ADVERTISEMENT

ಅಜ್ಞಾನದ ಕತ್ತಲೆ ಕಳೆದ ಕನಕದಾಸ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 9:47 IST
Last Updated 7 ನವೆಂಬರ್ 2017, 9:47 IST

ಮುದ್ದೇಬಿಹಾಳ: ‘ನಮ್ಮೊಳಗಿನ ಜಾತಿಯ ದುರಭಿಮಾನ ತೊರೆದು, ಪರಸ್ಪರ ಸಹೋದರರಂತೆ ಬದುಕುವಂತೆ ಸಂತ ಕನಕದಾಸರು, ತಮ್ಮ ಸಾಹಿತ್ಯದ ಮೂಲಕ ಸಾರಿದರು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಜ್ಯೋತಿ ಅಸ್ಕಿ ಹೇಳಿದರು.

ತಾಲ್ಲೂಕು ಆಡಳಿತದ ವತಿಯಿಂದ ಸೋಮವಾರ ನಡೆದ ಸಂತ ಕನಕದಾಸರ 450ನೇ ಜಯಂತಿಯಲ್ಲಿ ಮಾತನಾಡಿದ ಅವರು ‘ಬಸವಾದಿ ಶರಣರು, ಸಂತರು, ಸಾರ್ವಕಾಲಿಕವಾದ ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ. ಅವುಗಳನ್ನು ನಾವು ಅನುಸರಿಸದೆ ಅಂಧರಾಗಿ ನಡೆದಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಆಲಮಟ್ಟಿಯ ಎಂ.ಎಚ್.ಎಂ. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮಹೇಶ ಗಾಳಪ್ಪಗೋಳ ಸಂತ ಕನಕದಾಸರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು. ತಹಶೀಲ್ದಾರ್ ಎಂಎಎಸ್ ಬಾಗವಾನ, ಬಿ.ಎಚ್.ಮಾಗಿ ಸಂತ ಕನಕದಾಸರ ಸಂದೇಶ ಕುರಿತು ಮಾತನಾಡಿದರು.

ADVERTISEMENT

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚನ್ನಮ್ಮ ತಂಗಡಗಿ, ಸದಸ್ಯೆ ಪಾರ್ವತಿ ಗುಡಿಮನಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಬಿ.ನಾವದಗಿ, ವೈ.ಎಚ್.ವಿಜಯಕರ್, ಸಂತೋಷ ನಾಯ್ಕೋಡಿ, ಬಸವರಾಜ ಮುರಾಳ, ಗೋಪಿ ಮಡಿವಾಳರ, ಲಕ್ಷ್ಮಣ ಲಮಾಣಿ, ಕೃಷ್ಣಾಜಿ ಪವಾರ, ಭೀಮಶೆಪ್ಪ ಮದರಿ, ಶಂಕರಗೌಡ ಪಾಟೀಲ, ಬಿಇಓ ಎಸ್.ಡಿ.ಗಾಂಜಿ ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ ಸ್ವಾಗತಿಸಿದರು. ಟಿ.ಡಿ.ಲಮಾಣಿ ನಿರೂಪಿಸಿದರು. ಸಮಾರಂಭಕ್ಕೂ ಮುನ್ನ ಸಂತ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕನಕದಾಸ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.

ಜೆಡಿಎಸ್ ಕಚೇರಿ: ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಯಿತು. ಜೆಡಿಎಸ್ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಶರಣು ಬೂದಿಹಾಳಮಠ, ಮಹಿಳಾ ಘಟಕದ ಅಧ್ಯಕ್ಷೆ ಸಂಗಮ್ಮ ದೇವರಳ್ಳಿ, ಸಂಘಟನಾ ಕಾರ್ಯದರ್ಶಿ ಗೌರಮ್ಮ ಹುನಗುಂದ, ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಕವಡಿಮಟ್ಟಿ: ಗ್ರಾಮದ ಸಂತ ಕನಕದಾಸ ವೃತ್ತದಲ್ಲಿ, ಕನಕದಾಸರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಕನಕದಾಸ ಜಯಂತಿ ಆಚರಿಸಲಾಯಿತು. ಟಿ.ಎ.ಪಿ.ಸಿ.ಎಂ.ಎಸ್‌. ನಿರ್ದೇಶಕ ಸೋಮನಗೌಡ ಬಿರಾದಾರ, ಗ್ರಾ.ಪಂ.ಉಪಾಧ್ಯಕ್ಷ ಸಿದ್ದು ಪೂಜಾರಿ, ಚಂದಾಲಿಂಗ ಹಂಡರಗಲ್, ಬೀರಪ್ಪ ಬಳಬಟ್ಟಿ, ಬವರಾಜ ಹೊಕ್ರಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.