ADVERTISEMENT

ಕಬ್ಬು ಬೆಳೆಗಾರರ ಧರಣಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 6:47 IST
Last Updated 17 ನವೆಂಬರ್ 2017, 6:47 IST

ಆಲಮೇಲ: ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಕಬ್ಬು ರೈತರ ಪ್ರತಿಭಟನೆ ಬುಧವಾರ ಅಂತ್ಯಗೊಂಡಿದೆ. ಕೆಪಿಆರ್ ಕಾರ್ಖಾನೆಗೆ ಬೀಗ ಹಾಕಿ ಧರಣಿ ನಡೆಸಲಾಗುತ್ತಿತ್ತು. ಕಳೆದ ವರ್ಷದಲ್ಲಿನ ಬಾಕಿ ಹಣದ ಪೈಕಿ ₹ 100 ನೀಡುವುದಾಗಿ ಕಾರ್ಖಾನೆ ಅಧಿಕಾರಿ ಗಂಗಾಧರ ಹುಕ್ಕೇರಿ ಘೋಷಿಸಿದರು. ಈ ವರ್ಷದ ಕಬ್ಬಿಗೆ ಇನ್ನುಳಿದ ಕಾರ್ಖಾನೆಗಳು ಎಷ್ಟು ದರ ನೀಡುತ್ತವೆ ಅಷ್ಟು ದರ ಪಾವತಿಸುವುದಾಗಿ ತಿಳಿಸಿದಾಗ ಕಬ್ಬು ಹೋರಾಟಗಾರರು ಧರಣಿ ಅಂತ್ಯಗೊಳಿಸಿದರು.

ಕಬ್ಬಿನ ದರ ನಿಗದಿಗಾಗಿ ನಾದ ಕೆ.ಡಿ.ಯಲ್ಲಿರುವ ಜಮಖಂಡಿ ಶುಗರ್ಸ್‌ಗೆ ಗುರುವಾರ ಬೀಗ ಹಾಕುವುದಾಗಿ ರೈತರು ಹೇಳಿದ್ದಾರೆ. ಕಾರ್ಖಾನೆಗೆ ಕಬ್ಬು ತುಂಬಿದ 300ಕ್ಕೂ ಹೆಚ್ಚು ಟ್ಯಾಕ್ಟರ್‌ಗಳು ಬುಧವಾರ ಬಂದಿದ್ದರಿಂದ ಬೀಗ ಹಾಕುವುದನ್ನು ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT