ADVERTISEMENT

ಪಡಿತರ ವಿತರಕರ ಸಮಸ್ಯೆ ಪರಿಹಾರಕ್ಕೆ ಬದ್ಧ: ಡಿಸಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 9:01 IST
Last Updated 17 ಜನವರಿ 2017, 9:01 IST
ಪಡಿತರ ವಿತರಕರ ಸಮಸ್ಯೆ ಪರಿಹಾರಕ್ಕೆ ಬದ್ಧ: ಡಿಸಿ
ಪಡಿತರ ವಿತರಕರ ಸಮಸ್ಯೆ ಪರಿಹಾರಕ್ಕೆ ಬದ್ಧ: ಡಿಸಿ   

ಮಂಗಳೂರು:  ಪಡಿತರ ವಿತರಕರು ಹಾಗೂ ನ್ಯಾಯಬೆಲೆ ಅಂಗಡಿ ಡೀಲ ರ್‌ಗಳ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಒಳ್ಳೆಯ ಉದ್ದೇಶದಿಂದ ಜಾರಿಗೆ ತಂದಿರುವ ಕೂಪನ್‌ ವ್ಯವಸ್ಥೆ ಯನ್ನು ಅಳವಡಿಸಿಕೊಳ್ಳುವಂತೆ ಜಿಲ್ಲಾಧಿ ಕಾರಿ ಡಾ. ಕೆ.ಜಿ. ಜಗದೀಶ್‌, ಸಲಹೆ ಮಾಡಿದರು.

ಆಹಾರ ಮತ್ತು ನಾಗರಿಕರ ಪೂರೈಕೆ ಇಲಾಖೆ ವತಿಯಿಂದ ನಗರದ ಪುರಭ ವನದಲ್ಲಿ ಸೋಮವಾರ ಏರ್ಪಡಿಸಿದ್ದ ಪಡಿತರ ವಿತರಕರು ಹಾಗೂ ನ್ಯಾಯಬೆಲೆ ಅಂಗಡಿ ಡೀಲರ್‌ಗಳ ಸಭೆಯಲ್ಲಿ ಅವರು ಮಾತನಾಡಿದರು.

ಪಡಿತರ ಚೀಟಿದಾರರಿಗೆ ತೊಂದರೆ ತಪ್ಪಿಸಲು ಮೊಬೈಲ್‌ ಮೂಲಕ ಕೂಪನ್‌ ಪಡೆಯುವ ಅವಕಾಶ ಕಲ್ಪಿಸಲಾಗಿತ್ತು. ಆದರೆ ಬಹಳಷ್ಟು ಜನರಿಗೆ ಮೊಬೈಲ್‌ ಬಳಕೆ ತಿಳಿಯದೇ ಇರುವುದರಿಂದ ಇದನ್ನು ಮತ್ತಷ್ಟು ಸರಳೀಕರಣ ಮಾಡ ಲಾಗಿದೆ. ಕಂಪ್ಯೂಟರ್ ಹಾಗೂ ಬೆರಳಚ್ಚು ಪಡೆಯುವ ಯಂತ್ರದೊಂದಿಗೆ ಇದೀಗ ನ್ಯಾಯ ಬೆಲೆ ಅಂಗಡಿಗಳಲ್ಲಿಯೇ ಕೂಪನ್‌ ಪಡೆಯುವ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ ಎಂದು ಹೇಳಿದರು.

ಹೊಸ ವ್ಯವಸ್ಥೆಯಲ್ಲೂ ಕೆಲ ಸಮ ಸ್ಯೆಗಳಿವೆ. ನೆಟ್‌ವರ್ಕ್‌ ಸಮಸ್ಯೆ ಇರುವ ಕಡೆಗಳಲ್ಲಿ ಬಿಎಸ್ಸೆನ್ನೆಲ್‌ನಿಂದ ಬ್ರಾಡ್‌ ಬ್ಯಾಂಡ್‌ ವ್ಯವಸ್ಥೆ ಮಾಡಲಾಗುವುದು. ಸರ್ವರ್‌ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ತಾಂತ್ರಿಕ ಸಿಬ್ಬಂದಿಯ ಜತೆ ಚರ್ಚಿಸ ಲಾಗುವುದು. ಪಡಿತರ ಕೂಪನ್‌ ಪಡೆ ಯಲು ಮೊಬೈಲ್‌ನಿಂದ ಕರೆ ಮಾಡು ವವರಿಗೆ ಹಣ ಪಡೆಯಲಾಗುತ್ತಿದ್ದು, ಇದನ್ನು ಟೋಲ್‌ಫ್ರೀ ನಂಬರ್‌ ಮಾಡು ವಂತೆ ಸರ್ಕಾರಕ್ಕೆ ಮನವಿ ಮಾಡ ಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮೊದಲು ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಬ್ಯಾಂಕ್‌ ಅಧ್ಯಕ್ಷ ಎಂ.ಎನ್‌. ರಾಜೇಂದ್ರಕುಮಾರ್‌, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗಳು ನಡೆಸುತ್ತಿರುವ ಸೊಸೈಟಿಗಳು, ತಹ ಶೀಲ್ದಾರರು, ಆಹಾರ ಇಲಾಖೆ ನಿರೀಕ್ಷ ಕರು, ಹೀಗೆ ಪ್ರತಿಯೊಬ್ಬರೂ ಉತ್ತರ ನೀಡಬೇಕಾಗಿದೆ. ಇದೇ ವ್ಯವಸ್ಥೆ ಮುಂದು ವರಿದರೆ, ಸೊಸೈಟಿಗಳು ಪಡಿತರ ವಿತರ ಣೆಯಿಂದ ಹಿಂದೆ ಸರಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ. ಜಗದೀಶ್‌, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಸ್ವಾಯತ್ತ ಸಂಸ್ಥೆಗ ಳಾಗಿದ್ದರೂ, ಸರ್ಕಾರದ ಸುತ್ತೋಲೆ ಗಳನ್ನು ಪಾಲಿಸಬೇಕು. ಯಾವುದೇ ತೊಂದರೆ ಇದ್ದಲ್ಲಿ ಪರಿಹರಿಸಲಾಗು ವುದು. ಆದರೆ ಸರ್ಕಾರವನ್ನು ಬಿಟ್ಟು, ಬೇಕಾದಂತೆ ಕೆಲಸ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ 99.8 ರಷ್ಟು ಪಡಿತರು ಚೀಟಿಗಳಿಗೆ ಆಧಾರ್‌ ಸಂಖ್ಯೆ ಜೋಡಣೆಯಾಗಿದೆ. ಉಳಿದಿರುವ ಪಡಿತರ ಚೀಟಿಗಳಿಗೂ ಆಧಾರ್‌ ಸಂಖ್ಯೆ ಜೋಡಣೆ ಮಾಡಬೇಕು. ಆಧಾರ್‌ ಜೋಡಣೆ ಆಗಿಲ್ಲ ಎಂಬ ಕಾರಣಕ್ಕೆ ಪಡಿ ತರ ಸ್ಥಗಿತಗೊಳಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಎ.ಟಿ. ಜಯಪ್ಪ ಮಾತನಾಡಿ, ಕಂಪ್ಯೂಟರ್ ಹಾಗೂ ಬೆರಳಚ್ಚು ಯಂತ್ರ ಖರೀದಿಸಲು ಪಡಿತರ ವಿತರಕರಿಗೆ ಸಾಲದ ವ್ಯವಸ್ಥೆ ಮಾಡು ವಂತೆ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.