ADVERTISEMENT

ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಿ: ನಂಜುಂಡಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 5:25 IST
Last Updated 6 ಫೆಬ್ರುವರಿ 2017, 5:25 IST

ಶಿರ್ವ: ಸಮಾಜದ ಯುವ ಸಂಘಟನೆಗಳು ತಮ್ಮ ಸಂಘಟನಾ ಚತುರತೆಯ ಮೂಲಕ ಧಾರ್ಮಿಕ ಕ್ಷೇತ್ರ ಮಾತ್ರವಲ್ಲದೆ ರಾಜಕೀಯ ಕ್ಷೇತ್ರದಲ್ಲೂ ಸಾಧನೆ ಮಾಡಬೇಕಾಗಿದೆ ಎಂದು ವಿಶ್ವಕರ್ಮ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಕೆ.ಪಿ.ನಂಜುಂಡಿ ತಿಳಿಸಿದರು.

ಶಿರ್ವ ವಿಶ್ವ ಬ್ರಾಹ್ಮಣ ಯುವ ಸಂಗಮದ ವತಿಯಿಂದ ಶಿರ್ವ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಚತುರ್ಥ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ವಿಶ್ವಕರ್ಮ ಪೂಜೆ- ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ರಾಜ್ಯದ ಯಾವುದಾದರೊಂದು ವಿಶ್ವ ವಿದ್ಯಾಲಯಕ್ಕೆ ಜಕಣಾಚಾರಿ ಹೆಸರನ್ನಿಡಬೇಕು. ಅವರ ಸಂಸ್ಮರಣಾ ದಿನವನ್ನು ಸರ್ಕಾರದ ಕಾರ್ಯಕ್ರಮ ವನ್ನಾಗಿ ಮಾಡಬೇಕು. ಬೇಲೂರಿನ ಚೆನ್ನಕೇಶವ ದೇವಸ್ಥಾನದ ಆವರಣದ ಒಳಗಡೆ ಜಕಣಾಚಾರಿ ಪ್ರತಿಮೆ ಸ್ಥಾಪಿ ಸಲು ಸರ್ಕಾರ ಅನುಮತಿ ಕೊಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ಪ್ರಸಾದ್ ಅತ್ತಾವರ, ಶಿರ್ವ ಸಂತಮೇರಿ ಕಾಲೇಜಿನ ವಾಣಿಜ್ಯ ವಿಭಾಗದ ಪ್ರೊ.ಜಗದೀಶ್ ಆಚಾರ್ಯ ಮಾತನಾಡಿದರು. ಕರಾಟೆ ಪಟುಗಳಾದ ಸಹನಾ ಆಚಾರ್ಯ, ಸ್ವಾತಿ ಆಚಾರ್ಯ, ಕಲಾವಿದ ಮಹೇಶ್ ಆಚಾರ್ಯ ಮರ್ಣೆ, ಶಿರ್ವ ಠಾಣೆಯ ಹೆಡ್‌ ಕಾನ್‌ಸ್ಟೇಬಲ್‌ ದಾಮೋದರ ಆಚಾರ್ಯ ಅವರನ್ನು   ಸನ್ಮಾನಿಸಲಾಯಿತು.

ವಿಶ್ವ ಬ್ರಾಹ್ಮಣ ಯುವ ಸಂಗಮದ ಅಧ್ಯಕ್ಷ ರಾಜೇಶ್ ಆಚಾರ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಬ್ರಾಹ್ಮಣ ಯುವ ಸಂಘಟನೆಯ ಕಾಪು ಕ್ಷೇತ್ರಾಧ್ಯಕ್ಷ ಗಣೇಶ್ ಆಚಾರ್ಯ, ಉಡುಪಿ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಪ್ಪೆಟ್ಟು ಜಗದೀಶ್ ಆಚಾರ್ಯ, ಶಿರ್ವ ಮಂಚಕಲ್ ಗ್ರಾಮ ಮೊಕ್ತೇಸರ ಪಿ.ವಿ. ರಾಘವೇಂದ್ರ ಆಚಾ ರ್ಯ, ಉದ್ಯಮಿ ವೀವೇಕ್ ಆಚಾರ್ಯ, ಯುವ ಸಂಗಮದ ಗೌರವಾಧ್ಯಕ್ಷ ಭುಜಂಗ ಆಚಾರ್ಯ, ಕೋಶಾಧಿಕಾರಿ ಸುರೇಶ್ ಆಚಾರ್ಯ ಉಪಸ್ಥಿತರಿದ್ದರು.

ಮಾಧವ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಶಿವಾನಂದ ಆಚಾರ್ಯ ವಂದಿಸಿದರು. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.