ADVERTISEMENT

ಇಂಡಿ ಕಾಲುವೆ ಕೆಲಸ ಪೂರ್ಣಗೊಳಿಸಿ: ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 9:08 IST
Last Updated 16 ಜುಲೈ 2017, 9:08 IST

ಇಂಡಿ: ಕೃಷ್ಣಾ ಮೇಲ್ದಂಡೆ ಯೋಜನೆಯ ಅಡಿಯಲ್ಲಿರುವ 18ನೇ ಕಾಲುವೆಯ ಕೆಲಸ 4 ವರ್ಷ ಗತಿಸಿದರೂ ಇನ್ನೂ ಪೂರ್ಣಗೊಂಡಿಲ್ಲ. ಆ ಕಾಮಗಾರಿ ಏಕೆ ವಿಳಂಬ ಮಾಡುತ್ತಿದ್ದೀರಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಪ್ರಶ್ನಿಸಿದರು. ಶನಿವಾರ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕಟ್ಟು ನಿಟ್ಟಿನ ಸೂಚನೆ ನೀಡಿದ ಅವರು, ಮುಗ್ಧ ರೈತರ ಜೀವನದ ಜೊತೆ ಚೆಲ್ಲಾಟವಾಡಿದರೆ ದೇವರು ಕ್ಷಮಿಸುವದಿಲ್ಲ. 15 ದಿನಗಳಲ್ಲಿ ಆ ಕಾಲುವೆಯ ಕೆಲಸ ಮುಗಿಸಬೇಕು ಎಂದು ಕೆ.ಬಿ.ಜೆ. ಎನ್. ಎಲ್. ಅಧಿಕಾರಿ ದಿಕ್ಷೀತ್ ಅವರಿಗೆ ಸೂಚಿಸಿದರು.

ಕೆ.ಬಿ.ಜೆ.ಎನ್. ಎಲ್. ಅಧಿಕಾರಿಗಳು ಮಳೆಗಾಲದಲ್ಲಿ ಕಾಲುವೆಗಳಿಗೆ ನೀರು ಹರಿಸಿ, ನಂತರ ರೈತರಿಗೆ ನೀರಿನ ಅವ ಶ್ಯಕತೆ ಇದ್ದಾಗ ನೀರು ಬಿಡದಿದ್ದರೆ ಏನು ಪ್ರಯೋಜನ. ಇಂತಹ ನೀತಿಗಳಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಭೀಮಾ ನದಿ ಯಲ್ಲಿಯ ಬ್ಯಾರೇಜ್‌ಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ನೀರು ಸಂಗ್ರಹಿಸಿಡಬೇಕು. ಬೇಸಿಗೆ ಹಂಗಾಮಿನಲ್ಲಿ ನದಿಯಲ್ಲಿ ನೀರು ಇರುವಂತೆ ನೋಡಿಕೊಳ್ಳಲು ತಿಳಿಸಿದ ಶಾಸಕರು ಸದ್ಯ ಯಾವ, ಯಾವ ಬ್ಯಾರೇಜಿನಲ್ಲಿ ಎಷ್ಟು ನೀರು ಸಂಗ್ರಹವಿದೆ ಎಂದು ಪ್ರಶ್ನಿಸಿದಾಗ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಬಿ.ಐ.ಬಿರಾದಾರ ಉತ್ತರಿಸಿದರು.

ಫಸಲ್ ಬಿಮಾ ಯೋಜನೆ ಎಷ್ಟರ ಮಟ್ಟಿಗೆ ಈಡೇರಿದೆ ಮತ್ತು ತಾಲ್ಲೂಕಿನಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿ ಕೊಂಡಿರುವ ಕುಟುಂಬಗಳಿಗೆ ಪ್ರಾಮಾಣಿಕ ಸೇವೆ ಮಾಡಿ ಸರ್ಕಾರದ ಪರಿಹಾರ ಮತ್ತು ಅವರ ಮಕ್ಕಳಿಗೆ ಶೈಕ್ಷಣಿಕವಾಗಿ ಸಹಾಯ ಮಾಡಬೇಕು ಎಂದು ಸೂಚಿಸಿದರು. ಈ ವೇಳೆ ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ ಮಾತನಾಡಿ, ಈಗಾಗಲೇ ಭೀಮಾ ಫಸಲ ಯೋಜನೆ 27 ಲಕ್ಷ ರೈತರಿಗೆ ಎಸ್.ಎಂ.ಎಸ್ ಮೂಲಕ ಮಾಹಿತಿ ತಿಳಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯ ನೀಡಲಾಗಿದೆ ಎಂದರು.

ADVERTISEMENT

ಬಹು ಹಳ್ಳಿ ಕುಡಿಯುವ ನೀರಿನ ಯೋಜನೆಗಳಿಗೆ ಹೆಸ್ಕಾಂ ಅಧಿಕಾರಿಗಳು ನಿರಂತರ ವಿದ್ಯುತ್ ಕಲ್ಪಿಸಿದರೆ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ. ವಸತಿ ಪ್ರದೇಶಗಳಲ್ಲಿ ಸಾಕಷ್ಟು ಜನರು ವಾಸ ವಾಗಿರುವುದರಿಂದ ಇಂತಹ ಪ್ರದೇಶಗಳಲ್ಲಿ ನಿರಂತರ ಜ್ಯೋತಿ ವಿದ್ಯುತ್ ನೀಡಲು ಸರ್ಕಾರಕ್ಕೆ ಪತ್ರ ಬರೆಯಲು ತಿಳಿಸಿದ ಅವರು ಮಹಾರಾಷ್ಟ್ರ ಮಾದ ರಿಯ ವಿದ್ಯುತ್ ವಿತರಣೆ ಬಗ್ಗೆ ಸಾರ್ವಜನಿಕರ ಅಭಿಪ್ರಾಯವೇನು ಮತ್ತು ಜನರ ಬೇಡಿಕೆ ಇದ್ದರೆ ಮಾತ್ರ ಪ್ರಾರಂಭಿಸಿ ಸಾರ್ವಜನಿಕರಿಗೆ ಬೇಡವಾದರೆ ಸ್ಥಗಿತ ಮಾಡಿ ಎಂದು ಹೆಸ್ಕಾಂ ಎಂಜಿನಿಯರ್‌ ಎಸ್.ಎಂ.ಮೇಡೆದಾರವರಿಗೆ ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆಗಳ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸಬಾರದು. ನಿಮ್ಮ ವಸತಿ ನಿಲಯಗಳಲ್ಲಿ ಅತೀ ಹೆಚ್ಚು ವಾಸ ವಾಗಿರುವ ಬಡ ವಿದ್ಯಾರ್ಥಿಗಳಿಗೆ ಏನಾ ದರೂ ಆದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಪಟ್ಟಣದಲ್ಲಿ ಹಿಂದೆ ಕಳಪೆ ಮಟ್ಟದ ಆಹಾರ ಸೇವನೆಯಿಂದ  3 ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವ ಘಟನೆ ನಡೆದಿರುವುದು ಖೇದಕರ ಸಂಗತಿ. ಇನ್ನು ಮುಂದೆ ತಾಲ್ಲೂಕಿನಾ ದ್ಯಂತ ಎಲ್ಲ ವಸತಿ ನಿಲಯಗಳಿಗೆ ತಹ ಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯ್ತಿ ಅಧಿಕಾರಿ ಒಳಗೊಂಡ ಒಂದು ಕಮಿಟಿ ರಚನೆ ಮಾಡಿ, ಪ್ರತಿ ವಸತಿ ನಿಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಯೋಗ ಕ್ಷೇಮ ವಿಚಾರಿಬೇಕು ಎಂದು ಸೂಚನೆ ನೀಡಿದರು.

ಪಟ್ಟಣದ ರಸ್ತೆ ವಿಸ್ತರಣೆಗೆ ಸಾರ್ವ ಜನಿಕರು ಮತ್ತು ವ್ಯಾಪಾರಸ್ಥರು ಸ್ಫದಿಸಿದ್ದಾರೆ. ಅದರೆ ಶಹಾ ಕುಟುಂಬಕ್ಕೆ ತೊಂದರೆಯಾಗಿದೆ ಎಂದು ಹೇಳಿರುವ ಹಿನ್ನಲೆಯಲ್ಲಿ ಅಧಿಕಾರಿಗಳು ಅವರಿಗೆ ಸರ್ಕಾರದಿಂದ ಸಹಾಯ ಬರುತ್ತಿದ್ದರೆ ಪ್ರಮಾಣಿಕವಾಗಿ ಸ್ಪಂದಿಸಿ. ಮೆಗಾ ಮಾರ್ಕೆಟ್ ನಿರ್ಮಾಣಕ್ಕೆ ಸರ್ಕಾರದಿಂದ ₹ 10 ಕೋಟಿ ಬಿಡುಗಡೆಯಾಗಿದೆ. ಒಟ್ಟು ₹ 32 ಕೋಟಿ ಹಣ ತಗಲುವುದರಿಂದ ಬ್ಯಾಂಕಿನ ಸಾಲ ಹಾಗೂ ವ್ಯಾಪಾರಸ್ಥ ರಿಂದ ಸಂಗ್ರಹಿಸಿ ಮೆಗಾ ಮಾರ್ಕೆಟ್ ಸ್ಥಾಪಿಸಿ, ಅಂಗಡಿ ಕಳೆದುಕೊಂಡವರಿಗೆ ಮಳಿಗೆ ನೀಡಲಾಗುವುದು ಎಂದರು.

ಅರಣ್ಯ ಇಲಾಖೆಯವರು ಗಿಡಮರ ಕಡಿಯಬೇಕಾದರೆ ಮೊದಲು ಗಿಡ ನೆಡುವ ಕೆಲಸ ಮಾಡಬೇಕು. ಸರ್ಕಾರಿ ಕಚೇರಿ, ಶಾಲಾ, ಕಾಲೇಜುಗಳ ಆವರಣ ಮತ್ತು ಕೆರೆಗಳ ದಡಗಳಲ್ಲಿ ಅರಣ್ಯ ಇಲಾಖೆ ಗಿಡಮರಗಳನ್ನು ಬೆಳೆಸಬೇಕು. ಇದರಿಂದ ಕೆರೆ ಒತ್ತುವರಿ ಕಡಿಮೆ ಮಾಡಿ ದಂತಾಗುತ್ತದೆ ಎಂದು ಹೇಳಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ರುಕ್ಮುದೀನ್ ತದ್ದೇವಾಡಿ,  ಅಧಿಕಾರಿ ರಾಜಕುಮಾರ ತೊರವಿ, ಮನೋಜ ಕುಮಾರ ಗಡಬಳ್ಳಿ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ಬಿ.ಎಫ್. ನಾಯ್ಕರ, ಎಸ್.ಎಚ್. ಾಟೀಲ, ತಹ ಶೀಲ್ದಾರ್‌ ಸಂತೋಷ ಮ್ಯಾಕೇರಿ, ಎಂಜಿನಿಯರ್‌ ಎಸ್.ಆರ್ ರುದ್ರವಾಡಿ, ಚಿದಾನಂದ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.