ADVERTISEMENT

‘ಮಹಿಳೆಯರಿಗೆ ಹೆಚ್ಚಿನ ಅವಕಾಶ’

ಭಗಿನಿ ನಿವೇದಿತಾ 150ನೇ ಜನ್ಮದಿನೋತ್ಸವ

​ಪ್ರಜಾವಾಣಿ ವಾರ್ತೆ
Published 14 ಜನವರಿ 2017, 5:42 IST
Last Updated 14 ಜನವರಿ 2017, 5:42 IST
ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಶುಕ್ರವಾರ ಭಗಿನಿ ನಿವೇದಿತಾ ಅವರ 150ನೇ ಜಯಂತಿಯನ್ನು ತೇಜಸ್ವಿನಿ ಅನಂತ ಕುಮಾರ್‌ ಉದ್ಘಾಟಿಸಿದರು.                                                              ಪ್ರಜಾವಾಣಿ ಚಿತ್ರ.
ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಶುಕ್ರವಾರ ಭಗಿನಿ ನಿವೇದಿತಾ ಅವರ 150ನೇ ಜಯಂತಿಯನ್ನು ತೇಜಸ್ವಿನಿ ಅನಂತ ಕುಮಾರ್‌ ಉದ್ಘಾಟಿಸಿದರು. ಪ್ರಜಾವಾಣಿ ಚಿತ್ರ.   
ಮಂಗಳೂರು: ಇತ್ತೀಚೆಗಿನ ವರ್ಷಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತಿದ್ದು ಅದನ್ನು ಗುರುತಿಸಿ ಮುಂದುವರೆಯುವ ಉತ್ಸಾಹವನ್ನು ವಿದ್ಯಾರ್ಥಿನಿಯರು ತೋರಬೇಕು ಎಂದು ಬೆಂಗಳೂರು ಅದಮ್ಯ ಚೇತನದ ಅಧ್ಯಕ್ಷ ರಾದ  ತೇಜಸ್ವಿನಿ ಅನಂತಕುಮಾರ್‌ ಹೇಳಿದರು. 
 
ರಾಮಕೃಷ್ಣ ಮಠದಲ್ಲಿ ಶುಕ್ರವಾರ ಭಗಿನಿ ನಿವೇದಿತಾ ಅವರ 150ನೇ ಜನ್ಮ ಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಶಕ್ತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಮಕೃಷ್ಣ ಆಶ್ರಮದಿಂದಲೇ ಸ್ಫೂರ್ತಿ ಪಡೆದು ತಾವು ಆರಂಭಿಸಿದ ಸಮಾಜ ಮುಖಿ ಕಾರ್ಯಗಳ ಬಗ್ಗೆ ವಿವರಿಸಿದ ಅವರು, ಮಹಿಳೆಯಾಗಿದ್ದುಕೊಂಡು ಸಾ ಮಾಜಿಕ ಕೆಲಸ ಕಾರ್ಯಗಳನ್ನು ಮಾಡು ವಾಗ ತೊಂದರೆಗಳು ಎದುರಾಗು ವುದಿಲ್ಲವೇ ಎಂದು ಹೆಚ್ಚಿನವರು ಪ್ರಶ್ನಿಸುತ್ತಾರೆ. ಆದರೆ ಮಹಿಳೆಯಾ ಗಿದ್ದರಿಂದಲೇ ಹಲವಾರು ಜವಾಬ್ದಾರಿ ಗಳನ್ನು ತಾಳ್ಮೆಯಿಂದ ನಿಭಾಯಿಸುವ ಸಾಮರ್ಥ್ಯ ದೊರೆಯುತ್ತದೆ. ಇದನ್ನು ಎಲ್ಲ ಮಹಿಳೆಯರೂ ಅರ್ಥ ಮಾಡಿ ಕೊಳ್ಳಬೇಕು ಎಂದು ಸಲಹೆ ಮಾಡಿದರು. 
 
ಸ್ವಾಮಿ ವಿವೇಕಾನಂದರು ‘ಸೋದರ ಸೋದರಿಯರೇ’ ಎಂದು ಸಭೆಯನ್ನು ಉದ್ದೇಶಿಸಿ ಮಾತನಾಡಬೇಕಿದ್ದರೆ ಅವರಿಗೆ ಭಾರತದ ಹಿಂದೂ ಸಂಸ್ಕೃತಿ ಯ ‘ವಸುದೈವ ಕುಟುಂಬಕಂ’ ಪರಿಕ ಲ್ಪನೆಯ ಅರಿವಿತ್ತು. ಅವರು ಬಳಸಿದ್ದು ಕೇವಲ ಪದಗಳಲ್ಲ.  ಇಡೀ ಭಾರತದ ಆಶಯ ಅದಾಗಿದೆ. ಜಗತ್ತನ್ನೇ ತನ್ನ ಮನೆ ಎಂದು ತಿಳಿದುಕೊಂಡವನಿಗೆ ದೇಶ, ಜಾತಿ, ಭಾಷೆಯ ಮಿತಿಗಳೇ ಇರು ವುದಿಲ್ಲ. ಎಲ್ಲರೂ ಇದೇ ಆಶಯವನ್ನು ರೂಢಿಸಿಕೊಂಡರೆ ಜಗತ್ತು ಬೇರೆಯೇ ತೆರನಾಗಿರುತ್ತದೆ ಎಂದು ಹೇಳಿದರು. 
 
ಮಹಿಳೆಯರು ಪುರುಷರ ಜೊತೆಗೆ ಸ್ಪರ್ಧೆಗೆ ನಿಲ್ಲುತ್ತ ತಮ್ಮ ಪಾತ್ರವನ್ನು ಮರೆಯಬಾರದು. ಸಮಾನತೆಗಿಂತ ಹೆಚ್ಚಿನ ಅವಕಾಶಗಳು ಮಹಿಳೆಯರನ್ನು ಅರಸಿಕೊಂಡು ಬರುತ್ತಿವೆ. ಮುಂದೆ ಹೋಗುವ ಕ್ಷಮತೆ ಮತ್ತು ಶಕ್ತಿಯನ್ನು ವಿದ್ಯಾಭ್ಯಾಸದ ಸಂದರ್ಭದಲ್ಲಿ ಗಳಿಸಿಕೊ ಳ್ಳಬೇಕು. ತಾನು ಅಬಲೆ ಎಂದು ಮೊದಲೇ ನಿರ್ಧರಿಸಿಕೊಳ್ಳುವುದು ಸರಿ ಯಲ್ಲ ಎಂದು ಅವರು ಹೇಳಿದರು. 
 
ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ ಮಾತ ನಾಡಿ, ಮಹಿಳೆಯರು ವಿದ್ಯಾಭ್ಯಾಸ ಪಡೆ ಯಬೇಕು ಎಂಬ ಸ್ವಾಮಿ ವಿವೇಕಾ ನಂದರ ಕನಸು ಇಂದು ನನಸಾಗಿದೆ. ಆದರೆ ಕೇವಲ ಉದ್ಯೋಗ ಅರಸುವು ದಕ್ಕೆ ಬೇಕಾದ ಶಿಕ್ಷಣ ಶಾಲೆಗಳಲ್ಲಿ ಲಭ್ಯವಿದೆ. ವ್ಯಕ್ತಿಯ ನೈತಿಕತೆಯನ್ನು ಬಲಪಡಿಸುವ, ಮಾನವೀಯತೆಯನ್ನು ಬೆಳಗುವ ಶಿಕ್ಷಣವನ್ನು ಕೊಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು. 
 
ಎಂಆರ್‌ಪಿಎಲ್‌ನ ಪ್ರಧಾನ ವ್ಯವಸ್ಥಾಪಕರಾದ ಲಕ್ಷ್ಮಿ ಕುಮಾರನ್‌, ಪರ್ತಕರ್ತೆ ವಿಜಯಲಕ್ಷ್ಮಿ ಶಿಬರೂರು, ಬೆಂಗಳೂರಿನ ಮನಸ್‌ ತರಬೇತಿ ಕೇಂದ್ರದ ಅಧ್ಯಕ್ಷ ಪ್ರೊ. ರಘೋತ್ತಮ ರಾವ್‌ ಉಪಸ್ಥಿತರಿದ್ದರು.
 
ಉದ್ಘಾಟನೆ ಬಳಿಕ ವಿದ್ಯಾರ್ಥಿ ನಿಯರು ಅತಿಥಿ ಗಳೊಂದಿಗೆ ಸಂವಾದ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.