ADVERTISEMENT

ಹೆದ್ದಾರಿಗೆ ಜಮೀನು: ಶೀಘ್ರ ಪರಿಹಾರ ನೀಡಲು ಸಂಸದ ಬಿಎಸ್‌ವೈ ತಾಕೀತು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 4:21 IST
Last Updated 13 ಏಪ್ರಿಲ್ 2017, 4:21 IST

ಬೈಂದೂರು: ಬೈಂದೂರು ಕ್ಷೇತ್ರದಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರ ವಶಪಡಿಸಿಕೊಂಡಿರುವ ಜಮೀನಿಗೆ ತಕ್ಷಣ ಹೆಚ್ಚುವರಿ ಪರಿಹಾರ ಪಾವತಿಸಬೇಕು ಎಂದು ಸಂಸದ ಬಿ. ಎಸ್. ಯಡಿಯೂರಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಇಲ್ಲಿನ ಸಂತ್ರಸ್ತರ ನಿಯೋಗ ಈಚೆಗೆ ಶಿವಮೊಗ್ಗದಲ್ಲಿ ಭೇಟಿ ಮಾಡಿ ಅಹವಾಲು ಮುಂದಿಟ್ಟಾಗ ಅಧಿ ಕಾರಿಗಳನ್ನು ದೂರವಾಣಿಯಲ್ಲಿ ಸಂಪ ರ್ಕಿಸಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜನರು ಇದರ ಕುರಿತು ಮಾಡಿಕೊಂಡ ಮನವಿಗೆ ಸ್ಪಂದಿಸದಿರುವುದನ್ನು ಅವರ ಗಮನಕ್ಕೆ ತಂದಾಗ ಅವರು ಅಧಿಕಾರಿ ಗಳನ್ನು ಎಚ್ಚರಿಸಿದರಲ್ಲದೆ ಅಗತ್ಯ ಕಂಡರೆ ಜನರ ಜತೆ ಸೇರಿ ಪ್ರತಿಭಟಿಸುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಬೈಂದೂರು ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಕೆ. ವೆಂಕಟೇಶ ಕಿಣಿ ಬೈಂದೂರು ನಿಲ್ದಾಣವನ್ನು ಹೆರಿಟೇಜ್ ನಿಲ್ದಾಣವಾಗಿ ಪರಿವರ್ತಿಸುವಂತೆ ಮನವಿ ಸಲ್ಲಿಸಿದರು. ಈ ಕುರಿತು ಸಚಿವರೊಂದಿಗೆ ಮಾತುಕತೆ ನಡೆಸಿ ಕ್ರಮಕ್ಕೆ ಒತ್ತಾಯಿಸುವುದಾಗಿ ಯಡಿಯೂರಪ್ಪ ಭರವಸೆಯಿತ್ತರು. ಸಂಘದ ಸದಸ್ಯ ಪ್ರಕಾಶ್, ಉದ್ಯಮಿ ಬಿ. ಜಿ. ಕಮಲೇಶ್ ಇತರರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.