದೆಂದು ಹೇಳಿಕೊಳ್ಳುವ ಸಣ್ಣ ರಾಜಕಾರಣ ಮಾಡುತ್ತಾ ಕಾಲ ಕಳೆಯು ತ್ತಿದ್ದಾರೆ’ ಎಂದು ಆರೋಪಿಸಿದರು.

\ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಮಾತನಾಡಿ, ‘ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು, ಆಯ್ಕೆಯಾದ ಬಳಿಕ ತಾವು ಭಾಗವಹಿಸುವ ಶಾಸನ ಸಭೆಗ ಳಲ್ಲಿನ ಜನಪರ ಸಮಸ್ಯೆಗಳ ಕುರಿತು ಧ್ವನಿ ಎತ್ತುವ ಹಾಗೂ ಸಮಸ್ಯೆಗೊಂದು ಪರಿ ಹಾರ ಕಂಡುಕೊಳ್ಳಲು ಪ್ರಯತ್ನಿಸುವ ಮನೋಭಾವವನ್ನು ರೂಢಿಸಿಕೊ ಳ್ಳಬೇಕು. ಆದರೆ, ಇಲ್ಲಿ ಬೇರೆಯೇ ಆಗುತ್ತಿದೆ. ಕೆಲವು ತಿಂಗಳಿಂದ ಮರಳು ಸಮಸ್ಯೆಯಿಂದಾಗಿ ಜಿಲ್ಲೆಯ ವ್ಯವಹಾರ ಸ್ಥಗಿತಗೊಂಡು, ಜನಸಾಮಾನ್ಯರ ಬದು ಕಿನ ಮೇಲೆ ಪ್ರಹಾರವಾಗುತ್ತಿದ್ದರೂ, ಸಮಸ್ಯೆಯನ್ನು ಪರಿಹರಿಸುವ ಕುರಿತು ಯಾರಲ್ಲಿಯೂ ಇಚ್ಛಾಶಕ್ತಿಯೇ ಕಾಣು ತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ತೆಕ್ಕಟ್ಟೆ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಎಂ.ರಾಜೀವ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದಿನಕರ ಹೆರ್ಗ, ರೈತ ಮೋರ್ಚಾ ಜಿಲ್ಲಾ ಉಪಾ ಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಯುವ ಮೋರ್ಚಾ ರಾಜ್ಯಕಾರ್ಯಕಾರಿಣಿ ಸದಸ್ಯ ಮಹೇಶ್ ಪೂಜಾರಿ, ಹಿಂದುಳಿದ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಠ್ಠಲ ಪೂಜಾರಿ, ಎಸ್‌.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗೋಪಾಲ ಕಳಿಂಜೆ, ಕುಂದಾಪುರ ಮಂಡಲ ಪ್ರಧಾನ ಕಾರ್ಯದರ್ಶಿ ಶಂಕರ ಅಂಕ ದಕಟ್ಟೆ, ಪಕ್ಷದ ಪ್ರಮುಖರಾದ ಬೆಳ್ವೆ ವಸಂತ ಕುಮಾರ್ ಶೆಟ್ಟಿ, ಶ್ರೀನಿವಾಸ ಕುಂದರ್‌, ಕೃಷ್ಣ ನಾಯ್ಕ್, ರತ್ನಾಕರ ಶೆಟ್ಟಿ, ನವೀನ್ ಹೆಗ್ಡೆ ಶಾನಾಡಿ, ಮೇರ್ಡಿ ಸತೀಶ್ ಹೆಗ್ಡೆ, ಉದ್ಯಮಿ ಮೋಹನದಾಸ್ ಶೆಟ್ಟಿ ಮುಂಬೈ ಇದ್ದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ. ಕಿಶೋರ್ ಕುಮಾರ್ ಪ್ರಾಸ್ತಾವಿಕ ಮಾತ ನಾಡಿದರು, ಪ್ರಶಾಂತ್ ತೆಕ್ಕಟ್ಟೆ ನಿರೂಪಿ ಸಿದರು.ಹಿಂದುಳಿದ ಮೋರ್ಚಾ ಜಿಲ್ಲಾ ಧ್ಯಕ್ಷ ರಾಜೇಶ್ ಕಾವೇರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.