ADVERTISEMENT

ವಿದ್ಯುತ್‌ ದರ ಏರಿಕೆಗೆ ಆಕ್ಷೇಪ ಸಲ್ಲಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 5:22 IST
Last Updated 19 ಜನವರಿ 2017, 5:22 IST
ವಿದ್ಯುತ್‌ ದರ ಏರಿಕೆಗೆ ಆಕ್ಷೇಪ ಸಲ್ಲಿಸಲು ಸೂಚನೆ
ವಿದ್ಯುತ್‌ ದರ ಏರಿಕೆಗೆ ಆಕ್ಷೇಪ ಸಲ್ಲಿಸಲು ಸೂಚನೆ   

ಉಡುಪಿ: ಮೆಸ್ಕಾಂ ವಿದ್ಯುತ್‌ ದರವನ್ನು ಯೂನಿಟ್‌ಗೆ ₹1.50ರಷ್ಟು ಹೆಚ್ಚಿಸಲು ಮುಂದಾಗಿದ್ದು, ದರ ಏರಿಕೆಯ ವಿರುದ್ಧ ಗೃಹಬಳಕೆ, ವಾಣಿಜ್ಯ ಅಂಗಡಿ ಸೇರಿದಂತೆ ವಿದ್ಯುತ್‌ ಬಳಸುವ ಪ್ರತಿಯೊಬ್ಬ ಗ್ರಾಹಕರು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಆಕ್ಷೇಪ ಅರ್ಜಿ ಸಲ್ಲಿಸುವಂತೆ ಜಿಲ್ಲಾ ಕೃಷಿಕ ಸಂಘ ಸೂಚಿಸಿದೆ.

ಉಡುಪಿ ಜಿಲ್ಲಾ ಕೃಷಿಕ ಸಂಘವು ವಿದ್ಯುತ್‌ ದರ ಏರಿಕೆ ವಿರುದ್ಧ ‘ಆಕ್ಷೇಪ ಪತ್ರ’ ಮಾದರಿ ತಯಾರಿಸಿದೆ. ವಿದ್ಯುತ್‌ ಬಳಕೆದಾರರು ಇದರ ರೀತಿಯಲ್ಲಿ ಅಥವಾ ಅದೇ ಆಕ್ಷೇಪ ಪತ್ರವನ್ನು ಭರ್ತಿ ಮಾಡಿ ತಕ್ಷಣವೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಸಲ್ಲಿಸಬೇಕು. 

ಉಚಿತ ಆಕ್ಷೇಪ ಅರ್ಜಿಗಳಿಗೆ ಇದೇ 28ರೊಳಗೆ ಜಿಲ್ಲಾ ಕೃಷಿಕ ಸಂಘದ ಕಾರ್ಯಕರ್ತರು ಅಥವಾ ನಗರದ ಅಲಂಕಾರ್‌ ಚಿತ್ರಮಂದಿರದ ಹಿಂಬದಿ ಗುರುಪ್ರಸಾದ್‌ ಕಟ್ಟಡದಲ್ಲಿರುವ ಸಂಘದ ಕಚೇರಿಯನ್ನು ಸಂಪರ್ಕಿಸಬಹುದು. ಹೆಚ್ಚಿನ ವಿವರಗಳಿಗೆ ಮೊಬೈಲ್‌ 98442 95967 ಸಂಪರ್ಕಿಸಬಹುದು ಎಂದು ಜಿಲ್ಲಾ ಕೃಷಿಕ ಸಂಘದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.