ADVERTISEMENT

ಗುರಿ ಸಾಧಿಸಲು ಶ್ರಮ ಅಗತ್ಯ: ಐಸಾಕ್‌ ಲೋಬೊ

​ಪ್ರಜಾವಾಣಿ ವಾರ್ತೆ
Published 24 ಜುಲೈ 2014, 4:36 IST
Last Updated 24 ಜುಲೈ 2014, 4:36 IST

ಉಡುಪಿ: ‘ವಿದ್ಯಾರ್ಥಿಗಳು ಬಾಲ್ಯ ದಲ್ಲಿಯೇ ತಮ್ಮ ಜೀವನದ ಗುರಿಯನ್ನು ನಿರ್ಧರಿಸಬೇಕು’ ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ  ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಕೆಥೊಲಿಕ್ ಸಭಾ ಹಾಗೂ ಉಡುಪಿ ಧರ್ಮಪ್ರಾಂತ್ಯದ ಸಶಕ್ತ ಸಮುದಾಯ ಸೇವಾ ಟ್ರಸ್ಟ್‌ ಸಂಯುಕ್ತವಾಗಿ ಕಲ್ಯಾಣ ಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಸಭಾಂ ಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಅಭಿ ನಂದನೆ ಹಾಗೂ ಸರ್ಕಾರಿ ಉನ್ನತ ಸೇವೆ ಯಲ್ಲಿ ಕ್ರೈಸ್ತ ವಿದ್ಯಾರ್ಥಿಗಳಿಗೆ ಒಲವು ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಹೊಂದಿದಾಗ ಅದನ್ನು ತಲುಪಲು ನಿರಂತರ ಶ್ರಮವನ್ನು ವಹಿಸುತ್ತಾರೆ. ಗುರಿ ತಲುಪುವ ವೇಳೆ ಹಲವು ಬಾರಿ ಎಡವಿದರೂ ಕೂಡ ಮತ್ತೆ ಮೇಲೆದ್ದು  ಅಪೇಕ್ಷೆ ಪಟ್ಟ ಯಶಸ್ಸನ್ನು ಗಳಿಸಬಹುದು ಎಂದರು.

ವಿಧಾನಪರಿಷತ್‌ ಸದಸ್ಯ ಐವನ್ ಡಿಸೋಜ ಮಾತನಾಡಿ, ಎಲ್ಲಾ ಸಮುದಾಯದವರ ಅಬಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ನೌಕಾದಳದ ನಿವೃತ್ತ ಕಮಾಂಡರ್ ಕಮೊಡೊರ್ ಜೆರೊಮ್ ಕ್ಯಾಸ್ತಲಿನೊ ಹಾಗೂ ಬೆಂಗಳೂರಿನ ಸಹಾಯಕ ಸಾರಿಗೆ ಆಯುಕ್ತ ಆರ್.ವಿ. ಡಿಸೋಜ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ  ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಮಹತ್ವವನ್ನು ತಿಳಿಸಿದರು.

ಐವನ್ ಡಿಸೋಜಾ, ಮಾನಸ ಸಂಸ್ಥೆಯ ನೂತನ ಅಧ್ಯಕ್ಷ ಹೆನ್ರಿ ಮಿನೇ ಜಸ್, ಕಾರ್ಯದರ್ಶಿ ಅರ್ವಿನ್ ಡಿಸೋಜ ಅವರನ್ನು ಸನ್ಮಾನಿಸ ಲಾಯಿತು. ಉಡುಪಿ ಕುಂದಾಪುರ, ಕಾರ್ಕಳ, ಶಿರ್ವ ಹಾಗೂ ಕಲ್ಯಾಣಪುರ ವಲಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೇಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಉಡುಪಿ ಕೆಥೊಲಿಕ್ ಸಭಾದ ಅಧ್ಯಕ್ಷ ಕಿರಣ್ ಎಲ್. ರಾಯ್ ಕ್ರಾಸ್ತಾ ಅಧ್ಯಕ್ಷತೆ ವಹಿಸಿದ್ದರು. ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನ  ಸ್ಟ್ಯಾನಿ ಬಿ ಲೊಬೊ, ಕೆಥೊಲಿಕ್ ಸಭಾ ನಿರ್ದೇಶಕ ಫರ್ಡಿ ನಾಂಡ್ ಗೊನ್ಸಾಲ್ವಿಸ್, ಕಾರ್ಯಕ್ರಮದ ಸಂಯೋಜಕ ಡಾ. ಜೆರಾಲ್ಡ್ ಪಿಂಟೊ, ಕೆಥೊಲಿಕ್ ಸಭಾ ಧರ್ಮಪ್ರಾಂತ್ಯದ ಕಾರ್ಯದರ್ಶಿ ಮೇರಿ ಡಿಸೋಜಾ, ಕಲ್ಯಾಣಪುರ ವಲಯ ಅಧ್ಯಕ್ಷ ಹ್ಯೂಬರ್ಟ್ ಲೂವಿಸ್, ಘಟಕದ ಅಧ್ಯಕ್ಷೆ ಫೆಲ್ಸಿ ಲೂವಿಸ್, ಸಶಕ್ತ ಸಮು ದಾಯ ಸೇವಾ ಟ್ರಸ್ಟ್‌ನ ವೆರೋನಿಕಾ ಕರ್ನೇಲಿಯೊ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.