ADVERTISEMENT

ಪಂಚಾಯಿತಿ ಬರ್ಖಾಸ್ತುಗೊಳಿಸಲು ಹುನ್ನಾರ

ಶಿರಿಯಾರ: ಅಧ್ಯಕ್ಷೆ ದಲಿತರೆಂಬ ಕಾರಣ– ದಲಿತರ ಸ್ವಾಭಿಮಾನಿ ಸಮಿತಿ ಆರೋಪ

​ಪ್ರಜಾವಾಣಿ ವಾರ್ತೆ
Published 24 ಜನವರಿ 2017, 5:36 IST
Last Updated 24 ಜನವರಿ 2017, 5:36 IST
ಪಂಚಾಯಿತಿ ಬರ್ಖಾಸ್ತುಗೊಳಿಸಲು ಹುನ್ನಾರ
ಪಂಚಾಯಿತಿ ಬರ್ಖಾಸ್ತುಗೊಳಿಸಲು ಹುನ್ನಾರ   

ಉಡುಪಿ/ ಬ್ರಹ್ಮಾವರ: ಕುಂದಾಪುರ ತಾಲ್ಲೂಕಿನ ಶಿರಿಯಾರ ಗ್ರಾಮ ಪಂಚಾ ಯಿತಿ ಅಧ್ಯಕ್ಷೆ ಜ್ಯೋತಿ ಅವರು ದಲಿತ ಸಮುದಾಯಕ್ಕೆ ಸೇರಿದವರ ಎಂಬ ಒಂದೇ ಕಾರಣಕ್ಕೆ ಸದಸ್ಯರು ಸಭೆಗಳಿಗೆ ಹಾಜರಾಗದೆ ಪಂಚಾಯಿತಿಯನ್ನು ಬರ್ಖಾಸ್ತುಗೊಳಿಸಲು ಹುನ್ನಾರ ನಡೆಸು ತ್ತಿದ್ದಾರೆ ಎಂದು ದಲಿತ ದಮನಿತರ ಸ್ವಾಭಿಮಾನಿ ಸಮಿತಿ ಆರೋಪಿಸಿದೆ.

ಅಧ್ಯಕ್ಷೆಯ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ ಸಮಿತಿಯ ಸದ ಸ್ಯರು, ಸಚಿವ ಪ್ರಮೋದ್ ಮಧ್ವರಾಜ್‌ ಅವರು ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಜ್ಯೋತಿ ಅವರಿಗೆ ಆಡಳಿತ ನಡೆಸಲು ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಹೋರಾಟ ರೂಪಿಸಬೇ ಕಾಗುತ್ತದೆ ಎಂದು ಸಮಿತಿ ಎಚ್ಚರಿಕೆ ನೀಡಿದೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರನ್ನು ಭೇಟಿ ಸಮಿತಿ ಕಂಡುಕೊಂಡ ವಿಷಯಗಳನ್ನು ಅವರ ಮುಂದಿಡಲಾಗುವುದು. ಸಭೆಗ ಳಿಗೆ ನಿರಂತರವಾಗಿ ಗೈರಾಗಿರುವ ಸದ ಸ್ಯರ ಸದಸ್ಯತ್ವವನ್ನು ರದ್ದುಪಡಿಸಿ ಅವರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಎಂದು ಮನವಿ ಮಾಡಲಾಗುವುದು. ಸಂವಿಧಾನಬದ್ಧ ವಾಗಿ ಆಯ್ಕೆಯಾಗಿರುವ ಜ್ಯೋತಿ ಅವ ರಿಗೆ ಆಡಳಿತ ನಡೆಸಲು ಅವಕಾಶ ಕಲ್ಪಿಸ ಬೇಕು ಎಂಬುದು ನಮ್ಮ ಪ್ರಮುಖ ಬೇಡಿ ಕೆಯಾಗಿದೆ ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ.

ಸಮಿತಿಯ ಪದಾಧಿಕಾರಿಗಳಾದ ಎ. ಸುಂದರ ಮಾಸ್ತರ್, ಶ್ಯಾಮರಾಜ ಬಿರ್ತಿ, ಕೆ. ಫಣಿರಾಜ್, ಸುಂದರ ಕಪ್ಪೆಟ್ಟು, ಎಸ್.ಎಸ್. ಪ್ರಸಾದ್, ಪರಮೇಶ್ವರ ಉಪ್ಪೂರು, ಡಿ.ಎಸ್. ಬೆಂಗ್ರೆ, ವಿಠಲ ತೊಟ್ಟಂ, ವರದರಾಜ್ ಬಿರ್ತಿ, ಶ್ಯಾಮ್ ಸುಂದರ್ ತೆಕ್ಕಟ್ಟೆ, ಪ್ರಶಾಂತ್, ಪುರಂ ದರ, ಸಂಜೀವ ತೆಕ್ಕಟ್ಟೆ, ಅನಂತ ಮಚ್ಚಟ್ಟು, ಆನಂದ ಕಾರಂದೂರು ನಿಯೋಗದಲ್ಲಿದ್ದರು.

ಶಿರಿಯಾರ ಗ್ರಾಮ ಪಂಚಾಯಿತಿ ಒಂದೂವರೆ ವರ್ಷಗಳ ಕಾಲ ಸರಿಯಾಗಿ ಕಾರ್ಯನಿರ್ವಹಿಸಿದೆ. ಕಳೆದ ಜೂನ್‌ ನಿಂದ ಕೋರಂ ಕೊರತೆಯ ಪರಿಣಾಮ ಯಾವುದೇ ಸಭೆಗಳು ನಡೆದಿಲ್ಲ. ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆ ಯನ್ನೂ ಮಾಡಿಲ್ಲ.  ಪಂಚಾಯಿತಿ ಕಾರ್ಯನಿರ್ವಹಿಸದ ಬಗ್ಗೆ ದೂರು ಬಂದಿದೆ. ಆದರೆ, ಸದಸ್ಯರು ಸಭೆಗಳಿಗೆ ಏಕೆ ಹಾಜರಾಗುತ್ತಿಲ್ಲ ಎಂದು ಅವರನ್ನು ನಾವು ಕೇಳಲಾಗದು. ಜಿಲ್ಲಾ ಪಂಚಾ ಯಿತಿಯ ಮುಂದಿನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದು ಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.