ADVERTISEMENT

ಬಾರ್ಕೂರು: ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 5:48 IST
Last Updated 25 ಅಕ್ಟೋಬರ್ 2014, 5:48 IST
ಬ್ರಹ್ಮಾವರ ಬಳಿಯ ಬಾರ್ಕೂರು ಮೂಡುಕೇರಿ ವೇಣು ಗೋಪಾಲಕೃಷ್ಣ ಎಜ್ಯುಕೇಶನಲ್ ಸೊಸೈಟಿ ವತಿಯಿಂದ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ ವೇತನ ಸಮಾರಂಭವನ್ನು ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಪಿ ಪ್ರಭಾಕರ ಉದ್ಘಾಟಿಸಿದರು.
ಬ್ರಹ್ಮಾವರ ಬಳಿಯ ಬಾರ್ಕೂರು ಮೂಡುಕೇರಿ ವೇಣು ಗೋಪಾಲಕೃಷ್ಣ ಎಜ್ಯುಕೇಶನಲ್ ಸೊಸೈಟಿ ವತಿಯಿಂದ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ ವೇತನ ಸಮಾರಂಭವನ್ನು ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಪಿ ಪ್ರಭಾಕರ ಉದ್ಘಾಟಿಸಿದರು.   

ಬ್ರಹ್ಮಾವರ:  ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಗಳನ್ನು  ಪಡೆದಾಗ ಆ ಸಮುದಾಯ ಅಭಿವೃದ್ಧಿ  ಹೊಂದಲು ಸಾಧ್ಯ ಎಂದು ನಿವೃತ್ತ ಉಪಅರಣ್ಯ ಸಂರಕ್ಷಣಾಧಿಕಾರಿ ಜಿ.ಪಿ ಪ್ರಭಾಕರ ಹೇಳಿದರು.

ಬಾರ್ಕೂರು ಮೂಡುಕೇರಿ ವೇಣು ಗೋಪಾಲಕೃಷ್ಣ ಎಜ್ಯುಕೇಶನಲ್ ಸೊಸೈಟಿ ವತಿಯಿಂದ ವೇಣುಗೋ ಪಾಲಕೃಷ್ಣ ದೇವಸ್ಥಾನದಲ್ಲಿ ಇತ್ತೀಚೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಅವರು ಮಾತನಾಡಿದರು.  ಮಟಪಾಡಿಯ ರಮೇಶ ಗಾಣಿಗ ನೂತನ ವೆಬ್‌ಸೈಟ್‌ನ್ನು ಉದ್ಘಾಟಿಸಿ ದರು. ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಕೆ.ಗೋಪಾಲ ಅಧ್ಯಕ್ಷತೆ  ವಹಿಸಿದ್ದರು.

ಸಮಾಜದ ೧೧೨ ವಿದ್ಯಾರ್ಥಿಗಳಿಗೆ ಸುಮಾರು ೫ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಉದ್ಯಮಿ ರಾಜೇಂದ್ರ ಗಾಣಿಗ, ಡಾ.ರಾಮದಾಸ್, ವೇಣುಗೋಪಾಲ ಕೃಷ್ಣ ಎಜ್ಯುಕೇಶನಲ್ ಸೊಸೈಟಿ ಅಧ್ಯಕ್ಷ  ಎಚ್.ಕೆ ಅಚ್ಯುತ್ ರಾವ್, ಸಾಲಿಗ್ರಾಮ ಗೋಪಾಲ ಮಾಸ್ತರ್, ಸ್ಮಿತಾ ಭದ್ರಾ ವತಿ, ಕೋಶಾಧಿಕಾರಿ ಎಸ್.ಕೆ ಪ್ರಾಣೇಶ, ಸದಸ್ಯರಾದ ಎಚ್.ನಾರಾಯಣ, ಸೂರ್ಯನಾರಾಯಣ ಗಾಣಿಗ ಮಟ ಪಾಡಿ  ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಜಿ.ಗಣೇಶ, ಸ್ವಾತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.