ADVERTISEMENT

ಮಗುಚಿದ ದೋಣಿ : ಮೀನುಗಾರರು ಪಾರು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 9:15 IST
Last Updated 2 ಸೆಪ್ಟೆಂಬರ್ 2017, 9:15 IST

ಬೈಂದೂರು: ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಗುರುವಾರ ಮೀನುಗಾರಿಕಾ ದೋಣಿ ಮಗುಚಿದ್ದು, ಅದರಲ್ಲಿದ್ದ ಇಬ್ಬರು ಮೀನುಗಾರರು ಪಾರಾಗಿದ್ದಾರೆ. ಬೆಳಿಗ್ಗೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಶ್ರೀ ಸಿದ್ಧಿವಿನಾಯಕ ಹೆಸರಿನ ಮೀನುಗಾರಿಕಾ ದೋಣಿಯು  ಅಳಿವೆ ಪ್ರದೇಶದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿಮರಳಿನ ದಿಣ್ಣೆಗೆ ಬಡಿದು ಮಗುಚಿದೆ.

ನೀರುಪಾಲಾದ ಕಂಚುಗೋಡು ನಿವಾಸಿ ಭಾಸ್ಕರ ಖಾರ್ವಿ (40) ಮತ್ತು ಕರುಣಾ ಪೂಜಾರಿ (42) ಎಂಬುವವರನ್ನು ಇತರ ದೋಣಿಗಳಲ್ಲಿದ್ದ ಮೀನುಗಾರರು ರಕ್ಷಿಸಿದರು.
ಇಬ್ಬರೂ ಗಾಯಗೊಂಡಿರುವುದರಿಂದ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಹಾನಿಗೊಂಡ ದೋಣಿಯನ್ನು ಕುಂದಾಪುರ ಸಮೀಪದ ಕೋಡಿಯಲ್ಲಿದಡಸೇರಿಸಲಾಗಿದೆ.

ಅಳಿವೆ ಪ್ರದೇಶದಲ್ಲಿ ಹೂಳು ತುಂಬಿಕೊಂಡಿರುವುದರಿಂದ ಪ್ರತಿವರ್ಷ ಅವಘಡಗಳು ಸಂಭವಿಸುತ್ತಿದ್ದು ಮೀನುಗಾರರ ಸುರಕ್ಷತೆಗಾಗಿ ಅಳಿವೆಯ ಹೂಳೆತ್ತಬೇಕು ಮತ್ತು ಬಂದರಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ಅಲೆತಡೆಗೋಡೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಬೇಕು ಎಂದು ಸ್ಥಳೀಯ ಮೀನುಗಾರರು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.