ADVERTISEMENT

ಪ್ರಯಾಣಿಕರ ನೆರವಿಗೆ ‘ಟ್ರೇನ್ ಕ್ಯಾಪ್ಟನ್’

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 7:31 IST
Last Updated 10 ಜನವರಿ 2017, 7:31 IST
ಮಂಗಳೂರು: ರೈಲು ಪ್ರಯಾಣಿಕರ ಸಮಸ್ಯೆಗಳು, ಕುಂದು ಕೊರತೆಗಳಿಗೆ ಸ್ಪಂದಿಸಲು ಮತ್ತು ಮಾರ್ಗದರ್ಶನ ನೀಡುವುದಕ್ಕಾಗಿ ದಕ್ಷಿಣ ರೈಲ್ವೆಯು ‘ಟ್ರೇನ್‌ ಕ್ಯಾಪ್ಟನ್‌’ಗಳನ್ನು ನೇಮಕ ಮಾಡಿದೆ. ಸೋಮವಾರದಿಂದಲೇ ಈ ವ್ಯವಸ್ಥೆ ಜಾರಿಗೆ ಬಂದಿದೆ.
 
ಮಂಗಳೂರು ಕೇಂದ್ರ– ಚೆನ್ನೈ ಮೇಲ್ ರೈಲಿಗೆ ಅನೂಪ್‌ಕುಮಾರ್‌ ಎಂಬುವವರನ್ನು ಟ್ರೇನ್ ಕ್ಯಾಪ್ಟನ್ ಆಗಿ ನೇಮಿಸಲಾಗಿದೆ. ಸೋಮವಾರ ಮಧ್ಯಾಹ್ನ ಅವರು ಮಂಗಳೂರು ಕೇಂದ್ರ ರೈಲು ನಿಲ್ದಾಣದಿಂದ ಮಂಗ ಳೂರು ಕೇಂದ್ರ– ಚೆನ್ನೈ ಮೇಲ್‌ ರೈಲಿನ ‘ಟ್ರೇನ್‌ ಕ್ಯಾಪ್ಟನ್’ ಆಗಿ ಕೆಲಸ ಆರಂ ಭಿಸಿದರು. ಟ್ರೇನ್ ಕ್ಯಾಪ್ಟನ್‌ಗಳು ಪ್ರಯಾ ಣದುದ್ದಕ್ಕೂ ರೈಲಿನಲ್ಲೇ ಸಂಪರ್ಕಕ್ಕೆ ಲಭ್ಯವಾಗುತ್ತಾರೆ. ಪ್ರಯಾಣಿಕರ ಅಹ ವಾಲುಗಳಿಗೆ ಸ್ಪಂದಿಸುತ್ತಾರೆ.
 
‘ಪ್ರತಿ ಬೋಗಿಗಳಲ್ಲೂ ಆಯಾ ರೈಲಿನ ಟ್ರೇನ್ ಕ್ಯಾಪ್ಟನ್‌ಗಳ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಪ್ರಕಟಿಸ ಲಾಗುತ್ತದೆ. ಪ್ರಯಾಣಿಕರು ಯಾವುದೇ ಸಂದರ್ಭದಲ್ಲಿ ಅವರನ್ನು ಸಂಪರ್ಕಿಸ ಬಹುದು’ ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
 
ಒಂದು ತುದಿಯಿಂದ ಮತ್ತೊಂದು ತುದಿಯ ಪ್ರಯಾಣದವರೆಗೂ ಟ್ರೇನ್‌ ಕ್ಯಾಪ್ಟನ್ ಸೇವೆ ಲಭ್ಯವಿರುತ್ತದೆ. ಸೀಟು ಕಾಯ್ದಿರಿಸಿದ ಪ್ರಯಾಣಿಕರಿಗೆ ಎಸ್‌ಎಂ ಎಸ್‌ ಮೂಲಕ ಟ್ರೇನ್ ಕ್ಯಾಪ್ಟನ್ ಮೊಬೈಲ್ ದೂರವಾಣಿ ಸಂಖ್ಯೆಯನ್ನು ತಲುಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
 
ಮೊದಲ ದಿನ ರೈಲಿನಲ್ಲಿ ಪ್ರಯಾಣ ಆರಂಭಿಸುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅನೂಪ್‌ಕುಮಾರ್,  ‘ಇಲಾಖೆಯಲ್ಲಿ ಇದು ಹೊಸ ಅನುಭವ. ಪ್ರಯಾಣಿಕರ ಅನುಕೂಲಕ್ಕಾಗಿ ಸೃಷ್ಟಿಸಿ ರುವ ಹೊಸ ಹುದ್ದೆಯಲ್ಲಿ ಮೊದಲ ದಿನ ಕೆಲಸ ಮಾಡಲು ಸಂತೋಷವಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.