ADVERTISEMENT

ಕುಂದಾಪುರ: ಸಾಲ ಮನ್ನಾ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 7:33 IST
Last Updated 26 ಜುಲೈ 2017, 7:33 IST

ಕುಂದಾಪುರ :‘ರಾಜ್ಯ ಸರ್ಕಾರ ಮಾಡಿರುವ ಸಾಲ ಮನ್ನಾ ರೀತಿಯಲ್ಲಿ ಕೇಂದ್ರ ಸರ್ಕಾರ ಕೂಡಲೇ ರೈತರ ಸಾಲ ಮನ್ನಾ ಮಾಡುವ ತೀರ್ಮಾನ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಕುಂದಾಪುರದ ಬ್ಲಾಕ್‌ ಯುವ ಕಾಂಗ್ರೆಸ್‌ ಸಮಿತಿಯ ಕಾರ್ಯಕರ್ತರು ಇಲ್ಲಿನ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಶಾಖೆಯ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ ಮಾತನಾಡಿ, ‘ ಬಡವರ ಬಗ್ಗೆ ಕಾರ್ಯಕ್ರಮ ರೂಪಿಸದ ಮೋದಿ ಸರ್ಕಾರ ದೇಶದ ದೊಡ್ಡ ಉದ್ಯಮಿಗಳ ಸುಮಾರು ₹66ಸಾವಿರ ಕೋಟಿ  ಸಾಲ ಮನ್ನಾ ಮಾಡಿದೆ. ಆದರೆ ಇದೇ ಸರ್ಕಾರದ ಹಣಕಾಸು ಸಚಿವ ಅರುಣ್ ಜೇಟ್ಲಿ ರೈತರ ಸಾಲ ಮನ್ನಾ ಮಾಡಲು ಒಂದು ಪೈಸೆ ನೀಡಲ್ಲ ಎನ್ನುವ ಮೂಲಕ ತಾವು ಬಂಡವಾಳಶಾಹಿಗಳ ಪರವೇ ಹೊರತು ರೈತ ಪರ ಅಲ್ಲ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ’ ಎಂದರು.

ಸಭೆಯಲ್ಲಿ ಮಾತನಾಡಿದ ಪಕ್ಷದ ಪ್ರಮುಖರು, ‘ರೈತರ ಪರವಾದ ನಿಜವಾದ ಕಾಳಜಿ ಬಿಜೆಪಿ ಪಕ್ಷದ ಮುಖಂಡರಿಗೆ ಇದ್ದಲ್ಲಿ, ರೈತರ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಿ’ ಎಂದರು.

ADVERTISEMENT

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಕಾಸ ಹೆಗ್ಡೆ, ಎ.ಪಿ.ಎಂ.ಸಿ ಉಪಾಧ್ಯಕ್ಷ ಗಣೇಶ್ ಸೇರುಗಾರ್, ಜಿಲ್ಲಾ ಯುವ ಕಾಂಗ್ರೇಸ್‌  ಅಧ್ಯಕ್ಷ ವಿಶ್ವಾಸ್ ಅಮೀನ್, ಪ್ರಧಾನ ಕಾರ್ಯದರ್ಶಿ ವಕ್ವಾಡಿ ರಮೇಶ ಶೆಟ್ಟಿ,  ಬ್ಲಾಕ್ ಕಾಂಗ್ರೇಸ್‌ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕಾರ್ಯದರ್ಶಿ ಕೋಣಿ ನಾರಾಯಣ ಆಚಾರ್, ಶಿವಾನಂದ ಕೆ,  ಇಂಟಕ್ ಅಧ್ಯಕ್ಷ ಲಕ್ಷ್ಮಣ ಶೆಟ್ಟಿ, ನಗರ ಕಾಂಗ್ರೇಸ್ ಕಾರ್ಯದರ್ಶಿ ವಿನೋದ್ ಕ್ರಾಸ್ತಾ, ಪುರಸಭಾ ಸದಸ್ಯರಾದ ಪ್ರಭಾಕರ ಕೋಡಿ, ಚಂದ್ರಶೇಖರ ಖಾರ್ವಿ, ಚಂದ್ರ ಅಮೀನ್, ಕೇಶವ ಭಟ್, ಉಮೇಶ್, ಮಹಿಳಾ ಕಾಂಗ್ರೇಸ್‌ನ ರೇವತಿ ಶೆಟ್ಟಿ, ಆಶಾ ಕರ್ವೆಲೊ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.