ADVERTISEMENT

ನಾಳೆ ಶ್ರೀ ಅಂಬಾ ಭವಾನಿ ಮರಾಠಿ ಸಾಂಸ್ಕೃತಿಕ ಕಲಾ ವೇದಿಕೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 27 ಮೇ 2017, 6:44 IST
Last Updated 27 ಮೇ 2017, 6:44 IST

ಉಡುಪಿ: ಮರಾಠಿ ಸಮುದಾಯದ ಸಾಂಸ್ಕೃತಿಕ ವೈಭವ, ವಿಶಿಷ್ಟ ಆಚರಣೆ ಮತ್ತು ಸಂಪ್ರದಾಯಗಳನ್ನು ಬಿಂಬಿಸುವ ಸಲುವಾಗಿ ಶ್ರೀ ಅಂಬಾ ಭವಾನಿ ಮರಾಠಿ ಸಾಂಸ್ಕೃತಿಕ ಕಲಾ ವೇದಿಕೆಯ ಪರ್ಕಳ ವಲಯ ಸಂಘಟನೆಯನ್ನು ಇದೇ 28 ರಂದು ಉದ್ಘಾಟನೆ ಮಾಡಲಾಗುವುದು ಎಂದು ವೇದಿಕೆಯ ಅಧ್ಯಕ್ಷ ಕೃಷ್ಣನಾಯ್ಕ್ ಮಾರ್ಪಳ್ಳಿ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರ್ಕಳದ ವಿಘ್ನೇಶ್ವರ ಸಭಾ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಉಡುಪಿಯ ತುಳಜಾ ಭವಾನಿ ಜಿಲ್ಲಾ ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಅನಂತ ನಾಯ್ಕ್ ಉದ್ಘಾಟನೆ ಮಾಡುವರು.

ಚೇರ್ಕಾಡಿಯ ಶಾರದಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಂಜು ನಾಥ ನಾಯ್ಕ್ ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿರುವರು. ಸಿಂಡಿಕೇಟ್ ಬ್ಯಾಂ ಕಿನ ಎಸ್‌ಸಿ–ಎಸ್‌ಟಿ ವೆಲ್‌ಫೇರ್ ಅಸೋ ಸಿಯೇಶನ್‌ನ ಮುಖ್ಯಸ್ಥ ರಂಜನ್ ಕೇಲ್ಕರ್, ಕೋಟದ ವಿವೇಕ ಪದವಿ ಪೂರ್ವ ಕಾಲೇಜಿನ ಸಂಜೀವ ನಾಯ್ಕ, ಕುಂಜಿಬೆಟ್ಟಿನ ಅಲೋಹ ಲರ್ನಿಂಗ್ ಸೆಂ ಟರ್‌ನ ಸಂಚಾಲಕಿ ಮಾಲತಿ ರಮೇಶ್ ಭಾಗವಹಿಸುವರು ಎಂದರು.

ADVERTISEMENT

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ದವರನ್ನು ಸನ್ಮಾನಿಸಲಾಗುತ್ತದೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದವರನ್ನು ಸಹ ಗೌರವಿಸ ಲಾಗುವುದು. ವೇದಿಕೆಯ ಸದಸ್ಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಪ್ರಸ್ತುತಪಡಿಸುವರು ಎಂದರು. ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಎಸ್‌ ನಾಯ್ಕ್, ಅಚ್ಯುತ ನಾಯ್ಕ್, ಸತೀಶ್ ನಾಯ್ಕ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.