ADVERTISEMENT

ಹಂದಾಡಿ: ಸ್ತ್ರೀಶಕ್ತಿ ಭವನ ಮಾರುಕಟ್ಟೆ ಸಂಕೀರ್ಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2017, 10:17 IST
Last Updated 4 ಜುಲೈ 2017, 10:17 IST

ಬ್ರಹ್ಮಾವರ: ರಾಜ್ಯ ಸರ್ಕಾರ ತಾಯಂದಿರು ಮತ್ತು ಮಕ್ಕಳನ್ನು ಬಲಪಡಿಸಲು ಅನ್ನಭಾಗ್ಯ, ಕ್ಷೀರಧಾರೆ, ಕ್ಷೀರಭಾಗ್ಯದಂತಹ ಅತ್ಯುತ್ತಮ ಕಾರ್ಯ ಕ್ರಮಗಳನ್ನು ರೂಪಿಸಿ, ಸ್ತ್ರೀಯರಿಗೆ ವಿಶೇಷ ಶಕ್ತಿ ನೀಡಲು ಕ್ರಮಗಳನ್ನು ಕೈಗೊಂಡಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಬ್ರಹ್ಮಾವರದ ಹಂದಾಡಿ ಗ್ರಾಮ ಪಂಚಾಯಿತಿ ಬಳಿ ₹ 2.50ಲಕ್ಷ ಅಂದಾ ಜಿನಲ್ಲಿ ನಿರ್ಮಿಸಲಾದ ಉಡುಪಿ ತಾಲ್ಲೂಕು  ಸ್ತ್ರೀಶಕ್ತಿ ಭವನ ಮಾರುಕಟ್ಟೆ ಸಂಕೀರ್ಣವನ್ನು ಈಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ಸೌಲಭ್ಯಗಳನ್ನು ಸದುಪ ಯೋಗಪಡಿಸಿಕೊಳ್ಳುವುದು ಪ್ರತಿಯೊ ಬ್ಬನ ಕರ್ತವ್ಯ. ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡರೆ ಸಮಾಜವು ಬಲಿಷ್ಠವಾಗುತ್ತದೆ. ಹಂದಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ತ್ರೀಶಕ್ತಿ ಭವನದ ಪಕ್ಕದಲ್ಲೇ 6.5 ಎಕರೆಯಲ್ಲಿ ಗಾಂಧಿ ಮೈದಾನವಿದ್ದು, ತಮ್ಮ ಅಧಿಕಾರ ಅವಧಿಯಲ್ಲೇ ಇದನ್ನು ಯುವಜನ ಮತ್ತು ಕ್ರೀಡಾ ಇಲಾಖೆಯ ಸುಪರ್ದಿಗೆ ತೆಗೆದುಕೊಂಡು ಉತ್ತಮ ಕ್ರೀಡಾಂಗಣವನ್ನು ಯುವಕರಿಗಾಗಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು  ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಮಾ ಶೆಟ್ಟಿ, ಚಾಂತಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ನಾಯ್ಕ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ, ದಿನಕರ ಹೇರೂರು, ಕುಸುಮಾ ಪೂಜಾರಿ, ಉಪ ನಿರ್ದೇಶಕ ಗ್ರೇಸಿ ಗೊನ್ಸಾಲಿಸ್ ಉಪಸ್ಥಿತರಿದ್ದರು. ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾ ಧಿಕಾರಿ ಸ್ವಾಗತಿಸಿದರು. ಶೋಭಾ ನಿರೂಪಿಸಿ ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.