ADVERTISEMENT

ಮೂತ್ರಪಿಂಡ ಸಮಸ್ಯೆಗೆ ಕಸಿ ಉತ್ತಮ ಆಯ್ಕೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 7:45 IST
Last Updated 6 ಜುಲೈ 2017, 7:45 IST

ಉಡುಪಿ: ಕಸಿ ಮಾಡುವುದು ಮೂತ್ರ ಪಿಂಡ ವೈಫಲ್ಯ ಸಮಸ್ಯೆಗೆ ಮೊದಲ ಮತ್ತು ಅತ್ಯುತ್ತಮ ಆಯ್ಕೆ ಎಂದು ಮಣಿಪಾಲ್ ಆಸ್ಪತ್ರೆಗಳ ಮುಖ್ಯಸ್ಥ ಡಾ. ಸುದರ್ಶನ್ ಬಲ್ಲಾಳ್ ಹೇಳಿದರು. ಮಣಿಪಾಲದ ಕಸ್ತೂರಬಾ ಆಸ್ಪತ್ರೆ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅನ್ಯ ರಕ್ತದ ಗುಂಪುಗಳ ದಾನಿಗ ಳಿಂದ ಪಡೆದ ಮೂತ್ರಪಿಂಡವನ್ನು ಕಸಿ ಮಾಡುವ ಕುರಿತು ಅರಿವು ಮೂಡಿಸುವ ‘ಎ ಸ್ಪೆಷಲ್ ಗಿಫ್ಟ್‌’ ಕಿರುಚಿತ್ರ ಬಿಡುಗಡೆ ಗೊಳಿಸಿ ಅವರು ಮಾತನಾಡಿದರು.

ಮೂತ್ರಪಿಂಡ ಕಳವು ಹಾಗೂ ಕೆಲವು ಗೊಂದಲದ ಪರಿಣಾಮ ಈ ಹಿಂದೆ ಮೂತ್ರಪಿಂಡ ದಾನ, ಕಸಿ ವಿವಾದಕ್ಕೆ ಕಾರಣವಾಗಿತ್ತು. ಆದರೆ ಈಗ ಅಂತಹ ಪರಿಸ್ಥಿತಿ  ಇಲ್ಲ. ಶೇ95ರಷ್ಟು ಮೂತ್ರ ಪಿಂಡ ಕಸಿ ಪ್ರಕರಣಗಳು ಯಶಸ್ವಿಯಾಗು ತ್ತಿವೆ ಎಂದು ಅವರು ಹೇಳಿದರು.

ನೆಫ್ರೊಯೂರಾಲಜಿ ಕೇಂದ್ರದ ಡಾ. ರವೀಂದ್ರ ಪ್ರಭು ಮಾತನಾಡಿ, ಎರಡೂ ಮೂತ್ರಪಿಂಡಗಳು ವೈಫಲ್ಯವಾದಾಗ ವ್ಯಕ್ತಿ ದೊಡ್ಡ ಸವಾಲು ಎದುರಿಸುತ್ತಾನೆ. ನಿಯಮಿತವಾಗಿ ಡಯಾಲಿಸಿಸ್‌ಗೆ ಒಳಗಾಗು ವುದು ಹಾಗೂ ಮೂತ್ರಪಿಂಡ ಕಸಿ ಎಂಬ ಎರಡು ಆಯ್ಕೆಗಳು ಮಾತ್ರ ಆಗ ಇರು ತ್ತವೆ. ಇಂತಹ ಸಂದರ್ಭದಲ್ಲಿ ಮೂತ್ರ ಪಿಂಡ ಕಸಿ ಮಾಡಿಸಿಕೊಳ್ಳುವುದು ಸೂಕ್ತ. ಕುಟುಂಬದ ಒಳಗಿನ ವ್ಯಕ್ತಿಗ ಳಿಂದ ಮಾತ್ರವಲ್ಲದೆ ಹೊರಗಿನವರ ಮೂತ್ರ ಪಿಂಡ  ದಾನವಾಗಿ ಪಡೆದುಕೊಳ್ಳಲು ಅವಕಾಶ ಇರುತ್ತದೆ ಎಂದು ಹೇಳಿದರು.

ADVERTISEMENT

‘ನಾವು 2006ರಲ್ಲಿ ಮೊದಲ ಬಾರಿಗೆ ಅನ್ಯ ರಕ್ತದ ಗುಂಪಿನ ವ್ಯಕ್ತಿಯ ಮೂತ್ರಪಿಂಡವನ್ನು ರೋಗಿಗೆ ಕಸಿಮಾಡಿ ಯಶಸ್ವಿಯಾದೆವು. ರೋಗಿಗೂ ಸಹ ನಮ್ಮ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಕಸಿ ಮಾಡಲಾಗುತ್ತಿದೆ ಎಂಬ ಮಾಹಿತಿ ನೀಡಿದ್ದೆವು. ಆ ಪ್ರಕರಣದಲ್ಲಿ ರೋಗಿ ಮತ್ತು ದಾನಿ ಇಬ್ಬರೂ ಆರೋಗ್ಯವಾಗಿದ್ದಾರೆ. ಕೆಲವೇ ವಾರಗ ಳಲ್ಲಿ ಇನ್ನಿಬ್ಬರು ರೋಗಿಗಳಿಗೆ ಕಸಿ ಮಾಡಲಾಗುತ್ತದೆ’ ಎಂದು ಹೇಳಿದರು.

‘ಭಾರತದಲ್ಲಿ ಶೇ2ರಷ್ಟು ರೋಗಿಗಳು ಮಾತ್ರ ಮೂತ್ರಪಿಂಡ ಕಸಿ ಮಾಡಿ ಕೊಳ್ಳುತ್ತಾರೆ. ಶೇ37ರಷ್ಟು ಮಂದಿ ಡಯಾಲಿಸಿಸ್ ಮೊರೆ ಹೋಗುತ್ತಾರೆ ಮತ್ತು ಉಳಿದವರು ಚಿಕಿತ್ಸೆಯನ್ನೇ ಪಡೆಯುವುದಿಲ್ಲ. ಭಾರತದಲ್ಲಿ ಅಂಗಾಂಗ ಮಾರಾಟಕ್ಕೆ ಅವಕಾಶ ಇಲ್ಲ. ಆದರೆ ಇರಾನ್‌ನಲ್ಲಿ ಅಂಗಾಂಗ ದಾನ ಮಾಡಿದ ವರಿಗೆ ಜೀವ ವಿಮೆ ಮತ್ತು ಸ್ವಲ್ಪ ಮೊತ್ತ ನೀಡುವ ನೀತಿಯನ್ನು ಅನುಮೋದಿಸ ಲಾಗಿದೆ’ ಎಂದು ಡಾ. ಅರುಣ್ ಚಾವ್ಲಾ ಹೇಳಿದರು.

ಕಸ್ತೂರಬಾ ಆಸ್ಪತ್ರೆಯೇ ಸಿದ್ಧಪಡಿ ಸಿರುವ ಆ್ಯಂಟಿಬಯೋಟಿಕ್ಸ್‌ ನೀತಿಯ ಆ್ಯಪ್ ಅನ್ನು ಆಸ್ಪತ್ರೆಯ ಡೀನ್ ಡಾ. ಪೂರ್ಣಿಮಾ ಬಾಳಿಗಾ ಬಿಡುಗಡೆ ಮಾಡಿದರು. ಮಣಿಪಾಲ್ ವಿಶ್ವವಿದ್ಯಾಲ ಯದ ಸಹ ಕುಲಾಧಿಪತಿ ಡಾ. ಎಚ್‌.ಎಸ್‌. ಬಲ್ಲಾಳ್‌, ಡಾ. ಪ್ರಭು ಮತ್ತು ಶರ್ಮಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.