ADVERTISEMENT

ಯಕ್ಷಗಾನದಲ್ಲಿಯೂ ಬದಲಾವಣೆ ಅಗತ್ಯ

ಗುಂಡ್ಮಿ: 16ನೇ ವರ್ಷದ ಹೂವಿನಕೋಲು ಸ್ಪರ್ಧೆ– ಜಯಪ್ರಕಾಶ್ ಹೆಗ್ಡೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2015, 6:11 IST
Last Updated 17 ನವೆಂಬರ್ 2015, 6:11 IST

ಬ್ರಹ್ಮಾವರ: ಯಕ್ಷಗಾನ ನೋಡುವ ಆಸಕ್ತಿ ಎಲ್ಲರಿಗೂ ಇದೆ. ಆದ್ದರಿಂದ ಕಾಲ ಮಿತಿಯನ್ನು ಮಾಡಿಕೊಂಡು ಕಲಾವಿ ದನ ಮನಸ್ಸಿಗೆ ನೋವಾಗದಂತೆ ಬದಲಾ ವಣೆಯನ್ನು ಮಾಡಿಕೊಳ್ಳುವುದು ಇಂದಿನ ಅನಿವಾರ್ಯ ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು.

ಸಾಲಿಗ್ರಾಮ ಗುಂಡ್ಮಿಯ ಕಲಾ ಕೇಂದ್ರದ ಸದಾನಂದ ರಂಗಮಂಟಪ ದಲ್ಲಿ ಭಾನುವಾರ ದಿ.ಟಿ.ಎ.ಪೈ ಅವರ ನೆನಪಿನಲ್ಲಿ ಮಣೂರು ಗೀತಾನಂದ ಟ್ರಸ್ಟ್, ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್, ಸಾಲಿಗ್ರಾಮದ ಸ್ವಾಸ್ಥ್ಯ ಹೆಲ್ತ್ ಕೇರ್ ಮತ್ತು ರಿಸರ್ಚ್ ಸೆಂಟರ್ ಮತ್ತು ರಮ್ಯ ಅಫ್‌ಸೆಟ್ ಪ್ರಿಂಟರ್ಸ್‌ ಸಹಯೋಗದೊಂದಿಗೆ ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾಕೇಂದ್ರ 15 ವರ್ಷಗಳಿಂದ ನಡೆಸಿಕೊಂಡು ಬಂದ ರಾಜ್ಯ ಮಟ್ಟದ ಹೂವಿನಕೋಲು ಸ್ಪರ್ಧೆಯ ಸಮಾರೋಪ ಸಮಾರಂಭ ದಲ್ಲಿ ಅವರು ಮಾತನಾಡಿದರು.

ಯಕ್ಷಗಾನದಿಂದ ಭಾಷೆಯ ಮೇಲಿ ನ ಹಿಡಿತ, ಪೌರಾಣಿಕ ಕಥೆಗಳ ಬಗ್ಗೆ ಜನರಿಗೆ ಮಾಹಿತಿ ಸಿಗುತ್ತಿದೆ. ಇಂದು ಕಲಾವಿದರ ಪರಿಸ್ಥಿತಿ ಸುಧಾರಿಸಿದೆ. ಕಲೆಯ ಮೇಲೆ ಅವಲಂಬಿತನಾಗಿ ರುವವನಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ ಎಂದು ಅವರು ಹೇಳಿದರು.

ಯಕ್ಷಗಾನ ಕಲಾಕೇಂದ್ರದ ಗೌರವಾ ಧ್ಯಕ್ಷ ಆನಂದ್ ಸಿ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಯಕ್ಷಗಾನ ಚಿಂತಕ ಹಾಗೂ ವಿಮರ್ಶಕ ರಾಘವ ನಂಬಿಯಾರ್, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಲಾಕೇಂದ್ರದ ವೈಕುಂಠ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ತೀರ್ಪುಗಾರರಾಗಿ ಬಂದಿದ್ದ ಐರೋಡಿ ಗೋವಿಂದಪ್ಪ, ಐರೋಡಿ ನರಸಿಂಹ ಹೆಬ್ಬಾರ್ ಮತ್ತು ಶಿರೂರು ಚಿತ್ತು ಪೂಜಾರಿ ಅವರನ್ನು ಗೌರವಿಸಲಾಯಿತು. ಕಲಾಕೇಂದ್ರದ ಅಧ್ಯಕ್ಷ ಎ.ಎಸ್.ಎನ್ ಹೆಬ್ಬಾರ್ ಪ್ರಾಸ್ತಾವಿ ಕವಾಗಿ ಮಾತನಾಡಿ ಸ್ವಾಗತಿಸಿದರು.

ಕಾರ್ಯದರ್ಶಿ ರಾಜಶೇಖರ್ ಹೆಬ್ಬಾರ್ ವಂದಿಸಿದರು. ರಾಮಚಂದ್ರ ಐತಾಳ್‌ ಗುಂಡ್ಮಿ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಆಚಾರ್ ಸಾಯಿಬ್ರಕಟ್ಟೆ, ಸೀತಾರಾಮ ಸೋಮಯಾಜಿ ಸಹಕರಿಸಿದರು.

ಫಲಿತಾಂಶ: ಶಾಲಾ ವಿಭಾಗದ ಒಟ್ಟು 7 ತಂಡಗಳ ಪೈಕಿ ಬ್ರಹ್ಮಾವರದ ಸರ್ಕಾರಿ ಪ್ರೌಢಶಾಲೆ, ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮಣೂರಿನ ರಾಮಪ್ರಸಾದಿತ ಹಿರಿಯ ಪ್ರಾಥಮಿಕ ಶಾಲೆಯ ತಂಡಗಳು ಪ್ರಶಸ್ತಿ ಪಡೆದರೆ, ಸಂಘ ಸಂಸ್ಥೆ ವಿಭಾಗ ಮಟ್ಟದಲ್ಲಿ ಕಾರ್ಕಡ ಯಕ್ಷಮಿತ್ರರು, ಕೋಟದ ಕಲಾಪೀಠ ಮತ್ತು ಉದಯಕುಮಾರ್ ಹೊಸಾಳದ ತಂಡಗಳು ಪ್ರಶಸ್ತಿ ಪಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.