ADVERTISEMENT

ಕೈ ಕೊಟ್ಟ ಕೃಷಿ ಯಂತ್ರಧಾರೆ ನಿರ್ವಾಹಕ ನಿಂತ ಉಳುಮೆ ಯಂತ್ರ : ಹಾಳಾದ ನೇಜಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2017, 6:41 IST
Last Updated 17 ಡಿಸೆಂಬರ್ 2017, 6:41 IST

ಹೆಬ್ರಿ : ಕಾರ್ಕಳ ತಾಲ್ಲೂಕಿನ ಕಡ್ತಲ ಗ್ರಾಮದ ಸಿರಿಬೈಲಿನಲ್ಲಿರುವ ಹಲವು ಕೃಷಿಕರು ಸೇರಿ ಗದ್ದೆ ಉಳುಮೆ ಮಾಡಲು ಅಜೆಕಾರು ಗುಡ್ಡೆಯಂಗಡಿಯಲ್ಲಿ ರಾಜ್ಯ ಸರ್ಕಾರ ಕೃಷಿ ಯಂತ್ರಧಾರೆ ಯೋಜನೆಯ ಗದ್ದೆ ನಾಟಿ ಯಂತ್ರವನ್ನು ಬಾಡಿಗೆಗೆ ಪಡೆದಿದ್ದು ಯಂತ್ರ ನಿರ್ವಾಹಕ ಯಂತ್ರವನ್ನು ಸಿರಿಬೈಲಿನ ಗದ್ದೆಗೆ ತಂದು ನಾಟಿ ಆರಂಭಿಸಿ ಸ್ವಲ್ಪ ಹೊತ್ತಿನ ಬಳಿಕ ಯಂತ್ರ ಹಾಳಾಯಿತು ಎಂದು ಗದ್ದೆಯಲ್ಲೇ ನಿಲ್ಲಿಸಿ ಹೋದವರು ಮತ್ತೇ ನಾಟಿಗೆ ಬರದೆ ರೈತರಿಗೆ ತೀವ್ರ ತೊಂದರೆ ಮಾಡಿದ್ದಾರೆ.

ಪ್ರಶ್ನಿಸಿದರೆ ‘ಯಂತ್ರ ಸರಿಯಿಲ್ಲ’ ಎಂಬ ಕಾರಣ ನೀಡುತ್ತಾರೆ. ಸರಿಯಾದ ಮಾಹಿತಿಯೇ ನೀಡುವುದಿಲ್ಲ ಎಂದು ಸಿರಿಬೈಲಿನ ಕೃಷಿಕರು ದೂರಿದ್ದಾರೆ.

ಶುಕ್ರವಾರ ಪತ್ರಿಕೆಗೆ ಮಾಹಿತಿ ನೀಡಿದ ಕೃಷಿಕರು, ‘ಯಂತ್ರಧಾರೆ ಅಜೆಕಾರು ಘಟಕದ ಅಧಿಕಾರಿಗಳನ್ನು ಪ್ರಶ್ನಿಸಿದರೂ ನಮಗೆ ಸರಿಯಾಗಿ ಸ್ಪಂದಿಸಿಲ್ಲ, ತೆಗೆದಿರಿಸಿದ ನೇಜಿ ಹಾಳಾಗಿದೆ. ಕಾದು ಕಾದು ಮತ್ತೇ ನಾವೇ ಕೈ ನಾಟಿ ಮಾಡಿದ್ದೇವೆ. ರಾಜ್ಯ ಸರ್ಕಾರ ರೈತರಿಗೆ ಅತ್ಯುತ್ತಮವಾಗಿ ಪ್ರಯೋಜನಕ್ಕೆ ಬರಲಿ ಎಂದು ಯೋಜನೆ ರೂಪಿಸಿದರೇ ಅಧಿಕಾರಿಗಳು ಮತ್ತು ಏಜೆನ್ಸಿಯವರು ಅಸಡ್ಡೆ ತೋರಿ ಕೃಷಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ದೂರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.