ADVERTISEMENT

ವಾರದೊಳಗೆ ಅರ್ಜಿ ವಿಲೇವಾರಿ

ಭೂ ಸ್ವಾಧೀನಕ್ಕೆ ಪರಿಹಾರ ಕೋರಿಕೆ– ಪ್ರಮೋದ್ ಮಧ್ವರಾಜ್ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2017, 10:17 IST
Last Updated 7 ಮಾರ್ಚ್ 2017, 10:17 IST
ವಾರದೊಳಗೆ ಅರ್ಜಿ ವಿಲೇವಾರಿ
ವಾರದೊಳಗೆ ಅರ್ಜಿ ವಿಲೇವಾರಿ   
ಉಡುಪಿ: ಭೂ ಸ್ವಾಧೀನಕ್ಕೆ ಸಂಬಂಧಿಸಿ ದಂತೆ ಹಾಗೂ ಕಾಮಗಾರಿ ವೇಳೆ ಮನೆ– ಕೃಷಿ ಭೂಮಿಗೆ ಹಾನಿಯಾಗಿ ಪರಿಹಾರ ಕೋರಿ ಬಂದಿರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ ಸಂತ್ರಸ್ತ ರಿಗೆ ಪರಿಹಾರ ನೀಡಿ ಎಂದು ಮೀನು ಗಾರಿಕೆ, ಕ್ರೀಡಾ ಮತ್ತು ಯುವ ಸಬಲೀ ಕರಣ ಸಚಿವ ಪ್ರಮೋದ್ ಮಧ್ವರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
 
ವಾರಾಹಿ ಕಾಮಗಾರಿ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿ ಮಾಹಿತಿ ಪಡೆದ ಅವರು, ಹೊಸಂಗಡಿಯಲ್ಲಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. ಆರಂಭದಲ್ಲಿ ಅಹವಾಲು ಸಲ್ಲಿಸಲು ಹಾಗೂ ದೂರುಗಳನ್ನು ಹೇಳ ಲು ಅವಕಾಶ ನೀಡಿದ್ದರಿಂದ ಹತ್ತಾರು ಮಂದಿ ದೂರು ನೀಡಿದರು. ಬಹುತೇಕ ದೂರು– ಅರ್ಜಿಗಳು ಪರಿಹಾರಕ್ಕೆ ಸಂಬಂಧಿಸಿದ್ದಾಗಿದ್ದವು. 
 
ಕಾಮಗಾರಿ ವೇಳೆ ಸ್ಫೋಟಕಗಳನ್ನು ಬಳಸಿದ ಪರಿಣಾಮ ನಾಲ್ಕು ಮನೆಗಳಿಗೆ ಹಾನಿಯಾಗಿದೆ. ಮೂರು ವರ್ಷದ ಹಿಂದೆ ಈ ಬಗ್ಗೆ ಮನವಿ ಸಲ್ಲಿಸಿದ್ದರೂ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಮೊಳಹಳ್ಳಿಯ ಸಂತ್ರಸ್ತರು ದೂರಿದರು.
 
ಅರ್ಜಿ ಯಾವ ಹಂತದಲ್ಲಿದೆ ಎಂದು ಉತ್ತರ ನೀಡಲು ಅಧಿಕಾರಿಗಳು ತಡ ಬಡಾಯಿಸಿದ ಕಾರಣ ಕುಪಿತಗೊಂಡ ಪ್ರಮೋದ್‌, ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು. ಈ ಪ್ರಕರಣ ದಲ್ಲಿ ಗುತ್ತಿಗೆದಾರರಿಂದ ಸಂತ್ರಸ್ತರಿಗೆ ಪರಿಹಾರ ಕೊಡಿಸಬೇಕಿತ್ತು. ಆದರೆ ಅರ್ಜಿ ಯಾವ ಹಂತದಲ್ಲಿದೆ ಎಂಬುದೇ ನಿಮಗೆ ಗೊತ್ತಿಲ್ಲ ಎಂದು ನಿಮ್ಮ ಕಾರ್ಯ ವೈಖರಿ ಗೊತ್ತಾಗುತ್ತದೆ.
 
ಉಪ ವಿಭಾಗಾಧಿಕಾರಿ, ಎಂಜಿನಿಯರ್ ವಿಭಾಗದವರು ಇನ್ನೊಂದು ವಾರದಲ್ಲಿ ದೂರಿಗೆ ಸಂಬಂ ಧಿಸಿದ ಎಲ್ಲ ಕಡತಗಳನ್ನು ಪರಿಶೀಲಿಸಿ ಪರಿಹಾರ ನೀಡಿ. ಸ್ಥಳ ಪರಿಶೀಲನೆಯನ್ನು ಮಾಡಿ ಎಂದು ತಾಕೀತು ಮಾಡಿದರು. ಗುತ್ತಿಗೆದಾರರ ಜುಟ್ಟು ನಿಮ್ಮ ಕೈಯಲ್ಲಿರಬೇಕು, ನಿಮ್ಮ ಜುಟ್ಟನ್ನೇ ಅವರ ಕೈಗೆ ಕೊಡಬೇಡಿ ಎಂದು ಚುಚ್ಚಿದರು.
ಉಳೂರು ಹಾಗೂ ಕಟ್ಟಿನಬೈಲು ಗ್ರಾಮದಲ್ಲಿ ಕಾಮಗಾರಿಗಾಗಿ ಬಹು ಆಳದಲ್ಲಿ ಸುರಂಗ ತೋಡಿರುವುದರಿಂದ ಬಾವಿಗಳಲ್ಲಿದ್ದ ನೀರು ಸುರಂಗಕ್ಕೆ ಹರಿದು ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಅಲ್ಲಿಂದ ನೀರು ನೀಡಲು ಕ್ರಮ ಕೈಗೊಳ್ಳಿ ಎಂದು ಆ ಭಾಗದ ಜನರು ಮನವಿ ಮಾಡಿದರು.
 
ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ವರಾಹಿ ಯೋಜನೆ ಕೈಗೊಳ್ಳಲಾಗಿದೆ. ಈಗಾಗಲೇ ₹589 ಕೋಟಿ ಖರ್ಚು ಮಾಡಲಾಗಿದೆ. ಇದರ ಲಾಭ ಈ ಭಾಗದ ಜನರಿಗೆ ಸಿಗಬೇಕು. ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಿ ಎಂದು ಅವರು ಹೇಳಿದರು.
 
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ. ಗೋಪಾಲ ಪೂಜಾರಿ, ವಿಧಾನಪರಿಷತ್‌ ಸದಸ್ಯರಾದ ಕೆ. ಪ್ರತಾಪಚಂದ್ರ ಶೆಟ್ಟಿ, ಕೋಟ ಶ್ರೀನಿ ವಾಸ ಪೂಜಾರಿ, ಕುಂದಾಪುರ ತಾಲ್ಲೂ ಕು ಪಂಚಾಯಿತಿ ಅಧ್ಯಕ್ಷೆ ಜಯಶ್ರೀ, ಜಿಲ್ಲಾ ಪಂಚಾಯಿತಿ ಸದಸ್ಯ ಹಾಲಾಡಿ ತಾರಾ ನಾಥ ಶೆಟ್ಟಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ಕುಂದಾಪುರ ಉಪ ವಿಭಾಗಾಧಿಕಾರಿ ಶಿಲ್ಪಾ ನಾಗ್‌ ಇದ್ದರು.
 
* ದೂರಿಗೆ ಸಂಬಂಧಿಸಿದ ಯಾವುದೇ ಕಡತ ನಿರ್ಜೀವ ಎಂದು ಭಾವಿಸಬೇಡಿ, ನಿರ್ಜೀವ ಕಡತದ ಹಿಂದೆ ಜೀವಂತ ವ್ಯಕ್ತಿ ಇದ್ದಾನೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ.
ಪ್ರಮೋದ್ ಮಧ್ವರಾಜ್, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.