ADVERTISEMENT

ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಲಾಕೃತಿಗಳ ರಂಗು

ಪಿ.ಕೆ.ರವಿಕುಮಾರ
Published 20 ಏಪ್ರಿಲ್ 2017, 10:14 IST
Last Updated 20 ಏಪ್ರಿಲ್ 2017, 10:14 IST
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಲಾಕೃತಿಗಳ ರಂಗು
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಲಾಕೃತಿಗಳ ರಂಗು   

ಕಾರವಾರ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಒಳಭಾಗದ ಗೋಡೆಗಳ ಮೇಲೆ ಅಲಂಕರಿಸಿರುವ ಹತ್ತಾರು ಚಿತ್ರ ಕಲಾಕೃತಿಗಳು ಆಕರ್ಷಣೀಯವಾಗಿದ್ದು, ಎಲ್ಲರ ಕಣ್ಮನ ಸೆಳೆಯುತ್ತಿವೆ.ಎರಡು ಹಂತಸ್ತಿನ ಈ ಕಟ್ಟಡದಲ್ಲಿ ಹತ್ತಾರು ಇಲಾಖೆಗಳ ಕಚೇರಿಗಳಿದ್ದು, ಸಾರ್ವಜನಿಕ ಕೆಲಸ ಕಾರ್ಯಗಳಿಗಾಗಿ ನಿತ್ಯ ನೂರಾರು ಮಂದಿ ಜಿಲ್ಲಾಧಿಕಾರಿ ಕಚೇರಿಗೆ ಎಡತಾಕುತ್ತಾರೆ. ಹೀಗೆ ಬರುವ ಮಂದಿಗೆ ಗೋಡೆ ಮೇಲಿನ ಚಿತ್ರಕಲಾ ಕೃತಿಗಳ ದರ್ಶನವಾಗುತ್ತಿದೆ. ವಿವಿಧ ಅಳತೆಯ ಸುಮಾರು 20ಕ್ಕೂ ಅಧಿಕ ಕಲಾಕೃತಿಗಳನ್ನು ಹಾಕಲಾಗಿದ್ದು, ಮೆಟ್ಟಿ ಲುಗಳಿರುವ ಸಮೀಪದ ಗೋಡೆಯಲ್ಲೇ ಹೆಚ್ಚಿನ ಕಲಾಕೃತಿಗಳು ಅಲಂಕರಿಸಿವೆ.

ಕರಾವಳಿಯ ಸಂಸ್ಕೃತಿಯ ಪ್ರತಿಬಿಂಬ: ಕರಾವಳಿಯ ನಿಸರ್ಗ ಸಂಪತ್ತು, ಇಲ್ಲಿನ ಬುಡಕಟ್ಟು ಬದುಕು ಹಾಗೂ ಸಂಸ್ಕೃತಿ ಯನ್ನು ಪ್ರತಿಬಿಂಬಿಸು ಕಲಾಕೃತಿಗಳೆ ಹೆಚ್ಚಿನ ಸಂಖ್ಯೆಯಲ್ಲಿವೆ. ಎರಡು ವರ್ಷ ಗಳ ಹಿಂದೆ ನಡೆದ ಕರಾವಳಿ ಉತ್ಸವದ ಸಂದರ್ಭದಲ್ಲಿ ಜಿಲ್ಲಾಡಳಿತ ಆಯೋಜಿ ಸಿದ್ದ ಚಿತ್ರಕಲಾ ಶಿಬಿರದಲ್ಲಿ ರಾಜ್ಯ ನಾನಾ ಭಾಗಗಳಿಂದ ಬಂದಿದ್ದ ಹಿರಿಯ ಚಿತ್ರ ಕಲಾವಿದರು ಕ್ವಾನ್ವಾಸ್‌ ಮೇಲೆ ಅಪರೂಪದ ಚಿತ್ರಗಳನ್ನು ಅರಳಿಸಿದ್ದರು. ಈ ಕಲಾಕೃತಿಗಳನ್ನು ಉತ್ಸವದ ಸಂದರ್ಭ ದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.

ಕೆಲ ಕಲಾಕೃತಿಗಳು ಕೆಲ ಅಧಿಕಾರಿಗಳ ಕೊಠಡಿ ಗಳ ಗೋಡೆಯನ್ನು ಮಾತ್ರ ಅಲಂಕರಿಸಿ ದ್ದವು. ಬಾಕಿ ಉಳಿದ ಕಲಾಕೃತಿಗಳು ಮೂಲೆ ಸೇರುವ ಬದಲು ಜಿಲ್ಲಾಧಿಕಾರಿ ಕಚೇರಿ ಗೋಡೆಯಲ್ಲಿ ಸ್ಥಳಾವಕಾಶ ಕಲ್ಪಿಸ ಲಾಗಿದೆ. ಚಿತ್ರಕಲಾಕೃತಿಗಳು ಮಾತ್ರವ ಲ್ಲದೇ ಜಿಲ್ಲೆಯ ವಿವಿಧ ತಾಣಗಳ ಛಾಯಾಚಿತ್ರಗಳು ಸಹ ಗೋಡೆಗಳ ಮೇಲೆ ರಾರಾಜಿಸುತ್ತಿವೆ.
ಗೋಡೆಗೆ ಸುಣ್ಣ–ಬಣ್ಣ: ಲೋಕೋಪ ಯೋಗಿ ಇಲಾಖೆಯು ಕಟ್ಟಡದ ಸಣ್ಣ ಪುಟ್ಟ ದುರಸ್ತಿ ಹಾಗೂ ಒಳಭಾಗದ ಗೋಡೆಗಳಿಗೆ ಬಣ್ಣ ಬಳಿಯುವ ಕಾರ್ಯ ಕೈಗೆತ್ತಿಕೊಂಡಿದೆ. ಕಳೆದ ಒಂದೆರಡು ವಾರಗಳಿಂದ ಈ ಕಾರ್ಯ ನಡೆಯು ತ್ತಿದ್ದು, ಮುಕ್ತಾಯ ಹಂತಕ್ಕೆ ಬಂದಿದೆ.

ADVERTISEMENT

‘ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಒಳಭಾಗದ ಗೋಡೆಗಳು ಕೆಲ ವರ್ಷಗಳ ನಂತರ ಸುಣ್ಣ ಬಣ್ಣವನ್ನು ಕಂಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಗೋಡೆ ಮೇಲೆ ಹಾಕಿರುವ ಚಿತ್ರಕಲಾಕೃತಿಗಳು ಆಕ ರ್ಷಣೀಯವಾಗಿದ್ದು, ಮನ ಸೆಳೆಯು ವಂತಿದೆ. ಇವುಗಳನ್ನು ನೋಡುತ್ತಿದ್ದರೆ ಕಲಾಲೋಕಕ್ಕೆ ಬಂದ ಅನುಭವ ವಾಗುತ್ತದೆ’ ಎನ್ನುತ್ತಾರೆ ಅಮದಳ್ಳಿಯ ನಿವಾಸಿ ಪ್ರಶಾಂತ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.