ADVERTISEMENT

ಜಂಗಮ ಸಮುದಾಯ ಸಂಘಟನೆ ಅವಶ್ಯ

ವಿಜಯಪುರ ಜಿಲ್ಲಾ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಸಭೆ ಇಂಗಿತ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 13:01 IST
Last Updated 23 ಮಾರ್ಚ್ 2018, 13:01 IST

ದೇವರ ಹಿಪ್ಪರಗಿ: ‘ಜಂಗಮ ಸಮುದಾಯದವರು ಸಂಘಟಿತರಾಗುವ ಮೂಲಕ ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಮಾಜವನ್ನು ಸದೃಢಗೊಳಿಸುವುದು ಅತ್ಯವಶ್ಯವಿದೆ’ ಎಂದು ಮುಖಂಡ ಗುರುಪಾದಯ್ಯ ಗಚ್ಚಿನಮಠ ಹೇಳಿದರು.

ಪಟ್ಟಣದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಬುಧವಾರ ವಿಜಯಪುರ ಜಿಲ್ಲಾ ಜಂಗಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ವೀರಶೈವ ಲಿಂಗಾಯತ ಸಮಾವೇಶದ ಕುರಿತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜಂಗಮರು ಸನಾತನ ಕಾಲ ದಿಂದಲೂ ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಹಾಗೂ ವಿಶ್ವ ಶಾಂತಿ
ಯನ್ನು ಪ್ರತಿಪಾದಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಜೊತೆಗೆ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಆದರೆ, ಆರ್ಥಿಕವಾಗಿ ಕಡುಬಡವರಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಆದ್ದರಿಂದ ನಾವು ಸಂಘಟಿತರಾಗಿ ಸಮುದಾಯದವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕು ಎಂದರು.

ADVERTISEMENT

ರಾಜ್ಯ ಸರ್ಕಾರ ರಾಜಕೀಯ ಲಾಭಕ್ಕಾಗಿ ಧರ್ಮ ವಿಭಜನೆಗೆ ಮುಂದಾಗಿದೆ. ದ್ವಂದ್ವ ನೀತಿಯನ್ನು ಅರಿತು ಜಂಗಮ ಸಮುದಾಯ ಮುಂದಿನ ಹೆಜ್ಜೆ ಇಡುವ ಯೋಜನೆ ರೂಪಿಸುವ ಜೊತೆಗೆ ಶಕ್ತಿ ಪ್ರದರ್ಶನ ತೋರಿಸುವ ಅಗತ್ಯವಿದೆ ಎಂದರು.

ಡಾ.ಮಂಜುನಾಥ ಮಠ, ಚಿದಾನಂದ ಹಿರೇಮಠ (ಹರನಾಳ), ನೀಲಯ್ಯ ಅರಳಿಮಟ್ಟಿ, ಶಾಂತಯ್ಯ ಜಡಿಮಠ, ಮಹೇಶ ಬುದ್ನಿ, ಈರಣ್ಣ ವಸ್ತ್ರದ, ಈರಣ್ಣ ಟಾಕಳಿಮಠ, ಸೋಮಶೇಖರ ಹಿರೇಮಠ, ಆನಂದ ಜಡಿಮಠ, ಪ್ರಕಾಶ ಹಿರೇಮಠ, ಕುಮಾರಸ್ವಾಮಿ ಹಿರೇಮಠ, ಕಾಶೀನಾಥ ಹಿರೇಮಠ, ಮೃತ್ಯುಂಜಯ ಮಠ, ಸಿದ್ದಯ್ಯ ಮಲ್ಲಿಕಾರ್ಜುನಮಠ, ಶಿವಯ್ಯ ಸದಯ್ಯನಮಠ, ಈರಯ್ಯ ತಡಪಟ್ಟಿ, ಬಸವರಾಜ ಡೋಣುರಮಠ, ವೀರೇಶ ಬುದ್ನಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.