ADVERTISEMENT

‘ತುಳುನಾಡಿನ ಪರಂಪರೆ ವಿಶಿಷ್ಟ’

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2016, 4:21 IST
Last Updated 2 ಏಪ್ರಿಲ್ 2016, 4:21 IST

ಉಡುಪಿ: ತುಳುನಾಡಿನ ಜನಪದ ಆರಾಧನಾ ಪರಂಪರೆಯು ಅವೈದಿಕ ಮೂಲದ್ದಾಗಿದ್ದು, ತನ್ನದೇ ಆದ ವೈಶಿಷ್ಟ್ಯತೆ, ಅನನ್ಯತೆಗಳಿಂದ ಕೂಡಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ನಿರ್ದೇಶಕ ಪ್ರೊ. ಅಭಯ ಕುಮಾರ್‌ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಆಶ್ರಯದಲ್ಲಿ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ದಲ್ಲಿ ಇತ್ತೀಚೆಗೆ ನಡೆದ ಪ್ರಚಾರೋ ಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಭೂತಾರಾಧನೆ, ನಾಗಾರಾಧನೆ, ಸಿರಿ ಆರಾಧನೆ, ಮಾರಿ ಆರಾಧನೆಗಳ ವೈಶಿಷ್ಟ್ಯತೆಗಳ ಮೂಲಕ ತುಳು ಜನಪದ ಆರಾಧನಾ ಪರಂಪರೆ ಯ ವೈವಿಧ್ಯತೆಗಳನ್ನು ವಿಶ್ಲೇಷಿಸಿದ ಅವರು, ತುಳುನಾಡಿನ ಪ್ರಕೃತಿ- ಸಂಸ್ಕೃತಿ ಸಮ್ಮಿಲನ ಈ ಆರಾಧನೆಗಳ ಜೀವಾಳ ಎಂದು ಹೇಳಿದರು.

ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಎಸ್‌. ಹೆಗ್ಡೆ ಅಧ್ಯಕ್ಷತೆಯನ್ನು ವಹಿಸಿದ್ದರು. ಕನ್ನಡ ಸಹ ಪ್ರಾಧ್ಯಾಪಕಿ ಡಾ. ನಿಕೇತನ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಭಾಗ ಮುಖ್ಯಸ್ಥ ಡಾ. ಎಚ್‌. ಜಯಪ್ರಕಾಶ್‌ ಶೆಟ್ಟಿ ಸ್ವಾಗತಿಸಿದರು, ಡಾ. ಎಚ್‌.ಕೆ. ವೆಂಕಟೇಶ ನಿರೂಪಿ ಸಿದರು, ಸಮಾಜಕಾರ್ಯ ವಿಭಾಗ ಮುಖ್ಯಸ್ಥ ಡಾ. ದುಗ್ಗಪ್ಪ ಕಜೆಕಾರ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.