ADVERTISEMENT

‘ಕ್ಲೇ ಮಾಡೆಲ್’ ಸ್ಪರ್ಧೆ: ತೇಜಸ್‌ ಪ್ರಥಮ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2014, 9:17 IST
Last Updated 23 ಏಪ್ರಿಲ್ 2014, 9:17 IST

ಉಡುಪಿ: ಉಡುಪಿಯ ಜಯಂಟ್ಸ್ ಗ್ರೂಪ್‌ ಮತ್ತು ಉಡುಪಿಯ ಜಿಎಸ್‌ಬಿ ಯುವಕ ಮಂಡಲದ ಜಂಟಿ ಆಶ್ರಯ­ದಲ್ಲಿ ಉಚಿತ ‘ಕ್ಲೇ ಮಾಡೆಲ್’ ತರ­ಬೇತಿ ಹಾಗೂ ಸ್ಪರ್ಧೆಗಳನ್ನು ಇತ್ತೀಚೆಗೆ ವೆಂಕಟರಮಣ ದೇವಸ್ಥಾನದಲ್ಲಿ ಏರ್ಪ­ಡಿಸಲಾಗಿತ್ತು.

ಲಕ್ಷ್ಮೀ ವೆಂಕಟೇಶ್ ದೇವಳದ ಮೊಕ್ತೇಸರ ರೋಹಿತಾಕ್ಷ ಪಡಿಯಾರ ಕಾರ್ಯಕ್ರಮ ಉದ್ಘಾಟಿಸಿದರು. ಸಂಪ­ನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶೇಖರ್ ಮಾಸ್ಟರ್, ಕ್ಲೇ ಮಾಡೆಲ್ ಮಾಡುವ ವಿಧಾನವನ್ನು ವಿವರಿ­ಸಿದರು.

ಸಮಾರೋಪ ಸಮಾರಂಭದಲ್ಲಿ ರೋಹಿತಾಕ್ಷ ಪಡಿಯಾರ್, ಸಿಂಧು ಕಾಮತ್, ಶೇಖರ್ ಮಾಸ್ಟರ್‌ ಅವರು ಬಹುಮಾನ ವಿತರಣೆಯನ್ನು ನೆರವೇ­ರಿಸಿದರು.

೫ರಿಂದ ೧೦ ವರ್ಷದೊಳಗಿನವರ ವಿಭಾಗದಲ್ಲಿ ತೇಜಸ್‌ ಪ್ರಥಮ, ವಿಘ್ನೇಶ್ ಶೆಣೈ ದ್ವಿತೀಯ, ಅಮೇಯ್ ಪೈ ತೃತೀಯ ಬಹುಮಾನ ಪಡೆದರು. ಪ್ರಥಮ್ ಕಾಮತ್ ಕಟಪಾಡಿ ಹಾಗೂ ವೈಭವ್ ಕಾಮತ್‌ ಸಮಾಧಾನಕರ ಬಹುಮಾನ ಪಡೆದರು.

೧೦ರಿಂದ ೧೫ ವರ್ಷದೊಳಗಿನವರ ವಿಭಾಗದಲ್ಲಿ ಕಿಶನ್‌ ಪ್ರಥಮ, ಮಹಿಮಾ ದ್ವಿತೀಯ, ರೇಯಿಸು  ತೃತೀಯ ಬಹುಮಾನ ಪಡೆ­ದರೆ. ಉತ್ತಮ್ ಹಾಗೂ ಸುಮಂತ್ ಪೈ ಸಮಾಧಾನಕರ ಬಹುಮಾನ ಪಡೆ­ದರು. ೧೫ರಿಂದ ೨೦ ವರ್ಷದೊಳ­ಗಿ­ನವರ ವಿಭಾಗದಲ್ಲಿ ಮೇಘಾ ಪ್ರಥಮ, ಕೆ. ರಕ್ಷು ಭಟ್‌ ದ್ವಿತೀಯ ಬಹುಮಾನ ಪಡೆದರು.

ಜಯಂಟ್ಸ್ ಗ್ರೂಪ್‌ನ ಅಧ್ಯಕ್ಷ ದೇವದಾಸ್ ಕಾಮತ್, ಯುವಕ ಮಂಡಲ ಅಧ್ಯಕ್ಷ ಸುಬ್ರಹ್ಮಣ್ಯ ಪೈ, ಸಂಘದ ಸದಸ್ಯ ಭಾಸ್ಕರ್ ಶೆಣೈ, ರೇಖಾ ಪೈ, ಕಲ್ಯಾಣಿ ಪೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸುಮಾರು ೧೦೦ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯ­ಕ್ರಮದ ಪ್ರಯೋಜನ ಪಡೆದರು.ಸುಬ್ಬಣ ಪೈ ಸ್ವಾಗತಿಸಿ,ವಸಂತ ಕಿಣಿ ಕಾರ್ಯಕ್ರಮ ನಿರೂಪಿಸಿದರು, ದೇವ­ದಾಸ್ ಕಾಮತ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.