ADVERTISEMENT

ಯುವಕರು ಕೃಷಿ ಕ್ಷೇತ್ರದಿಂದ ವಿಮುಖ: ವಿಷಾದ

‘ಕೃಷಿ ರಸಪ್ರಶ್ನೆ’ ಸರಣಿ ಕಾರ್ಯಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 11:27 IST
Last Updated 7 ಡಿಸೆಂಬರ್ 2017, 11:27 IST

ಕುಮಟಾ: ‘ನಮ್ಮ ಔಪಚಾರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಕೃಷಿಯನ್ನು ಬಿಟ್ಟು ಬೇರೆ ಉದ್ಯೋಗ ಮಾಡಿ ಎಂದು ಪಾಲಕರೇ ಸಲಹೆ ಮಾಡುವ ವಾತಾವರಣ ನಿರ್ಮಾಣವಾಗಿದೆ’ ಎಂದು ಶಿರಸಿ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸ್ವರ್ಣವಲ್ಲಿ ಮಠದ ಕೃಷಿ ಪ್ರತಿಷ್ಠಾನ ಆಶ್ರಯದಲ್ಲಿ ಕುಮಟಾದ ಗಿಬ್ ಬಾಲಕಿಯರ ಪ್ರೌಢ ಶಾಲೆಯಲ್ಲಿ ಮಂಗಳವಾರ ನಡೆದ ‘ ಕೃಷಿ ರಸಪ್ರಶ್ನೆ’ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ವಿದ್ಯಾರ್ಥಿ ಸಮುದಾಯಕ್ಕೆ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸುವ ಮೂಲಕ ಸ್ವರ್ಣವಲ್ಲಿ ಮಠ ಕೃಷಿ ಜಯಂತಿ ಆಚರಿಸುತ್ತಿದೆ. ಏ.27 ರಂದು ಸ್ವರ್ಣವಲ್ಲಿಯಲ್ಲಿ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ. ಕೃಷಿ ಜಯಂತಿ ಕಾರ್ಯಕ್ರಮದಲ್ಲಿ ಕೈಕೊಂಡ ನಿರ್ಣಯದ ಫಲವಾಗಿ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಕೃಷಿ ಆಯ–ವ್ಯಯ ಮಂಡನೆಯಾಯಿತು. ಶಿರಸಿಗೆ ತೋಟಗಾರಿಕಾ ಮಹಾವಿದ್ಯಾಲಯ ಬಂದಿತು. ವಿಚಾರವಂತರಲ್ಲಿ ಕೃಷಿ ಬಗ್ಗೆ ಇತ್ತೀಚೆಗೆ ಒಲವು ತೋರುವಂಥ ಆಲೋಚನೆ ಮೂಡುತ್ತಿರುವುದು ಆಶಾ ದಾಯಕ ಸಂಗತಿ’ ಎಂದು ಹೇಳಿದರು.

ADVERTISEMENT

ಮಾಜಿ ಶಾಸಕ ದಿನಕರ ಶೆಟ್ಟಿ, ‘ಕೃಷಿ ಹಾಗೂ ಹಸಿರು ಅಭಿ ವೃದ್ಧಿ ಬಗ್ಗೆ ಸ್ವರ್ಣವಲ್ಲಿ ಶ್ರೀಗಳು ನಡೆ ಸುತ್ತಿರುವ ಕಾರ್ಯಕ್ರಮ ಜಿಲ್ಲೆಯ ಕರಾವಳಿ ಪ್ರದೇಶಕ್ಕೂ ವಿಸ್ತರಿಸುವಂತಾಗಬೇಕು. ಯಡಿ ಯೂರಪ್ಪ ಅವರು ಮುಖ್ಯ ಮಂತ್ರಿ ಇದ್ದಾಗ ರಾಜ್ಯದಲ್ಲಿ ಮೊಟ್ಟ ಮೊದಲು ಕೃಷಿ ಆಯವ್ಯಯ ಮಂಡನೆ ಮಾಡಿದ್ದರು. ಈ ಪರಂಪರೆ ಮತ್ತೆ ಮುಂದುವರಿಯಬೇಕು’ ಎಂದರು.

ಕೃಷಿ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮೊದಲ ಮೂರು ಸ್ಥಾನ ಗಳಿಸಿದ ಗಿಬ್ ಆಂಗ್ಲ ಮಾಧ್ಯಮ ಶಾಲೆ, ಗಿಬ್ ಬಾಲಕಿಯರ ಪ್ರೌಢಶಾಲೆ ಹಾಗೂ ಮಿರ್ಜಾನಿನ ಜನತಾ ವಿದ್ಯಾಲಯ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕ್ರಮವಾಗಿ ಮೂರು ಬಹುಮಾನ ನೀಡಿದರು.

ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ ದೀಪಕ ಮಹಾದೇವ ನಾಯ್ಕ ಹಾಗೂ ಅನಿತಾ ಮಂಜುನಾಥ ನಾಯ್ಕ ಅವರನ್ನು ಗೌರವಿಸಲಾಯಿತು. ಮುಖ್ಯಶಿಕ್ಷಕ ರಮೇಶ ಉಪಾಧ್ಯಾಯ ಸ್ವಾಗತಿಸಿದರು. ಕಮಲಾ ರಾವ್, ಆರ್.ಎನ್. ಹೆಗಡೆ ಉಳ್ಳೀಕೊಪ್ಪ, ಶಂಭು ಹೆಗಡೆ, ಟಿ.ಜಿ.ಭಟ್ಟ ಹಾಸಣಗಿ, ಎಸ್.ಎಸ್. ಪ್ರಭು, ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.