ADVERTISEMENT

ಹಕ್ಕುಪತ್ರ: ತ್ವರಿತ ಕ್ರಮಕ್ಕೆ ಸೂಚನೆ

ಕುಂದಾಪುರ ತಾಲ್ಲೂಕು ಕೆಡಿಪಿ ಸಭೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2017, 5:38 IST
Last Updated 1 ಮಾರ್ಚ್ 2017, 5:38 IST

ಕುಂದಾಪುರ: 94ಸಿ ಅಡಿಯಲ್ಲಿ ಅರ್ಜಿ ಹಾಕಿದವರಿಗೆ ಹಕ್ಕುಪತ್ರ ಕೊಡಲು ಆಗ್ರಹ, ಉಪಯೋಗಕ್ಕೆ ಇಲ್ಲದ ಸರ್ಕಾರಿ ಬಸ್‌ಗಳ ವೇಳಾಪಟ್ಟಿ ಬದಲಾಯಿಸಲು ಒತ್ತಾಯ, ಗ್ರಾಮಕರಣಿಕರ ಎರವಲು ಸೇವೆಗಳ ಕುರಿತು ಆಕ್ಷೇಪ, ಬೈಂದೂರು ಸರ್ಕಾರಿ ಬಸ್‌ ಡಿಪೋ ನಿರ್ಮಾಣದ ಕುರಿತು ಚರ್ಚೆ, ಮರಳು ಲಾರಿಗಳಿಗೆ ಹಾಕುವ ದಂಡಗಳ ಮಿತಿಯ ಪ್ರಸ್ತಾಪ ಸೇರಿದಂತೆ ಹಲವು ವಿಚಾರಗಳು ಸೋಮವಾರ ಇಲ್ಲಿನ ತಾಲ್ಲೂಕು ಪಂಚಾ ಯಿತಿಯಲ್ಲಿ ನಡೆದ ತಾಲ್ಲೂಕು ತ್ರೈಮಾ ಸಿಕ ಸಭೆಯಲ್ಲಿ ಚರ್ಚೆ ನಡೆಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ಶಾಸಕ ಕೆ.ಗೋಪಾಲ ಪೂಜಾರಿ, 94 ಸಿ ಅಡಿಯಲ್ಲಿ ಅರ್ಜಿ ಹಾಕಿದವರಿಗೆ ಹಕ್ಕುಪತ್ರ ನೀಡಲು ನಿಮಗೇನು ಕಷ್ಟ?, ಮನೆ ಕಟ್ಟಿಕೊಂಡು, ಕೃಷಿ ಮಾಡಿಕೊಂಡವರಿಗೆ ಹಕ್ಕುಪತ್ರ ನೀಡಲು ಏನು ತೊಡಕಿದೆ. ನಿಮಗೆ ಸಮಸ್ಯೆಯಾಗುತ್ತದೆ ಎಂದಾದರೆ ಷರತ್ತು ವಿಧಿಸಿ ಹಕ್ಕುಪತ್ರ ನೀಡಿ ಎಂದು ಅಧಿಕಾರಿಗಳಿಗೆ ಖಾರವಾಗಿ ಹೇಳಿದರು.

ಸಭೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ತಾಲ್ಲೂಕಿನಾದ್ಯಾಂತ ಬೇಡಿಕೆ ಇರುವ ಸರ್ಕಾರಿ ಬಸ್ಸುಗಳ ಸೇವೆ. ನಾಡಾ, ಪಡುಕೋಣೆ, ಆಲೂರು ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಸರ್ಕಾರಿ ಬಸ್‌ಗಳು ಊಟಕ್ಕಿಲ್ಲದ ಉಪ್ಪಿ ನಕಾಯಿಯಂತೆ ಆಗಿದೆ. ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಈ ಬಸ್ಸುಗಳ ಉಪಯೋಗವೇ ಆಗುತ್ತಿಲ್ಲ.

ಸ್ಥಳೀಯ ವಿದ್ಯಾರ್ಥಿಗಳಿಗೆ ಅನೂಕೂಲವಾಗು ವಂತೆ ಬಸ್ಸಿನ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಪ್ರಭು ಕೆನಡಿ ಪಿರೇರಾ ಆಗ್ರಹಿಸಿದರು. ಜಿಲ್ಲಾ ಪಂಚಾ ಯಿತಿ ಸದಸ್ಯರಾದ ಲಕ್ಷ್ಮೀ ಮಂಜು ಬಿಲ್ಲವ, ಗೌರಿ ದೇವಾಡಿಗ, ಶೋಭಾ ಪುತ್ರನ್‌ ಅವರು ಎಂ.ಕೋಡಿ, ಕುಂದಾ ಪುರ– ಭಟ್ಕಳ ಹಾಗೂ ಕಟ್‌ಬೇಲ್ತೂರು–ಕೊಲ್ಲೂರಿಗೆ ಬಸ್‌ ಓಡಿಸುವಂತೆ ಒತ್ತಾಯಿಸಿದರು. ಇದಕ್ಕೆ ಕ್ರಮ ಕೈಗೊಳ್ಳುವಂತೆ ಶಾಸಕ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.

4 ಗ್ರಾಮಗಳಿಗೆ ಒಬ್ಬರು ಗ್ರಾಮಕರಣೀಕರಂತೆ ಕರ್ತವ್ಯ ನಿರ್ವಹಿಸುತ್ತಿದ್ದು, ಅವರನ್ನು ಇತರ ಎರವಲು ಕಾರ್ಯಗಳಿಗೆ ನಿಯೋಜನೆ ಮಾಡುತ್ತಿರುವುದರಿಂದಾಗಿ ಜನರಿಗೆ ತೊಂದರೆಯಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ತಗ್ಗರ್ಸೆ ಬಾಬು ಶೆಟ್ಟಿ ಆಕ್ಷೇಪಿಸಿದರು.

ಬೈಂದೂರಿನಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಕೆಎಸ್‌ ಆರ್‌ಟಿಸಿ ಡಿಪೋದ ಬಗ್ಗೆ ಶಾಸಕರು ಹಾಗೂ ಆ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯರ ನಡುವೆ ಒಂದಷ್ಟು ಚರ್ಚೆ ನಡೆಯಿತು. ಡಿಪೋ ಮಾಡಲು ಉದ್ದೇಶಿಸಿರುವ ಪ್ರದೇಶ ಹಿನ್ನೀರು ಕೆರೆಯಲ್ಲ. ಅಲ್ಲಿ ಡಿಪೋ ಬೇಡ ಎಂದು ಆ ಭಾಗದ ಜನಪ್ರತಿನಿಧಿಗಳು ಹೇಳಿದರೆ, ಡಿಪೋ ಬೇಡಾ ಅಂತ ಬರೆಯುತ್ತೇನೆ ಎಂದು ಶಾಸಕರು ಹೇಳಿದರು.

ಇದಕ್ಕೆ ಉತ್ತರಿಸಿದ ಬಾಬು ಶೆಟ್ಟಿ ತಗ್ಗರ್ಸೆ, ನಾವು ಡಿಪೋ ವಿರೋಧಿಗಳಲ್ಲ. ಆದರೆ, ಕೆರೆ ತುಂಬಿಸಿ ಡಿಪೋ ನಿರ್ಮಾಣ ಎಷ್ಟು ಸರಿ? ಎಂದು ಪ್ರಶ್ನಿಸಿದರು. ಇದಕ್ಕೆ ಪೂರಕ ವಾಗಿ ಮಾತನಾಡಿದ ಸುರೇಶ್‌ ಬಟವಾಡೆ ಹಾಗೂ ಶಂಕರ ಪೂಜಾರಿ ಯಡ್ತರೆ ಅವರು, ಡಿಪೋ ನಿರ್ಮಾಣದ ಕುರಿತು ಮೊದಲು ಆದೇಶ ಬರಲಿ, ನಾವೇನು ಡಿಪೋ ವಿರೋಧಿಗಳಲ್ಲ ಎಂದರು.

ಆಕ್ರಮ ಮರಳು ಲಾರಿಗಳಿಗೆ ವಿಧಿ ಸುವ ದುದಾರಿ ದಂಡಗಳನ್ನು ಕಡಿಮೆ ಮಾಡುವಂತೆ ಆಗ್ರಹಗಳು ಸಭೆಯಲ್ಲಿ ಬಂದವು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಸುಧಾಕರ ಮೊಗವೀರ, ಇಒ ಚೆನ್ನಪ್ಪ ಮೊಯಿಲಿ, ತಹಶೀಲ್ದಾರ್ ಜಿ.ಎಂ.ಬೋರ್ಕರ್ ಇದ್ದರು.

*
ಉಡುಪಿ  ಬರಪೀಡಿತ ಎಂದು ಘೋಷಣೆಯಾಗಿದ್ದು, ಜಿಲ್ಲೆಗೆ ₹ 1.20 ಕೋಟಿ ಬಿಡುಗಡೆ ಯಾಗಿದೆ. ಏಪ್ರಿಲ್‌ನಿಂದ ಕರಾವಳಿ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ಬರಲಿದೆ.
-ಕೆ.ಗೋಪಾಲ ಪೂಜಾರಿ,
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT