ADVERTISEMENT

ಡಿಸೆಂಬರ್‌ ಅಂತ್ಯಕ್ಕೆ ಸೇತುವೆ ಪೂರ್ಣ

ಪರಾರಿ ಸೇತುವೆ ಕಾಮಗಾರಿ ವೀಕ್ಷಿಸಿ ಸಚಿವ ಪ್ರಮೋದ್‌ ಮಧ್ವರಾಜ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 6:19 IST
Last Updated 27 ಮಾರ್ಚ್ 2017, 6:19 IST
ಡಿಸೆಂಬರ್‌ ಅಂತ್ಯಕ್ಕೆ ಸೇತುವೆ ಪೂರ್ಣ
ಡಿಸೆಂಬರ್‌ ಅಂತ್ಯಕ್ಕೆ ಸೇತುವೆ ಪೂರ್ಣ   
ಉಡುಪಿ:  ಇಲ್ಲಿನ ಅಮ್ಮುಂಜೆ–ಪೆರಂ ಪಳ್ಳಿ ರಸ್ತೆಯಲ್ಲಿ ಸ್ವರ್ಣಾ ನದಿಗೆ ಅಡ್ಡಲಾಗಿ ₹10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾ ಗುತ್ತಿರುವ ಪರಾರಿ ಸೇತುವೆಯ ಕಾಮ ಗಾರಿಯು 2017ರ ಡಿಸೆಂಬರ್‌ ಅಂತ್ಯ ದೊಳಗೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು. 
 
ಭಾನುವಾರ ಪರಾರಿ ಸೇತುವೆ ಕಾಮ ಗಾರಿಯನ್ನು ವೀಕ್ಷಿಸಿ ಮಾತನಾಡಿದ ಅವರು, ತನ್ನ ಶಾಸಕ ಅವಧಿಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸೇತುವೆಗಳ ಕಾಮಗಾರಿಗಾಗಿ ಒಟ್ಟು ₹77.50 ಕೋಟಿ ಅನುದಾನ ವನ್ನು ಮಂಜೂರು ಮಾಡಲಾಗಿದ್ದು, ಬಹುತೇಕ ಕಾಮಗಾರಿಗಳು ಮುಕ್ತಾ ಯದ ಹಂತದಲ್ಲಿವೆ.

ಪರಾರಿ ಸೇತುವೆ ಪೂರ್ಣಗೊಂಡಲ್ಲಿ ಮಂದಾರ್ತಿಯಿಂದ ಮಣಿಪಾಲಕ್ಕೆ 15 ನಿಮಿಷದಲ್ಲಿ ತಲುಪಬಹುದಾಗಿದೆ. ಕಾಮಗಾರಿಯ ಶೇ 40 ಭಾಗ ಮುಕ್ತಾಯಗೊಂಡಿದ್ದು, ಶೇ 35 ರಷ್ಟು ಮೊತ್ತವನ್ನು ಗುತ್ತಿಗೆದಾರರಿಗೆ ನೀಡಲಾಗಿದೆ. ಕಾಮಗಾರಿಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ ಎಂದರು.
 
ಸೇತುವೆಯ ಉದ್ದ 202.96 ಮೀ. ಇದ್ದು, 7.50 ಮೀ. ಅಗಲವಿದೆ. ಸೇತು ವೆಯ ರಸ್ತೆ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪಡೆಸಿಕೊಳ್ಳುವ ಅವಶ್ಯಕತೆ ಯಿದ್ದು, 1 ತಿಂಗಳೊಳಗೆ ಭೂ ಸ್ವಾದೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಸೇತುವೆಗೆ 74 ಪೈಲ್‌ ಫೌಂಡೇಶನ್‌ ಹಾಕಲಾಗಿದೆ. ಕಾಲಮಿತಿಯೊಳಗೆ ಸೇತುವೆ ಜನರ ಉಪಯೋಗಕ್ಕೆ ಲಭ್ಯವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. 
 
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ಉಮೇಶ್‌ ನಾಯ್ಕ್‌, ನಗರ ಸಭೆ ಸದಸ್ಯ ರಾದ ಜನಾರ್ದನ ಭಂಡಾ ರ್ಕರ್‌, ರಮೇಶ್‌ ಕಾಂಚನ್‌, ಲೋಕೋ ಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್‌ ಚಂದ್ರ ಶೇಖರ್‌, ಡಿ.ವಿ. ಹೆಗ್ಡೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.  
 
***
ನಾನು 2025ರ ವಿಷನ್‌ನಲ್ಲಿ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಬಹುತೇಕ ಕಾರ್ಯಗಳು 2018ರೊಳಗೆ ಪೂರ್ಣಗೊಳ್ಳಲಿವೆ.
ಪ್ರಮೋದ್‌ ಮಧ್ವರಾಜ್‌, ಸಚಿವ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.