ADVERTISEMENT

ಬೋಳಿಯಾರ್‌ನಲ್ಲಿ ‘ಕದಂಬ ವನ’ ನಿರ್ಮಾಣ

ಕುಂಟಾಲಗಿರಿ ಲಕ್ಷ್ಮೀನರಸಿಂಹ ದೇವಸ್ಥಾನದ ವಠಾರದಲ್ಲಿ ವನಮಹೋತ್ಸವ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 11:15 IST
Last Updated 3 ಸೆಪ್ಟೆಂಬರ್ 2015, 11:15 IST

ಮುಡಿಪು: ಕದಂಬ ವೃಕ್ಷಕ್ಕೆ ನಮ್ಮ ಪುರಾಣದಲ್ಲೇ ಶ್ರೇಷ್ಠವಾದ ಮಹತ್ವವಾದ ಸ್ಥಾನ ಇದೆ.  ವನಮಹೋತ್ಸವ ಕಾರ್ಯದೊಂದಿಗೆ ಬಹಳ ಅಪರೂಪವಾದ ಈ ಕದಂಬ ವನ ಬೋಳಿಯಾರ್‌ನಲ್ಲಿ  ನಿರ್ಮಾಣವಾಗುವುದರಿಂದ ಈ ಭಾಗದಲ್ಲಿ ಆರೋಗ್ಯಪೂರ್ಣ ಸಮಾಜ ಸೃಷ್ಟಿಯಾಗಲಿದೆ ಎಂದು  ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ಬೋಳಿಯಾರ್ ಅಭಿಪ್ರಾಯ ಪಟ್ಟರು. 

ಅವರು ಮಂಗಳವಾರ ಬೋಳಿಯಾರು ಗ್ರಾಮದ ಕುಂಟಾಲಗಿರಿ ಯ ಲಕ್ಷ್ಮೀ ನರಸಿಂಹ ದೇವಸ್ಥಾನದ ವಠಾರದಲ್ಲಿ ಲಯನ್ಸ್ ಕ್ಲಬ್ ಮತ್ತು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಇದರ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ಹಾಗೂ  `ಕದಂಬವನ’ ನಿರ್ಮಾಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಇದರ ಅಧ್ಯಕ್ಷರಾದ ಎಲಿಯಾಸ್ ಸೆಂಟೀಸ್ ಅವರು ಕದಂಬ ವೃಕ್ಷದ ಗಿಡವನ್ನು ನೆಟ್ಟು  ವನಮಹೋತ್ಸವಕ್ಕೆ ಚಾಲನೆ ನೀಡಿದರು. ಪರಿಸರ ಸಮತೋಲನವನ್ನು ಕಾಪಾಡಬೇಕಾದರೆ ಅವಶ್ಯಕತೆಗಾಗಿ ಮರಗಳನ್ನು ಕಡಿದರೂ ಅಷ್ಟೇ ಪ್ರಮಾಣದಲ್ಲಿ ಗಿಡ-ಮರಗಳನ್ನು ನೆಡಬೇಕು ಎಂದು ಹೇಳಿದರು.

ಲಕ್ಷ್ಮೀ ನರಸಿಂಹ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ತ್ಯಾಂಪಣ್ಣ ರೈ ಕದಂಬ ಮರದ ವಿಶೇಷತೆಗಳ ಬಗ್ಗೆ ವಿವರಿಸಿದರು. ರೋಟರಿ ಕ್ಲಬ್‌ನ ರಾಜಗೋಪಾಲ ರೈ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ,  ಲಯನ್ಸ್ ಜಿಲ್ಲಾ ಗವರ್ನರ್ ಕವಿತಾ ಶಾಸ್ತ್ರಿ, ರೋಟರಿ ಕ್ಲಬ್‌ನ ಪ್ರಸಾದ್ ಶೆಟ್ಟಿ, ಲಯನ್‌ ವಾಣಿ ಆಳ್ವ, ಆಶಾ ಆರೂರು, ಗೃಹ ರಕ್ಷಕ ದಳದ ಕಮಾಂಡೆಂಟ್‌ ಡಾ.ಮುರಲೀ ಮೋಹನ್ ಚೂಂತಾರು, ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಸೀತಾರಾಮ ಶೆಟ್ಟಿ ಪೊಯ್ಯೆ, ಗೌರವಾಧ್ಯಕ್ಷ ರಾದ ಸದಾನಂದ ಗಾಂಭೀರ್ ಬೋಳ್ಯಾರುಗುತ್ತು, ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ, ಕುರ್ನಾಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವದಾಸ ಭಂಡಾರಿ, ಜಯರಾಮ ಶಾಂತ ಮುಂತಾದವರು ಉಪಸ್ಥಿತರಿದ್ದರು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಪಜೀ ರುಗುತ್ತು ಸ್ವಾಗತಿಸಿ, ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.