ADVERTISEMENT

‘ಉದ್ಯೋಗ ಆಕಾಂಕ್ಷಿಗಳಿಗೆ ಕೌಶಲ ತರಬೇತಿ ಅವಶ್ಯ’

​ಪ್ರಜಾವಾಣಿ ವಾರ್ತೆ
Published 17 ಮೇ 2017, 7:00 IST
Last Updated 17 ಮೇ 2017, 7:00 IST

ಬಸವನಬಾಗೇವಾಡಿ: ನಿರುದ್ಯೋಗಿ ಗಳಿಗೆ ತರಬೇತಿ ನೀಡಿ ಉದ್ಯೋಗ ನೀಡುವ ಉದ್ದೇಶದಿಂದ ಕೌಶಲ ತರ ಬೇತಿ ನೋಂದಣಿ ಕಾರ್ಯ ಆರಂಭಿಸಲಾ ಗಿದೆ. ಉದ್ಯೋಗ ಆಕಾಂಕ್ಷಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಹಶೀಲ್ದಾರ ಎಂ.ಎನ್‌. ಚೋರಗಸ್ತಿ ಹೇಳಿದರು.

ಪಟ್ಟಣದ ತಾ.ಪಂ ರಾಜೀವ್‌ ಗಾಂಧಿ ಸೇವಾ ಕೇಂದ್ರದ ಸಭಾಭವನದಲ್ಲಿ ಸೋಮವಾರ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯ್ತಿ ಸಹ ಯೋಗದಲ್ಲಿ ಹಮ್ಮಿಕೊಂಡಿದ್ದ ಕೌಶಲ ತರಬೇತಿ ಆಕಾಂಕ್ಷಿತ ನಿರುದ್ಯೋಗಿ ಯುವ ಜನರ ಬೇಡಿಕೆ ಸಮೀಕ್ಷೆ ಹಾಗೂ ನೋಂದಣಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ತಾ.ಪಂ ಕಾರ್ಯನಿರ್ವಾಹಕ ಅಧಿ ಕಾರಿ ಬಿ.ಎಸ್‌.ರಾಠೋಡ ಮಾತನಾಡಿ, ನಿರುದ್ಯೋಗಿ ಯುವ ಜನರು ಕೌಶಲ್ಯ ತರಬೇತಿ ಪಡೆಯುವ ಮುನ್ನ ತಮ್ಮ ಹೆಸರನ್ನು ನೋಂದಾಯಿಸುವುದು ಅಗತ್ಯವಾಗಿದೆ. ಹೆಸರು ನೋಂದಣಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.

ADVERTISEMENT

18 ರಿಂದ 35 ವರ್ಷದ ವರೆಗಿನ ನಿರುದ್ಯೋಗಿ ಯುವ ಜನತೆ ತಮ್ಮ ಹೆಸರನ್ನು ನೋಂದಾಯಿಸಬೇಕು. ಕೌಶಲ್ಯ ತರಬೇತಿಯನ್ನು ಸಮರ್ಪಕವಾಗಿ ಪಡೆಯುವ ಮೂಲಕ ಉದ್ಯೋಗ ವಂತರಾಗಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಪುರಸಭೆ ಅಧ್ಯಕ್ಷ ಬಸವರಾಜ ತುಂಬಗಿ ಮಾತನಾ ಡಿದರು. ತಾ.ಪಂ ಅಧ್ಯಕ್ಷೆ ಬೇಬಿ ಇಂಗಳೇಶ್ವರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಕುಂತಲಾ ಬಿರಾದಾರ ವೇದಿಕೆಯಲ್ಲಿದ್ದರು. ಶಶಿ ಪಾಟೀಲ ಸ್ವಾಗತಿಸಿ, ನಿರೂಪಿಸಿದರು.

‘ಕೌಶಲಯುಕ್ತ ರಾಷ್ಟ್ರವಾಗಲಿ’
ಸಿಂದಗಿ: ಪ್ರಧಾನಿ ನರೇಂದ್ರ ಮೋದಿ ಅವರ ಕೌಶಲ ಅಭಿವೃದ್ಧಿ ಯೋಜನೆ ಅಲ್ಪ ಶಿಕ್ಷಣವಂತ ಯುವಕರಲ್ಲಿನ ಕೌಶಲ ಹಾಗೂ ದುಡಿಮೆಯ ಉತ್ಸಾಹಕ್ಕೆ ಹೊಸ ಆಯಾಮ ನೀಡಿದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ರಾಜ್ಯ ಸರ್ಕಾರ ರಾಜ್ಯದಾದ್ಯಂತ ಜಿ.ಪಂ, ತಾ.ಪಂ. ಹಾಗೂ ಕಂದಾಯ ಇಲಾಖೆಗಳ ಸಹ ಯೋಗದಲ್ಲಿ ಮುಖ್ಯಮಂತ್ರಿಗಳ ಕೌಶಲ ಅಭಿವೃದ್ಧಿ ಕರ್ನಾಟಕ ಕಾರ್ಯಕ್ರಮದಲ್ಲಿ ಅವರು ವೆಬ್‌ ಪೋರ್ಟಲ್‌ಗೆ ಚಾಲನೆ ನೀಡಿ ಮಾತನಾಡಿದರು.

ಚೀನಾ ಅಲ್ಲಿನ ಯುವಕರ ಕೌಶಲ ಗಳನ್ನು ಬಳಸಿಕೊಂಡು ವಿಶ್ವಕ್ಕೆ ಸವಾಲಿನ ರಾಷ್ಟ್ರವಾಗಿದೆ. ಈ ಜಾಗತಿಕ ಸವಾಲನ್ನು ಎದುರಿಸುವ ಮೂಲಕ ದೇಶದ ಯುವಕರು ಬಲಶಾಲಿ ಭಾರತದ ನಿರ್ಮಾಣದಲ್ಲಿ ತಮ ಕೌಶಲ ಬಳಸಿ ಕೊಂಡು ಕೌಶಲಯುತವಾದ ದೇಶವನ್ನು ಕಟ್ಟೋಣ ಎಂದರು.

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸುಮಾರು 50ಲಕ್ಷ ನಿರುದ್ಯೋಗಿಗಳಿಗೆ ಅರ್ಹತೆ ಹಾಗೂ ಶೈಕ್ಷಣಿಕ ಆಧಾರದ ಮೇಲೆ ಉದ್ಯೋಗ ಒದಗಿಸುವ ಮೂಲಕ ರಾಜ್ಯ ಸರ್ಕಾರ ಈ ಯೋಜನೆಯ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಹೇಳಿದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ಸುಭಾಷ ಟಕ್ಕಳಕಿ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಜನೆಯಡಿ ಕನಿಷ್ಠ 8ನೇ ವರ್ಗದವರೆಗೆ ಉತ್ತೀರ್ಣರಾದ ನಿರುದ್ಯೋಗಿ ಯುವಕರಿಗಾಗಿ ಈ ಯೋಜನೆಯಡಿ ಉದ್ಯೋಗ ತರಬೇತಿ ನೀಡಲಾಗುತ್ತಿದೆ. ಸರ್ಕಾರ ಈ ಯೋಜನೆ ಯಡಿ ಅಂದಾಜು 5 ಲಕ್ಷ ನಿರುದ್ಯೋಗಿ ಯುವಕರನ್ನು ನೊಂದಾ ಯಿಸಿಕೊಳ್ಳುವ ಮೂಲಕ ಅವರಿಗೆ ಉದ್ಯೋಗ ತರಬೇತಿ ನೀಡಲಾಗುತ್ತಿದೆ ಎಂದರು.

ಹೆಸರು ನೊಂದಾಯಿಸಲು ಅಭ್ಯರ್ಥಿ ಗಳು ತಮ್ಮ ಅಂಕಪಟ್ಟಿ ಹಾಗೂ ಆಧಾರ ಕಾರ್ಡನೊಂದಿಗೆ ಸ್ಥಳೀಯ ತಾಪಂ ಸಭಾಭವನದಲ್ಲಿ ಪ್ರೋಗ್ರಾಮ್ ಆಪ್‌ ರೇಟರ್‌ನ್ನು ಭೇಟಿ ಮಾಡಿ ಸರ್ಕಾರಿ ವೆಬ್‌ಸೈಟ್‌ನ ಹೆಸರು ನೊಂದಾಯಿ ಸಬೇಕು. ಅಲ್ಲದೇ ಮುಂದಿನ ದಿನಗಳಲ್ಲಿ ಹೆಸರು ನೊಂದಾಯಿಸುವ ಕಾರ್ಯವನ್ನು ಸ್ಥಳೀಯ ಗ್ರಾಪಂಗಳಿಂದಲೇ ಚಾಲನೆ ಗೊಳಿಸಲಾಗುವುದು ಎಂದು ಹೇಳಿದರು.

ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಲಲಿತಾ ದೊಡಮನಿ ಅಧ್ಯಕ್ಷತೆ ವಹಿ ಸಿದ್ದರು.ತಹಶೀಲ್ದಾರ್ ವೀರೇಶ ಬಿರಾ ದಾರ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ವಿ.ಎಸ್.ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.