ADVERTISEMENT

ಚಡಚಣ ಪಟ್ಟಕ್ಕೆ ಸಿಎಂ ಆಗಮನ 25ಕ್ಕೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 9:50 IST
Last Updated 18 ನವೆಂಬರ್ 2017, 9:50 IST
ಹೊರ್ತಿ ಸಮೀಪದ ಇಂಚಗೇರಿ ಗ್ರಾಮದ ಮಾಧವಾನಂದಜಿ ಮಠದಲ್ಲಿ ಶುಕ್ರವಾರ ಚಡಚಣ ಪಟ್ಟಕ್ಕೆ ಮುಖ್ಯಮಂತ್ರಿ ಆಗಮನ ನಿಮಿತ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಪ್ರೊ. ಶಾಸಕ ರಾಜು ಆಲಗೂರ ಮಾತನಾಡಿದರು
ಹೊರ್ತಿ ಸಮೀಪದ ಇಂಚಗೇರಿ ಗ್ರಾಮದ ಮಾಧವಾನಂದಜಿ ಮಠದಲ್ಲಿ ಶುಕ್ರವಾರ ಚಡಚಣ ಪಟ್ಟಕ್ಕೆ ಮುಖ್ಯಮಂತ್ರಿ ಆಗಮನ ನಿಮಿತ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಪ್ರೊ. ಶಾಸಕ ರಾಜು ಆಲಗೂರ ಮಾತನಾಡಿದರು   

ಹೊರ್ತಿ: ನಾಗಠಾಣ ಮತಕೇತ್ರದಲ್ಲಿ ಕೈಗೊಳ್ಳಲಾಗಿರುವ 413 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಇದೇ 25 ರಂದು ಚಡಚಣ ಪಟ್ಟಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಮಿಸಲಿದ್ದಾರೆ ಎಂದು ಶಾಸಕ ಪ್ರೊ.ರಾಜು ಆಲಗೂರ ತಿಳಿಸಿದರು.

ಸಮೀಪದ ಇಂಚಗೇರಿ ಗ್ರಾಮದ ಮಾಧವಾನಂದಜಿ ಮಠದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನದ ನಿಮಿತ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಚಡಚಣ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ಸೇರಿದಂತೆ ಮತಕ್ಷೇತ್ರದ ವಿವಿಧ ಕಾಮಗಾರಿಗಳ ಭೂಮಿಪೂಜೆ, ಪೂರ್ಣಗೊಂಡ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಇಂಚಗೇರಿ ಮಠದ ರೇವಣಸಿದ್ಧೇಶ್ವರ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಚಡಚಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಹೇಬಗೌಡ ಬಿರಾದಾರ-, ಬಿಇಒ ಎಚ್.ಎಚ್.ತಿಪ್ಪಣ್ಣ, ದೈಹಿಕ ಶಿಕ್ಷಣಾಧಿಕಾರಿ ತಮ್ಮಣ್ಣ, ಪಿಡಿಒ ಮಹೇಶ ದೈವಾಡಿ, ಮಲ್ಲಣ್ಣ ಸಕ್ರಿ, ಕಲ್ಲಪ್ಪ ಅರವತ್ತಿ, ಮೌಲಾಲಿ ವಾಲಿಕಾರ, ಕೆ.ಕೆ.ಕಳಸದವರ, ಶರಣಪ್ಪ ಬೆಳ್ಳೆನವರ, ವಿನೋಬಗೌಡ ಬಿರಾದಾರ, ಭೀಮರಾಯಗೌಡ ಬಿರಾದಾರ, ಯಲ್ಲಪ್ಪ ನವತ್ರೆ, ಚಂದ್ರಕಾಂತ ಬೆಳ್ಳೆನವರ, ಮುತ್ತಣ್ಣ ಬೆಳ್ಳೆನವರ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.