ADVERTISEMENT

ಝೇಂಕಾರ್‌ದಿಂದ ನಾಡಿಗೆ ಕಲಾಪ್ರತಿಭೆ ಪರಿಚಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 6:06 IST
Last Updated 2 ಫೆಬ್ರುವರಿ 2017, 6:06 IST

ಭಟ್ಕಳ: ಭಟ್ಕಳದ ಕಲಾ ಪ್ರತಿಭೆಗಳನ್ನು ನಾಡಿಗೆ ಪರಿಚಯಿಸುವ ಮೂಲಕ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸುತ್ತಿ ರುವ ಝೇಂಕಾರ್ ಸಂಸ್ಥೆಯ ಕಾರ್ಯ ಮಾದರಿಯಾಗಿದೆ ಎಂದು ಶಾಸಕ ಮಂಕಾಳ ವೈದ್ಯ ಹೇಳಿದರು.

ಇಲ್ಲಿನ ನಾಗಯಕ್ಷೆ ಸಭಾಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಝೇಂಕಾರ್‌ ಸಂಸ್ಥೆ ಹಮ್ಮಿಕೊಂಡಿದ್ದ ಝೇಂಕಾರ್‌ ಕಲಾ ವೈಭವ-–2017 ಕಾರ್ಯಕ್ರಮ ಉದ್ಘಾ ಟಿಸಿ ಅವರು ಮಾತನಾಡಿದರು. ಉಪ ನ್ಯಾಸಕ ಡಾ.ಎಂ.ಎನ್ ಹಿರೇ ಮಠ, ಕಲಾ ಸೇವೆಗೈಯುತ್ತಿರುವ ಝೇಂಕಾರ ಸಂಸ್ಥೆ ಕಾರ್ಯ ಸನ್ಮಾನಾರ್ಹ ಎಂದರು.

ಅಧ್ಯಕ್ಷತೆ ವಹಿಸಿದ್ದ ನಾಗಯಕ್ಷೆ ಸಂಸ್ಥಾ ನದ ಅಧ್ಯಕ್ಷ ರಾಮದಾಸ ಪ್ರಭು ಮಾತ ನಾಡಿದರು. ಸಿಪಿಐ ಸುರೇಶ ನಾಯಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಮತ್ತು ಕಲಾಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಕೇಶವ ಆಚಾರ್ಯ ರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಪ್ರಸನ್ನ ಪ್ರಭು ವಾರ್ಷಿಕ ವರದಿ ಮಂಡಿಸಿದರು. ಸಂಜಯ ಗುಡಿಗಾರ ಸ್ವಾಗತಿಸಿ ನಿರೂಪಿ ಸಿದರು. ನಯನಾ ಪ್ರಸನ್ನ ವಂದಿಸಿದರು. ನಂತರ ಭರತನಾಟ್ಯ, ಕರ್ನಾಟಕ ಸಂಗೀತ, ಚಿತ್ರಕಲಾ ಪ್ರದರ್ಶನ, ಮಕ್ಕಳ ಚಲನಚಿತ್ರ ರಸಮಂಜರಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.