ADVERTISEMENT

ಖಾಸಗಿ ಆಸ್ಪತ್ರೆಗಳಲ್ಲಿ ದರಪಟ್ಟಿ ಅಳವಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 12:40 IST
Last Updated 21 ಮಾರ್ಚ್ 2018, 12:40 IST

ವಿಜಯಪುರ: ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿ ಅಳವಡಿಸಲು ಹಾಗೂ ಆರೋಗ್ಯ ಭಾಗ್ಯ ಯೋಜನೆ ಕಾರ್ಡ್‌ ವಿತರಣೆ ಮಾಡುವಂತೆ ಆಗ್ರಹಿಸಿ ಸಾರ್ವಜನಿಕರು ಈಚೆಗೆ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರಗೆ ಮನವಿ ಸಲ್ಲಿಸಿದರು.

ಅಬ್ದುಲ್‌ ರಜಾಕ ಸಂಖ ಮಾತನಾಡಿ, ‘ ಖಾಸಗಿ ಆಸ್ಪತ್ರೆಗಳಲ್ಲಿ ಮಾ.3 ರಿಂದಲೇ ದರಪಟ್ಟಿ ಪ್ರಕಟಿಸಬೇಕು. ಆದೇಶ ಉಲ್ಲಂಘಿಸಿದರೆ ಕೆಪಿಎಂಇ ಅನ್ವಯ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಆರೋಗ್ಯ ಸಚಿವ ರಮೇಶಕುಮಾರ ಅವರು ಆದೇಶ ಹೊರಡಿಸಿದ್ದಾರೆ. ಆದರೆ. ಈವರೆಗೂ ಖಾಸಗಿ ಆಸ್ಪತ್ರೆ ಗಳಲ್ಲಿ ದರಪಟ್ಟಿ ಅಳವಡಿಸಿಲ್ಲ ಎಂದು ಕಿಡಿಕಾರಿದರು.

ಜಿಲ್ಲೆಯಲ್ಲಿ ಯೂನಿವರ್ಸಲ್ ಹೆಲ್ತ್ ಕಾರ್ಡ್‌ ವಿತರಿಸಬೇಕು, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿ ಅಳವಡಿಸಲು ಹಾಗೂ ಆರೋಗ್ಯ ಭಾಗ್ಯ ಯೋಜನೆಯ ಕಾರ್ಡ್‌ ವಿತರಣೆ ಮಾಡುವಂತೆ ಸೂಚಿಸಬೇಕು ಎಂದರು.

ADVERTISEMENT

ಸಾತನಗೌಡ ಪಾಟೀಲ, ಸುಭಾಸ ಕನ್ನೊಳ್ಳಿ, ಸುರೇಶ ಹಡಪದ, ಗೋರೆಪೀರಾ ಮುತುವಲಿ, ಅಬ್ದುಲ್ ಅಜೀಜ ರಬಲಿ, ರಿಯಾಜ ಅಹ್ಮದ ಲಾಹೋರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.