ADVERTISEMENT

ಯಕ್ಷ ಸಂಭ್ರಮ ಟ್ರಸ್ಟ್‌ನಿಂದ ತಾಳಮದ್ದಳೆ ಸಪ್ತಾಹ: ‘ಪುರಾಣ ಪರೀಕ್ಷಣಮ್’ ಅ. 1ರಿಂದ

41 ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2017, 7:54 IST
Last Updated 7 ಸೆಪ್ಟೆಂಬರ್ 2017, 7:54 IST
ಶಿರಸಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಯಕ್ಷ ಸಂಭ್ರಮ ಟ್ರಸ್ಟ್ ಅಧ್ಯಕ್ಷ ಎಂ.ಎ. ಹೆಗಡೆ ತಾಳಮದ್ದಳೆ ಸಪ್ತಾಹದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಎಂ.ವಿ. ಹೆಗಡೆ ಅಮಚಿಮನೆ, ಪತ್ರಕರ್ತ ಅಶೋಕ ಹಾಸ್ಯಗಾರ, ಸೀತಾರಾಮ ಚಂದು ಇದ್ದಾರೆ
ಶಿರಸಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಯಕ್ಷ ಸಂಭ್ರಮ ಟ್ರಸ್ಟ್ ಅಧ್ಯಕ್ಷ ಎಂ.ಎ. ಹೆಗಡೆ ತಾಳಮದ್ದಳೆ ಸಪ್ತಾಹದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಎಂ.ವಿ. ಹೆಗಡೆ ಅಮಚಿಮನೆ, ಪತ್ರಕರ್ತ ಅಶೋಕ ಹಾಸ್ಯಗಾರ, ಸೀತಾರಾಮ ಚಂದು ಇದ್ದಾರೆ   

ಶಿರಸಿ: ತಾಳಮದ್ದಳೆ ಸಪ್ತಾಹದ ಮೂಲಕ ಜನರ ಮನಗೆದ್ದಿರುವ ಇಲ್ಲಿನ ಯಕ್ಷ ಸಂಭ್ರಮ ಟ್ರಸ್ಟ್‌ನ ತೃತೀಯ ವರ್ಷದ ತಾಳಮದ್ದಳೆ ಸಪ್ತಾಹ ‘ಪುರಾಣ ಪರೀಕ್ಷಣಮ್’ ಅಕ್ಟೋಬರ್ 1ರಿಂದ 7ರವರೆಗೆ ಇಲ್ಲಿನ ಟಿಎಂಎಸ್ ಸಭಾ ಭವನದಲ್ಲಿ ನಡೆಯಲಿದೆ ಎಂದು ಟ್ರಸ್ಟ್‌ ಅಧ್ಯಕ್ಷ ಪ್ರೊ. ಎಂ.ಎ. ಹೆಗಡೆ ದಂಟಕಲ್ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಪ್ರತಿದಿನ ಸಂಜೆ 4 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳ ಒಟ್ಟು 41 ಕಲಾವಿದರು ಏಳು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಮೊದಲ ದಿನದ ಸಭಾ ಕಾರ್ಯಕ್ರಮದಲ್ಲಿ ಗಡಿಗೆಹೊಳೆ ಸುಬ್ರಾಯ ಭಟ್ ಅವರಿಗೆ ಚಂದು ಬಾಬು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ’ ಎಂದರು.

ಅ.1ರ ‘ಭೀಷ್ಮ ಪ್ರತಿಜ್ಞೆ– ಪರೀಕ್ಷೆ’ ಪ್ರಸಂಗದಲ್ಲಿ ಭಾಗವತರಾಗಿ ಕೇಶವ ಹೆಗಡೆ ಕೊಳಗಿ, ಅನಂತ ಹೆಗಡೆ ದಂತ ಳಿಗೆ, ಮೃದಂಗದಲ್ಲಿ ಎ.ಪಿ. ಪಾಠಕ, ಎನ್‌.ಜಿ. ಹೆಗಡೆ, ಚಂಡೆಯಲ್ಲಿ ಪ್ರಸನ್ನ ಭಟ್, ಅರ್ಥಧಾರಿಗಳಾಗಿ ವಾಸುದೇವ ಭಟ್ಟ, ಗಣಪತಿ ಭಟ್ಟ, ಹರೀಶ ಬೊಳಂತಿ ಮೊಗರು, ರಮಣಾಚಾರ್ಯ ಕಾರ್ಕಳ, ಶ್ರೀಧರ ಹೆಗಡೆ ಹಾಗೂ ಸೀತಾರಾಮ ಚಂದು ಪಾಲ್ಗೊಳ್ಳುವರು.

ADVERTISEMENT

ಅ.2ರ ‘ತಾಮ್ರಧ್ವಜ ಕಾಳಗ’ ಪ್ರಸಂಗದಲ್ಲಿ ಭಾಗವತರಾಗಿ ರಾಮಕೃಷ್ಣ ಹೆಗಡೆ, ಅನಂತ ಹೆಗಡೆ, ಮೃದಂಗದಲ್ಲಿ ಎನ್.ಜಿ. ಹೆಗಡೆ, ಚಂಡೆಯಲ್ಲಿ ಪ್ರಸನ್ನ ಭಟ್, ಅರ್ಥಧಾರಿಗಳಾಗಿ ವಾಸುದೇವ ಭಟ್, ಗಣಪತಿ ಭಟ್, ಗಣೇಶ ಶೆಟ್ಟಿ, ವಾದಿರಾಜ ಕಲ್ಲುರಾಯ, ಬಾಲಚಂದ್ರ ಭಟ್, ಪದ್ಮನಾಭ ಅರೇಕಟ್ಟು ಭಾಗವಹಿಸುವರು.

ಅ. 3ರ ‘ಶ್ರೀರಾಮ ವನಗಮನ’ ಪ್ರಸಂಗದಲ್ಲಿ ಭಾಗವತರಾಗಿ ನಾರಾಯಣ ಭಾಗವತ, ಪರಮೇಶ್ವರ ಹೆಗಡೆ, ಅನಂತ ಹೆಗಡೆ, ಮೃದಂಗದಲ್ಲಿ ಶಂಕರ ಭಾಗ ವತ, ಚಂಡೆಯಲ್ಲಿ ಗಣೇಶ ಗಾಂವಕರ್, ಅರ್ಥಧಾರಿಗಳಾಗಿ ವಿಶ್ವೇಶ್ವರ ಭಟ್, ಎಂ.ಎನ್.ಹೆಗಡೆ, ಜಯಪ್ರಕಾಶ ಶೆಟ್ಟಿ, ವಾಸುದೇವ ಭಟ್, ಗಣಪತಿ ಭಟ್, ಗಣೇಶ ಸುಂಕನಾಳ ಪಾಲ್ಗೊಳ್ಳುವರು.

ಅ.4ರ ‘ಸೀತಾಪಹಾರ’ ಪ್ರಸಂಗದಲ್ಲಿ ಭಾಗವತರಾಗಿ ಗಣಪತಿ ಭಟ್, ಅನಂತ ಹೆಗಡೆ, ಮೃದಂಗದಲ್ಲಿ ಶಂಕರ ಭಾಗವತ, ಚಂಡೆಯಲ್ಲಿ ಕೃಷ್ಣ ಯಾಜಿ, ಅರ್ಥಧಾರಿಗಳಾಗಿ ಪ್ರೊ.ಎಂ.ಎ.ಹೆಗಡೆ, ವಿಶ್ವೇಶ್ವರ ಭಟ್, ರಾಧಾಕೃಷ್ಣ ಕಲ್ಚಾರ್, ವಾಸುದೇವ ಭಟ್, ದಿವಾಕರ ಹೆಗಡೆ, ಗಣಪತಿ ಭಟ್ ಪಾಲ್ಗೊಳ್ಳುವರು.

ಅ.5ರ ‘ಕನ್ಯಾಂತರಂಗ’ ಪ್ರಸಂಗದಲ್ಲಿ ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಅನಂತ ಹೆಗಡೆ, ಮೃದಂಗದಲ್ಲಿ ಚೈತನ್ಯ ಪದ್ಯಾಣ, ನರಸಿಂಹ ಭಟ್, ಚಂಡೆಯಲ್ಲಿ ಪ್ರಮೋದ ಹೆಗಡೆ, ಅರ್ಥಧಾರಿಗಳಾಗಿ ಪ್ರೊ.ಎಂ.ಎ. ಹೆಗಡೆ, ಸುಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವ ಭಟ್, ಗಣಪತಿ ಭಟ್, ನಾರಾಯಣ ದೇಸಾಯಿ, ವಿನಾಯಕ ಭಟ್ ಭಾಗವಹಿಸುವರು.

ಅ.6ರ ‘ಚಂದ್ರಕಾಂತಿ’ ಪ್ರಸಂಗದಲ್ಲಿ ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಅನಂತ ಹೆಗಡೆ, ಮೃದಂಗದಲ್ಲಿ ಚೈತನ್ಯ ಪದ್ಯಾಣ, ನರಸಿಂಹ ಭಟ್ ಚಂಡೆಯಲ್ಲಿ ಪ್ರಮೋದ ಹೆಗಡೆ, ಅರ್ಥಧಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ಜಬ್ಬಾರ ಸಮೊ ಸಂಪಾಜೆ, ವಾಸುದೇವ ಭಟ್, ಗಣಪತಿ ಭಟ್, ಸುಬ್ರಾಯ ಹೆಗಡೆ, ಮಂಜುನಾಥ ಗೊರಮನೆ, ಗಣೇಶ ಸುಂಕನಾಳ ಪಾಲ್ಗೊಳ್ಳುವರು.

ಅ.7ರ ‘ಭೀಷ್ಮಾರ್ಜುನ ಕಾಳಗ’ ಪ್ರಸಂಗದಲ್ಲಿ ಭಾಗವತರಾಗಿ ಗಣಪತಿ ಭಟ್, ಅನಂತ ಹೆಗಡೆ, ಮೃದಂಗದಲ್ಲಿ ಶಂಕರ ಭಾಗವತ, ಚಂಡೆಯಲ್ಲಿ ವಿಘ್ನೇಶ್ವರ ಕೆಸರಕೊಪ್ಪ, ಅರ್ಥಧಾರಿಗಳಾಗಿ ಪ್ರಭಾಕರ ಜೋಶಿ, ಉಮಾಕಾಂತ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಶೇಣಿ ವೇಣುಗೋಪಾಲ, ಎಂ.ವಿ.ಹೆಗಡೆ ಭಾಗವಹಿಸುವರು.

ಸಮಾರೋಪ ಕಾರ್ಯಕ್ರಮದಲ್ಲಿ ಪ್ರಭಾಕರ ಜೋಶಿ, ಎಂ.ಎ. ಹೆಗಡೆ, ಉಮಾಕಾಂತ ಭಟ್ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ಸೀತಾರಾಮ ಚಂದು ಅವರು ಹೇಳಿದರು.

*
ಜನರಲ್ಲಿ ಪುರಾಣದ ಜ್ಞಾನ ಬೆಳೆಸುವ ಉದ್ದೇಶದಿಂದ ಸಂಘರ್ಷ ಇರುವ ಪ್ರಸಂಗಗಳನ್ನು ಆಯ್ದುಕೊಂಡು ತಾಳಮದ್ದಳೆ ಸಪ್ತಾಹ ಆಯೋಜಿಸಲಾಗುತ್ತಿದೆ.
–ಎಂ.ಎ. ಹೆಗಡೆ,
ಯಕ್ಷ ಸಂಭ್ರಮ ಟ್ರಸ್ಟ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.