ADVERTISEMENT

ಜಲ ಮರುಪೂರಣಕ್ಕೆ ಟಿಎಸ್‌ಎಸ್ ಆದ್ಯತೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 10:47 IST
Last Updated 14 ಜುಲೈ 2017, 10:47 IST

ಸಿದ್ದಾಪುರ: ‘ಈ ವರ್ಷ ಟಿಎಸ್ಎಸ್ ಸಂಸ್ಥೆ  ಜಲ ಮರುಪೂರಣದ ಕುರಿತು ಜಾಗೃತಿ  ಮೂಡಿಸಲು ಮತ್ತು ಆ ಬಗ್ಗೆ ಪ್ರೋತ್ಸಾಹ ನೀಡಲು ಹೆಚ್ಚಿನ ಆದ್ಯತೆ ನೀಡುತ್ತಿದೆ’ ಎಂದು ಟಿಎಸ್ಎಸ್ ಸಂಸ್ಥೆಯ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಹೇಳಿದರು.

ಶಿರಸಿಯ ಟಿಎಸ್ಎಸ್ ಸಂಸ್ಥೆ, ಬಿದ್ರಕಾನದ ಬೈಫ್ ಕೃತಕ ಗರ್ಭಧಾರಣಾ ಕೇಂದ್ರ, ಹಾರ್ಸಿಕಟ್ಟಾದ ಹಾಲು ಉತ್ಪಾದ ಕರ ಸಹಕಾರಿ ಸಂಘದ ಆಶ್ರಯದಲ್ಲಿ ತಾಲ್ಲೂಕಿನ ಹಾರ್ಸಿಕಟ್ಟಾದ ಗಣೇಶ ಮಂಟಪದಲ್ಲಿ ಗುರುವಾರ ನಡೆದ ಮೇವು ಅಭಿವೃದ್ಧಿ ಕುರಿತ ಮಾಹಿತಿ ಶಿಬಿರ ಮತ್ತು  ಜಲ ಮರುಪೂರಣ ಯೋಜನೆಗೆ ಚಾಲನೆ ಹಾಗೂ- ಪ್ರೋತ್ಸಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಅಡಿಕೆ ಬೆಳೆಗಾರರಿಗೆ ಹೈನುಗಾರಿಕೆ ಅಗತ್ಯವಾದುದು. ಆದರೆ, ಹೈನುಗಾರಿಕೆ ಯಲ್ಲಿ ಲಾಭಗಳಿಸುವುದು ಸುಲಭವಲ್ಲ. ಅದಕ್ಕೆ ಪರಿಶ್ರಮಬೇಕು. ಟಿಎಸ್‌ಎಸ್‌ ಸಂಸ್ಥೆ ಬೈಫ್ ಸಂಸ್ಥೆಯ ಮೂಲಕ ಗೋವಿನ ತಳಿಗಳನ್ನು ಅಭಿವೃದ್ಧಿ ಪಡಿಸುತ್ತಿದ್ದು, ಆ ಮೂಲಕ ಹಾಲು ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದೆ’ ಎಂದರು.

ADVERTISEMENT

ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಎಲ್.ಕೆ.ಹೆಗಡೆ ಬಿದ್ರಕಾನ ಮಾತನಾಡಿದರು. ಹಾರ್ಸಿಕಟ್ಟಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ  ಶ್ರೀಧರ ಭಟ್ಟ ಹುತ್ಗಾರ ಉಪಸ್ಥಿತರಿದ್ದರು.

ಶಿರಸಿ ಕೆವಿಕೆಯ ಡಾ.ಶಿವಶಂಕರ ಮೂರ್ತಿ (ಮೇವು ಅಭಿವೃದ್ಧಿ ಹಾಗೂ ಜಲ ಮರುಪೂರಣ), ಡಾ.ಸಂತೋಷ ಶಿಂದೆ (ಹೈನುಗಾರಿಕೆಯ ಅಭಿವೃದ್ಧಿ), ಪಶುಸಂಗೋಪನಾ ಇಲಾಖೆಯ  ಡಾ. ಎನ್.ಎಚ್. ಸವಣೂರು (ಪಶು ಸಂಗೋ ಪನಾ ಇಲಾಖೆಯಿಂದ ಸಿಗಬಹುದಾದ ಸೌಲಭ್ಯಗಳು) ಮಾತನಾಡಿದರು.

ಬೈಫ್ ಸಂಸ್ಥೆಯ ಜಿಲ್ಲಾ ಸಂಯೋಜಕ ಎಂ.ಎನ್.ಹೆಗಡೆ ಸ್ವಾಗತಿಸಿದರು. ರವೀಂದ್ರ ಹೆಗಡೆ ಹಿರೇಕೈ ಪ್ರಾಸ್ತಾವಿಕ ವಾಗಿ ಮಾತನಾಡಿದರು. ರಮೇಶ ಹಾರ್ಸಿ ಮನೆ ನಿರೂಪಿಸಿದರು. ಬಿ.ವಿ.ಹೆಗಡೆ ಬಿದ್ರಕಾನ ಸಹಕರಿಸಿದರು.

ಹಾರ್ಸಿಕಟ್ಟಾ ಅಶೋಕ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗಾಗಿ ‘ಹೈನು ಗಾರಿಕೆ ಲಾಭದಾಯಕ ಉದ್ಯಮವೇ ?’ ಎಂಬ  ವಿಷಯದ ಕುರಿತು ನಡೆಸಲಾದ  ಚರ್ಚಾ ಸ್ಪರ್ಧೆಯಲ್ಲಿ ಸಹನಾ ಹೆಗಡೆ ಹೂಡೇಹದ್ದ (ಪ್ರಥಮ), ಮನೋಜ ಹೆಗಡೆ ಒಡಗೇರೆ (ದ್ವಿತೀಯ), ವಿನಯ ಭಟ್ಟ ಹಿರೇಕೈ (ತೃತೀಯ) ಬಹುಮಾನ ಪಡೆದರು.  ಜಲಮರುಪೂರಣ ಯೋಜನೆಗಾಗಿ ಅನಂತ ಶಾನಭಾಗ ಹಾರ್ಸಿಕಟ್ಟಾ ಹಾಗೂ ರಮೇಶ ಹೆಗಡೆ ಹಾರ್ಸಿಮನೆ ಅವರಿಗೆ ಪ್ರೋತ್ಸಾಹ ಧನದ ಚೆಕ್ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.