ADVERTISEMENT

ವಾಣಿಜ್ಯ ಮುಕ್ತ ರಥಬೀದಿಗೆ ಪ್ರಯತ್ನ

ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 10:07 IST
Last Updated 12 ಜನವರಿ 2017, 10:07 IST
ಉಡುಪಿ: ಉಡುಪಿ ಶ್ರೀಕೃಷ್ಣಮಠದ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ರಥಬೀದಿಯನ್ನು ವಾಣಿಜ್ಯ ಮುಕ್ತವಾಗಿ ಸಲು ಪ್ರಯತ್ನಿಸಲಾಗುವುದು ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
 
ಉಡುಪಿ ಶ್ರೀಕೃಷ್ಣಮಠದ ಸುತ್ತ ಮುತ್ತ ಹಾಗೂ ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡುವ ಸಲುವಾಗಿ ಶ್ರೀಕೃಷ್ಣಮಠ ದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನಾಗ ರಿಕರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ರಥಬೀದಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಅಂಗಡಿ ಮುಗ್ಗಟ್ಟುಗಳಿಂದಲೂ ರಥ ಬೀದಿ ಮುಕ್ತವಾದರೆ ರಥಬೀದಿಯಲ್ಲಿ ಹೆಚ್ಚಿನ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದರು. 
 
ಅಲ್ಲದೆ, ಪ್ರಸ್ತುತ ಪರ್ಯಾಯ, ರಥೋತ್ಸವ ಮತ್ತು ಉತ್ಸವಗಳು ನಡೆ ಯುವ ಸಂದರ್ಭದಲ್ಲಿ ಸ್ಥಳಾವಕಾಶದ ಕೊರತೆಯಿಂದ ಹೆಚ್ಚಿನ ಜನದಟ್ಟನೆ ಯಾಗುತ್ತಿದೆ. ಇದರಿಂದಲೂ ಮುಕ್ತಿ ಪಡೆ ಯಬಹುದು. ಸಂಪೂರ್ಣ ಶ್ರದ್ಧಾ ಕೇಂದ್ರ ವನ್ನಾಗಿ ಮಾರ್ಪಾಡಿಸಬಹುದು. ಆದರೆ, ಈ ಉದ್ದೇಶ ಈಡೇರಬೇಕಾದರೆ ಅಷ್ಟ ಮಠಾಧೀಶರು, ಜನರು ಹಾಗೂ ಸರ್ಕಾರದ ಸಹಕಾರ ಅಗತ್ಯ ಎಂದರು. 
 
ಶ್ರದ್ಧಾ ಕೇಂದ್ರಗಳ ಸ್ವಚ್ಛತೆಯ ಕಾರ್ಯಕ್ರಮದ ಆಶಯದಂತೆ ಉಡುಪಿ ಶ್ರೀಕೃಷ್ಣಮಠದ ಆವರಣ, ಪಾರ್ಕಿಂಗ್‌ ಪ್ರದೇಶ ಹಾಗೂ ರಥಬೀದಿಯನ್ನು ಸ್ವಚ್ಛತೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಆ ನಂತರ ದಲ್ಲಿ ಉಡುಪಿ ನಗರದ ಸ್ವಚ್ಛತೆಯನ್ನು ಮಾಡಲಿದ್ದು, ಈ ಕಾರ್ಯ ಮಠದ ವತಿ ಯಿಂದ ಮಾತ್ರ ಸಾಧ್ಯವಿಲ್ಲ. ಸಮಸ್ತ ನಾಗರಿಕ ಸಹಕಾರ ಅಗತ್ಯ. ಎಲ್ಲರಿಗೂ ಆದರ್ಶವಾಗಿಸುವ ನಿಟ್ಟಿನಲ್ಲಿ ಉಡು ಪಿಯ ಸ್ವಚ್ಛತೆ ಆಗಬೇಕು ಎಂದರು.  
 
ಶೀರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮೀಜಿ ಮಾತನಾಡಿ, ಪೇಜಾವರ ಶ್ರೀಗಳ ಸಂಕಲ್ಪದಂತೆ ರಥಬೀದಿಯನ್ನು ವಾಣಿಜ್ಯ ಮುಕ್ತಗೊಳಿಸಿದಲ್ಲಿ, ಹೆಚ್ಚಿನ ಸ್ವಚ್ಛತೆಯನ್ನು ಕಾಪಾಡುವುದರ ಜೊತೆಗೆ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೂ ಅನುಕೂಲವಾಗಲಿದೆ. ರಥಬೀದಿಯನ್ನು ಸಂಪೂರ್ಣ ಧಾರ್ಮಿಕ ಶ್ರದ್ಧಾಕೇಂದ್ರ ವನ್ನಾಗಿ ಮಾಡಬಹುದು. ಆದರೆ, ಅಷ್ಟ ಮಠಾಧೀಶರು ಈ ಇಟ್ಟಿನಲ್ಲಿ ಚಿಂತಿಸುವುದು ಅವಶ್ಯಕ ಎಂದರು. 
 
ಮಠದ ದಿವಾನರಾದ ರಘು ರಾಮಾಚಾರ್ಯ, ಅದಮಾರು ಮಠದ ದಿವಾನ ವೆಂಕಟರಮಣ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯ ಉಡುಪಿ ತಾಲ್ಲೂಕು ನಿರ್ದೇಶಕ ಪುರುಷೋತ್ತಮ, ನಗರಸಭಾ ಸದಸ್ಯ ಶ್ಯಾಂಪ್ರಸಾದ್‌ ಕುಡ್ವ ಇದ್ದರು. ವಾಸುದೇವ ಭಟ್‌ ಸ್ವಾಗತಿಸಿದರು.  
 
***
ಶ್ರದ್ಧಾ ಕೇಂದ್ರಗಳ ಸ್ವಚ್ಛತೆ ಆಧ್ಯಾತ್ಮಿಕ ಮತ್ತು ಸಾಮಾಜಿಕ ದೃಷ್ಟಿಯಿಂದಲೂ ಅವಶ್ಯಕವಾಗಿ ಆಗಬೇಕು.
-ವಿಶ್ವಪ್ರಸನ್ನ ಸ್ವಾಮೀಜಿ
ಪೇಜಾವರ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.