ADVERTISEMENT

ಜಾರ್ಜ್‌ ರಾಜೀನಾಮೆಗೆ ಶೋಭಾ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಜುಲೈ 2014, 8:08 IST
Last Updated 27 ಜುಲೈ 2014, 8:08 IST

ಉಡುಪಿ: ‘ಎಗ್ಗಿಲ್ಲದೆ ನಡೆಯುತ್ತಿರುವ ಅತ್ಯಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆ ಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿರುವ ಗೃಹ ಸಚಿವ ಕೆ.ಜೆ. ಜಾರ್ಜ್‌ ಅವರನ್ನು ಈ ಕೂಡಲೇ ಬದಲಾವಣೆ ಮಾಡಿ, ಸಮರ್ಥ ರೊಬ್ಬರನ್ನು ಗೃಹ ಸಚಿವರನ್ನಾಗಿ ನೇಮಕ ಮಾಡಬೇಕು’ ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.

ನಗರದ ಹುತಾತ್ಮ ಸೈನಿಕರ ಯುದ್ಧ ಸ್ಮಾರಕದಲ್ಲಿ ಶನಿವಾರ ನಡೆದ ಕಾರ್ಗಿಲ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಮಾಧ್ಯಮ ಪ್ರತಿ ನಿಧಿಗಳ ಜೊತೆ ಮಾತನಾಡಿದರು. ರಾಜ್ಯ ದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕ ರಣಗಳ ಬಗ್ಗೆ ವಿಧಾಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿದ್ರೆ ಮಾಡುತ್ತಿದ್ದರು. ಗೃಹ ಸಚಿವರು ನಗುತ್ತಿದ್ದರು. ಮಹಿಳೆ ಯರ ರಕ್ಷಣೆಯ ಬಗ್ಗೆ ಈ ಸರ್ಕಾರಕ್ಕೆ ಎಷ್ಟು ಬದ್ಧತೆ ಇದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಈ ಬಗ್ಗೆ ಪ್ರಶ್ನೆ ಕೇಳಿದರೆ ಗಂಭೀರ ಉತ್ತರ ನೀಡುವ ಬದಲು ಉಡಾಫೆಯಾಗಿ ಮಾತನಾಡುವ ಸಿದ್ದರಾಮಯ್ಯ ಅವರಿಗೆ ಧಿಕ್ಕಾರವಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿಯ ನಿರ್ಭಯಾ ಪ್ರಕರಣದ ನಂತರ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಗೆ ತಿದ್ದುಪಡಿ ಮಾಡಿ ಕಾನೂ ನನ್ನು ಕಠಿಣ ಮಾಡಲಾಗಿದೆ. ರಾಜ್ಯ ದಲ್ಲಿಯೂ ಕಠಿಣ ಕಾನೂನು ಜಾರಿಗೆ ತರಬೇಕು. ಅತ್ಯಾಚಾರ ಮಾಡಿದವನಿಗೆ ಕೊಲೆ ಪ್ರಕರಣದ ಆರೋಪಿಗೆ ವಿಧಿಸು ವಷ್ಟು ಶಿಕ್ಷೆ ನೀಡುವಂತೆ ಮಾಡಬೇಕು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವ ರನ್ನು ಒಳಗೊಂಡ ಸಮಿತಿ ರಚಿಸಿ ಮಹಿಳೆ ಯರಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಚುನಾವಣೆಯ ಸಂದರ್ಭದಲ್ಲಿ ಆಧಾರ್‌ ರದ್ಧು ಮಾಡುವುದಾಗಿ ಹೇಳಿ ಈಗ ಆ ಯೋಜನೆ ಮುಂದುವರೆಸಲು ನಿರ್ಧರಿಸಿದ್ದೀರಲ್ಲ ಎಂಬ ಪ್ರಶ್ನೆಗೆ ಉತ್ತರಿ ಸಿದ ಅವರು, ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಆಧಾರ್‌ ಯೋಜನೆಗೆ ಆಧಾ ರವೇ ಇರಲಿಲ್ಲ. ನಾವು ಅದನ್ನು ಪರಿ ಷ್ಕರಣೆ ಮಾಡಿ ಮುಂದುವರೆಸುತ್ತೇವೆ ಎಂದರು.

ಲೋಕಸಭೆಯ ಪ್ರತಿಪಕ್ಷದ ಸ್ಥಾನ ನೀಡಲು ಅವಕಾಶ ಇಲ್ಲ ಎಂದು ಅಟಾರ್ನಿ ಜನರಲ್‌ ವರದಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂವಿ ಧಾನದಲ್ಲಿ ಅವಕಾಶ ಇದ್ದರೆ ಮಾತ್ರ ಆ ಸ್ಥಾನ ಸಿಗಲಿದೆ. ಈ ಹಿಂದೆ ಕಾಂಗ್ರೆಸ್‌ ಅಧಿಕಾರದಲ್ಲಿ ಇದ್ದಾಗ ಶೇ 10ರಷ್ಟು ಸ್ಥಾನಗಳನ್ನು ಯಾವ ಪಕ್ಷಗಳೂ ಗಳಿಸಿರ ಲಿಲ್ಲ. ಆಗಲೂ ಅವರು ಯಾವುದೇ ಪಕ್ಷಕ್ಕೆ ಪ್ರತಿಪಕ್ಷದ ಸ್ಥಾನಮಾನ ನೀಡಿರಲಿಲ್ಲ ಎಂದು ಹೇಳಿದರು.

‘ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತೇವೆ. ಇದಕ್ಕೆ ಪಾಕಿಸ್ತಾನ ಮನ್ನಣೆ ನೀಡಿದರೆ ಒಳ್ಳೆಯದು. ಇಲ್ಲ ಯುದ್ಧವೇ ಬೇಕು ಎಂದರೆ ಅದಕ್ಕೂ ಉತ್ತರ ನೀಡಲು ಸರ್ಕಾರ ಸಿದ್ಧವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.