ADVERTISEMENT

ಶೇ 90ರಷ್ಟು ರಿಯಾಯಿತಿಯಲ್ಲಿ ಔಷಧ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 7:37 IST
Last Updated 14 ಮಾರ್ಚ್ 2017, 7:37 IST
ಉಡುಪಿಯ ಜಿಲ್ಲಾಸ್ಪತ್ರೆ ಆವರಣದಲ್ಲಿ ಆರಂಭಿಸಿರುವ ಜನ– ಸಂಜೀವಿನಿ ಔಷಧ ಮಾರಾಟ (ಜೆನರಿಕ್‌) ಮಳಿಗೆಯನ್ನು ಸಚಿವ ಪ್ರಮೋದ್ ಮಧ್ವರಾಜ್ ಸೋಮವಾರ ಉದ್ಘಾಟಿಸಿದರು. ಪ್ರಜಾವಾಣಿ ಚಿತ್ರ
ಉಡುಪಿಯ ಜಿಲ್ಲಾಸ್ಪತ್ರೆ ಆವರಣದಲ್ಲಿ ಆರಂಭಿಸಿರುವ ಜನ– ಸಂಜೀವಿನಿ ಔಷಧ ಮಾರಾಟ (ಜೆನರಿಕ್‌) ಮಳಿಗೆಯನ್ನು ಸಚಿವ ಪ್ರಮೋದ್ ಮಧ್ವರಾಜ್ ಸೋಮವಾರ ಉದ್ಘಾಟಿಸಿದರು. ಪ್ರಜಾವಾಣಿ ಚಿತ್ರ   

ಉಡುಪಿ: ಜನರಿಗೆ ಕಡಿಮೆ ದರದಲ್ಲಿ ಔಷಧಗಳು ಲಭ್ಯವಾಗಬೇಕೆಂಬ ಉದ್ದೇ ಶದಿಂದ ಜನ– ಸಂಜೀವಿನಿ ಔಷಧ ಮಾರಾಟ ಕೇಂದ್ರವನ್ನು ಆರಂಭಿಸ ಲಾಗಿದೆ. ಮಾರುಕಟ್ಟೆ ದರಕ್ಕಿಂತ ಶೇ 90ರಷ್ಟು ರಿಯಾಯಿತಿ ದರದಲ್ಲಿ ಇಲ್ಲಿ ಔಷಧಗಳನ್ನು ಮಾರಾಟ ಮಾಡಲಾ ಗುತ್ತದೆ ಎಂದು ಮೀನುಗಾರಿಕೆ, ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಉಡುಪಿಯ ಜಿಲ್ಲಾಸ್ಪತ್ರೆ ಆವರ ಣದಲ್ಲಿ ಆರಂಭಿಸಿರುವ ಜನ– ಸಂಜೀವಿನಿ ಔಷಧ ಮಾರಾಟ (ಜೆನರಿಕ್‌) ಮಳಿಗೆ ಯನ್ನು ಸೋಮವಾರ ಉದ್ಘಾಟಿಸಿ ಮಾತ ನಾಡಿದ ಅವರು, ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯ ವೈದ್ಯರು ಬರೆದು ಕೊಡುವ ಔಷಧ ಚೀಟಿಯನ್ನು ತೋರಿಸಿ ಖರೀದಿಸಬಹುದು. ಔಷಧವೊಂದರ ಮಾರುಕಟ್ಟೆಯ ದರ ₹100 ಇದ್ದರೆ ಇಲ್ಲಿ ಕೇವಲ ₹10ಕ್ಕೆ ಮಾರಾಟ ಮಾಡ ಲಾಗುವುದು. ಮಧುಮೇಹ, ರಕ್ತದೊ ತ್ತಡ ನಿಯಂತ್ರಣ ಔಷಧ– ಮಾತ್ರ ಖರೀದಿಗೆ ಜನರು ಪ್ರತಿ ತಿಂಗಳು ₹1000, ₹2000 ಸಾವಿರ ಖರ್ಚು ಮಾಡುತ್ತಿದ್ದಾರೆ. ಅದೇ ಔಷಧಗಳನ್ನು ಅತ್ಯಂತ ಕಡಿಮೆ ಬೆಲೆಗೆ ಇಲ್ಲಿ ಖರೀದಿಸಿ ಹಣ ಉಳಿಸಬಹುದು.

ಶಸ್ತ್ರಚಿಕಿತ್ಸೆಗೆ ಅಗತ್ಯ ಇರುವ ಸಾಧನಗಳನ್ನು ಶೇ 25ರಷ್ಟು ರಿಯಾ ಯಿತಿ ದರದಲ್ಲಿ ಖರೀದಿಸಬಹುದು. ಅಲ್ಲದೆ, ಬ್ರಾಂಡೆಡ್‌ ಔಷಧಗಳ ಮೇಲೆ ಯೂ ಶೇ 10ರಷ್ಟು ರಿಯಾಯಿತಿ ಇದ್ದು, ಈ ಸೌಲಭ್ಯವನ್ನು ಜನರು ಬಳಸಿಕೊ ಳ್ಳಬೇಕು. ಔಷಧದ ಗರಿಷ್ಠ ಮಾರಾಟ ಬೆಲೆ ಹಾಗೂ ಮಾರಾಟ ಮಾಡುವ ಬೆಲೆ ಎರಡನ್ನೂ ಔಷಧದ ಪ್ಯಾಕೆಟ್‌ ಮೇಲೆ ನಮೂದಿಸಲಾಗಿರುತ್ತದೆ. ಅತ್ಯುತ್ತಮ ಗುಣಮಟ್ಟದ ಔಷಧಗಳನ್ನೇ ಮಾರಾಟ ಮಾಡುವುದರಿಂದ ಜನರು ಯಾವುದೇ ರೀತಿಯ ಅಪಪ್ರಚಾರಕ್ಕೆ ಕಿವಿಗೊಡ ಬಾರದು ಎಂದು ಅವರು ಮನವಿ ಮಾಡಿದರು.

ADVERTISEMENT

ಜಿಲ್ಲಾ ಆಸ್ಪತ್ರೆಯಲ್ಲಿ ಲಭ್ಯ ಇಲ್ಲದ ಔಷಧಗಳನ್ನು ಖರೀದಿ ಮಾಡಿ ಕೊಡಲು ಸಹ ₹20 ಲಕ್ಷ ಅನುದಾನ ನೀಡಲಾಗಿದೆ. ಆದ್ದರಿಂದ ಎಲ್ಲ ರೀತಿಯ ಮಾತ್ರೆಗಳು ಆಸ್ಪತ್ರೆಯಲ್ಲಿಯೇ ಸಿಗುತ್ತವೆ. ರಾಜ್ಯದ 39 ಕಡೆ ಇಂತಹ ಔಷಧ ಮಳಿಗೆ ಆರಂಭಿಸಿ ನಿರ್ವಹಿಸುವ ಜವಾಬ್ದಾರಿಯನ್ನು ಎಚ್‌ ಎಲ್‌ಎಲ್ ಎಂ ಸಂಸ್ಥೆಗೆ ವಹಿಸಲಾಗಿದೆ ಎಂದು ಅವರು ಹೇಳಿದರು.

ರೋಗಿಗಳ ಸಂಪೂರ್ಣ ವಿವರಗಳನ್ನು ದಾಖಲು ಮಾಡುವ ಇ– ಆಸ್ಪತ್ರೆಗೂ ಸಹ ಪ್ರಮೋದ್ ಮಧ್ವರಾಜ್ ಚಾಲನೆ ನೀಡಿದರು. ರೋಗಿಯ ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್‌ ಸಂಖ್ಯೆಯನ್ನು ದಾಖಲು ಮಾಡಿಕೊಳ್ಳಲಾಗುವುದು. ಒಮ್ಮೆ ವಿವರಗಳು ದಾಖಲಾದ ನಂತರ ಮೊಬೈಲ್ ಫೋನ್ ಸಂಖ್ಯೆಯನ್ನು ನಮೂದಿಸುವ ಮೂಲಕ ರೋಗಿಯ ಆರೋಗ್ಯ ಪೂರ್ವಾಪರಗಳನ್ನು ಕ್ಷಣ ಮಾತ್ರದಲ್ಲಿ ಪಡೆದುಕೊಳ್ಳಬಹುದು. ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ರೋಗಿಯೊಬ್ಬರು, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಗೆ ಬಂದರೆ ಅವರ ವೈದ್ಯಕೀಯ ಪೂರ್ವಾಪರಗಳನ್ನು ಪರಿಶೀಲಿಸಲು ಇದು ಸಹಾಯವಾಗಲಿದೆ ಎಂದು ಅವರು ಹೇಳಿದರು.

ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಜಿಲ್ಲಾ ಸರ್ಜನ್ ಡಾ. ಮಧು ಸೂದನ್ ನಾಯಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ಉಪಸ್ಥಿತರಿದ್ದರು.

**

ಉತ್ತಮ ಗುಣಮಟ್ಟದ ಔಷಧಗಳನ್ನು ಇಲ್ಲಿ ಮಾರಾಟ ಮಾಡಲಾಗುವುದು. ಜನರು ಯಾವುದೇ ರೀತಿಯ ಅಪಪ್ರಚಾರಗಳಿಗೆ ಕಿವಿಗೊಡದೆ ಕಡಿಮೆ ದರದಲ್ಲಿ ಔಷಧ ಖರೀದಿಸಬೇಕು.
-ಪ್ರಮೋದ ಮಧ್ವರಾಜ್, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.