ADVERTISEMENT

ಮರಳುಗಾರಿಕೆ ಬಂದ್: ಜನ ಕಂಗಾಲು

ಎಂ.ನವೀನ್ ಕುಮಾರ್
Published 17 ಏಪ್ರಿಲ್ 2017, 8:56 IST
Last Updated 17 ಏಪ್ರಿಲ್ 2017, 8:56 IST
ಮರಳುಗಾರಿಕೆ ಬಂದ್: ಜನ ಕಂಗಾಲು
ಮರಳುಗಾರಿಕೆ ಬಂದ್: ಜನ ಕಂಗಾಲು   

ಉಡುಪಿ: ಜಿಲ್ಲೆಯಲ್ಲಿ ವರ್ಷದಿಂದ ಮರ ಳುಗಾರಿಕೆ ಬಂದ್ ಆದ ಕಾರಣ ಜನರು ತೀವ್ರ ತೊಂದರೆ ಅನುಭವಿಸುವಂತಾ ಗಿದೆ. ಅಕ್ರಮ ಮರಳುಗಾರಿಕೆ ಮಾಫಿಯಾ ಕಾನೂನು– ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದ್ದು, ಜಿಲ್ಲಾಧಿಕಾರಿ ಮೇಲೆಯೇ ಹಲ್ಲೆ ನಡೆಸುವ ಹಂತಕ್ಕೆ ಬೆಳೆದು ನಿಂತಿದೆ.ಒಂದೆಡೆ ಕಾನೂನು ತೊಡಕಿನ ಪರಿಣಾಮ ಮರಳುಗಾರಿಕೆ ಆರಂಭಿಸಲು ತಿಣುಕಾಡುತ್ತಿರುವ ಜಿಲ್ಲಾಡಳಿತ, ಇನ್ನೊಂದೆಡೆ ಅಕ್ರಮ ಮರಳುಗಾರಿಕೆ ಯನ್ನು ಮಟ್ಟ ಹಾಕಲು ಹೆಣಗಾಡು ವಂತಹ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌) ಮತ್ತು ನಿಯಂ ತ್ರಣೇತರ ವಲಯ (ನಾನ್‌ ಸಿಆರ್‌ ಝಡ್) ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಯುತ್ತಿತ್ತು. ಜಿಲ್ಲೆಗೆ ಅಗತ್ಯ ಇರುವಷ್ಟು ಮರಳು ಇಲ್ಲಿ ಲಭ್ಯವಾಗುತ್ತಿತ್ತು. ಹೊರ ಜಿಲ್ಲೆಗಳಿಗೆ ಮರಳಿನ ಕೊರತೆ ದೊಡ್ಡ ಸಮಸ್ಯೆಯಾಗಿ ಮರಳಿಗೆ ಭಾರಿ ಬೇಡಿಕೆ ಬಂದ ನಂತರ, ಜಿಲ್ಲೆಯ ಮರಳು ಹೊರ ಜಿಲ್ಲೆಗಳಿಗೂ ರವಾನೆ ಆಗಲಾರಂಭಿಸಿತು. ಬೇಡಿಕೆ ಹೆಚ್ಚಿದಾಗ ಸಹಜವಾಗಿಯೇ ಬೆಲೆಯೂ ಅಧಿಕ ಆಗುವುದರಿಂದ ದೊಡ್ಡ ಪ್ರಮಾಣದಲ್ಲಿ ಹಣದ ವಹಿ ವಾಟು ಶುರುವಾಯಿತು.

ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಮರಳುಗಾರಿಕೆ ಯಾಂತ್ರಿಕ ರೂಪ ಪಡೆದುಕೊಂಡಿತು. ತಲೆತಲಾಂತರಗ ಳಿಂದ ಸಾಂಪ್ರದಾಯಿಕ ಮರಳುಗಾರಿಕೆ ನಡೆಸುತ್ತಿದ್ದವರಿಗೆ ಮಾಫಿಯಾ ಕುಳಗಳ ಪೈಪೋಟಿ ಎದುರಾಯಿತು. ಹಗಲು– ರಾತ್ರಿ ಎಗ್ಗಿಲ್ಲದೆ ನಡೆದ ಮರಳು ಗಾರಿಕೆಯಿಂದ ನದಿ ಪಾತ್ರದ ಜನರು ನೆಮ್ಮದಿ ಕಳೆದುಕೊಂಡರು. ದೊಡ್ಡ ಯಂತ್ರಗಳು, ಲಾರಿಗಳ ಓಡಾಟದ ಪರಿ ಣಾಮ ರಸ್ತೆಗಳು ಹೊಂಡಗಳಾಗಿ ಪರಿವರ್ತನೆಗೊಂಡವು.

ADVERTISEMENT

‘ಸಿಆರ್‌ಜೆಡ್ ವ್ಯಾಪ್ತಿಯಲ್ಲಿ ನಿಯಮ ಮೀರಿ ಮರಳುಗಾರಿಕೆ ನಡೆಯುತ್ತಿದ್ದು, ಇದರಿಂದ ಜನ ಜೀವನ ಹಾಗೂ ಪ್ರಕೃ ತಿಯ ಮೇಲೆ ದುಷ್ಪರಿಣಾಮ ಬೀರುತ್ತಿದೆ’ ಎಂದು ಹಾರಾಡಿಯ ಉದಯ ಸುವರ್ಣ ಎಂಬುವರು ಚೆನ್ನೈನ ಹಸಿರು ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಪೀಠ 2016 ಮೇ17ರಂದು ಮರಳುಗಾರಿಕೆಗೆ ತಡೆಯಾಜ್ಞೆ ನೀಡಿತು.

‘ಜಿಲ್ಲಾಡಳಿತ ಮರಳುಗಾರಿಕೆಗೆ ಅನು ಮತಿ ನೀಡುವಾಗ ಕರಾವಳಿ ನಿಯಂತ್ರಣ ವಲಯಕ್ಕೆ ಒಂದು ನೀತಿ ಹಾಗೂ ನಿಯಂ ತ್ರಣೇತರ ವಲಯದಲ್ಲಿ ಇನ್ನೊಂದು ನೀತಿ ಅನುಸರಿಸುತ್ತಿದೆ’ ಎಂದು ಹೈಕೋರ್ಟ್‌ ನಲ್ಲಿ ಇನ್ನೊಂದು ಅರ್ಜಿ ಸಲ್ಲಿಕೆಯಾ ಯಿತು. ಪರಿಣಾಮ ನಿಯಂತ್ರಣೇತರ ವಲಯದಲ್ಲಿಯೂ ಮರಳುಗಾರಿಕೆಗೆ ಬ್ರೇಕ್ ಬಿತ್ತು.
ಮರಳುಗಾರಿಕೆ ಸಂಪೂರ್ಣ ಬಂದ್ ಆದ ಕಾರಣ ಕಟ್ಟಡ ನಿರ್ಮಾಣಕಾರರು, ಕೂಲಿ ಕಾರ್ಮಿಕರು, ಕಟ್ಟಡ ನಿರ್ಮಾಣ ಸಾಮಗ್ರಿ ಸಾಗಣೆದಾರರು ತೀವ್ರ ಸಂಕಷ್ಟ ಕ್ಕೀಡಾದರು.

10 ಸಾವಿರದಿಂದ ₹12 ಸಾವಿರಕ್ಕೆ ಸಿಗುತ್ತಿದ್ದ ಒಂದು ಲೋಡ್ ಮರಳು ₹20 ಸಾವಿರಕ್ಕೆ ಏರಿಕೆಯಾ ಯಿತು. ಮರಳಿಗಾಗಿ ಜನರು ಹೊರ ಜಿಲ್ಲೆಗಳನ್ನು ಆಶ್ರಯಿಸಬೇಕಾಯಿತು.ಹೊಸದಾಗಿ ಪ್ರಕ್ರಿಯೆ ಆರಂಭಿಸು ವಂತೆ ಹಸಿರು ಪೀಠ ಆದೇಶ ನೀಡಿದೆ. ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಹಿಂದಕ್ಕೆ ಪಡೆಯಲಾಗಿದೆ. ಆದರೆ, ಪ್ರಕ್ರಿಯೆಗಳು ಇನ್ನೂ ಪೂರ್ಣಗೊಂಡು ಮರಳುಗಾರಿಕೆ ಆರಂಭವಾಗಲು ಒಂದೆರಡು ತಿಂಗಳು ಬೇಕಾಗುತ್ತದೆ.‘ಸಿಆರ್‌ಜೆಡ್ ವ್ಯಾಪ್ತಿಯಲ್ಲಿ 31 ಮರಳು ಬ್ಲಾಕ್‌ ಗುರುತಿಸಲಾಗಿದ್ದು, ಅದಕ್ಕೆ ಒಪ್ಪಿಗೆ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

ನಾನ್‌ ಸಿಆರ್‌ಜೆಡ್‌ ವ್ಯಾಪ್ತಿಯಲ್ಲಿ 16 ಮರಳು ಬ್ಲಾಕ್‌ಗಳನ್ನು ಈಗಾಗಲೇ ಗುರು ತಿಸಲಾಗಿದ್ದು, ಅಲ್ಲಿ ಎಷ್ಟು ಪ್ರಮಾಣದಲ್ಲಿ ಮರಳು ಲಭ್ಯವಾಗಬಹುದು ಎಂದು ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯ ತಜ್ಞ ರಿಂದ ವರದಿ ಕೇಳಲಾಗಿದೆ. ಅವರು ವರದಿ ನೀಡಿದ ನಂತರ ಮುಂದಿನ ಪ್ರಕ್ರಿಯೆ ನಡೆಸಲಾಗುವುದು’ ಎನ್ನುತ್ತಾರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೋದಂಡರಾಮ.

ಕಠಿಣ ಕ್ರಮ: ಜಿಲ್ಲಾಧಿಕಾರಿ, ಕುಂದಾ ಪುರ ಉಪ ವಿಭಾಗಾಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಮರಳು ದಂಧೆಕೋ ರರು ಹಲ್ಲೆ ನಡೆಸಿದ ನಂತರ ಅಕ್ರಮ ವನ್ನು ಮಟ್ಟ ಹಾಕಲು ಹಲವಾರು ಕ್ರಮ ಗಳನ್ನು ಕೈಗೊಳ್ಳಲಾಗಿದೆ. ಚೆಕ್‌ಪೋಸ್ಟ್‌ಗ ಳಲ್ಲಿ ದಿನದ 24 ಗಂಟೆಯೂ ತಪಾಸಣೆ ನಡೆಸಲಾಗುತ್ತಿದೆ. ಪೊಲೀಸ್‌ ಇಲಾಖೆ ಸಹ ತಪಾಸಣಾ ಕ್ಷಿಪ್ರ ಕಾರ್ಯಪಡೆ ರಚಿ ಸಿದ್ದು, ಅದು ಸಹ ರಾತ್ರಿ– ಹಗಲು ಕಾರ್ಯನಿರ್ವಹಿಸುತ್ತಿದೆ. ಅಕ್ರಮ ಮರ ಳುಗಾರಿಕೆ ಹೆಚ್ಚಾಗಿರುವ ಕುಂದಾಪುರ ತಾಲ್ಲೂಕಿನಲ್ಲಿ ಜಿಲ್ಲಾ ಸಶಸ್ತ್ರ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸುವ ಅಧಿಕಾರಿಗಳಿಗೆ ಈ ಸಿಬ್ಬಂದಿ ರಕ್ಷಣೆ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.