ADVERTISEMENT

‘ಜವಾಬ್ದಾರಿಯಿಂದ ಮಾತನಾಡಲು ಕಲಿಯಿರಿ’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2017, 6:18 IST
Last Updated 5 ಡಿಸೆಂಬರ್ 2017, 6:18 IST

ವಿಜಯಪುರ: ಮಹೇಶ ವಿಕ್ರಮ ಹೆಗ್ಡೆ, ಸಂಸದ ಪ್ರತಾಪ ಸಿಂಹ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವೀರಮಾತೆ ಕಿತ್ತೂರು ಚನ್ನಮ್ಮ, ಒನಕೆ ಓಬವ್ವ ಅವರನ್ನು ಅಪಮಾನಗೊಳಿಸಿದ್ದು, ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಬೇಕು ಎಂದು ಆಗ್ರಹಿಸಿ ನಗರದ ಗಾಂಧಿ ವೃತ್ತದಲ್ಲಿ ಕಾನೂನು ರಕ್ಷಣಾ ವೇದಿಕೆಯಿಂದ ಈಚೆಗೆ ಪ್ರತಿಭಟನೆ ನಡೆಸಲಾಯಿತು.

ಸಂಘಟನೆಯ ಅಧ್ಯಕ್ಷ ದಾನಪ್ಪಗೌಡ ಚನಗೊಂಡ ಮಾತನಾಡಿ ‘ಮಹೇಶ ವಿಕ್ರಮ ಹೆಗ್ಡೆ ಎನ್ನುವ ವ್ಯಕ್ತಿ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಇತಿಹಾಸದ ಪುಟದಲ್ಲಿ ತಮ್ಮದೇ ಮಹತ್ವ ಹೊಂದಿರುವ ಇಬ್ಬರು ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಬರೆದುಕೊಂಡಿದ್ದಾರೆ. ಇವರನ್ನು ಮೊದಲು ಗಡಿ ಪಾರು ಮಾಡಬೇಕು’ ಎಂದು ಒತ್ತಾಯಿಸಿದರು.

‘ಸಂಸದ ಪ್ರತಾಪ ಸಿಂಹ ಜವಾಬ್ದಾರಿಯುತ ಜನಪ್ರತಿನಿಧಿಯಾಗಿದ್ದು, ಅಪಮಾನಕರ ಹೇಳಿಕೆ ಖಂಡಿಸದೆ, ತಮ್ಮ ಅಭಿಮಾನಿ ಹೆಸರಿನ ಫೇಸ್‌ಬುಕ್‌ ಖಾತೆ ತಮ್ಮದಲ್ಲ ಎನ್ನುವ ಮೂಲಕ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ. ಇದು ಕನ್ನಡಿಗರ ಮನಸ್ಸಿಗೆ ಘಾಸಿಯುಂಟು ಮಾಡಿದೆ’ ಎಂದು ಚನಗೊಂಡ ದೂರಿದರು.

ADVERTISEMENT

ಸಂಘಟನೆಯ ಮುನಿರ ಎಂ.ಖಾನ ವಿಜಯಪುರ, ಶಿವಾನಂದ ಹಿಪ್ಪರಗಿ, ನೀಲಕಂಠ ತೋಳಬಂದಿ, ಭೀಮರಾಯ ಗುಡದಿನ್ನಿ, ಮಡಿವಾಳಪ್ಪ ಮಣೂರ, ರವಿ ಎಂ.ಬೋರಗಿ, ಅಪ್ಪು ರಾಠೋಡ, ಮಲಿಕ್ ಯಾಳವಾರ, ನಾನಾಗೌಡ ಸುಂಬಡ, ಶರಣು ಜಲವಾದಿ, ಅನಿಲ ಕಾಖಂಡಕಿ, ಶ್ರೀಕಾಂತ ಪೊಲೀಸ್‌ ಪಾಟೀಲ, ಬೀರಪ್ಪ ಬೂದಿಹಾಳ, ನಿಂಗನಗೌಡ ಮೂಲಿಮನಿ, ಅಶೋಕ ದ್ಯಾಪುರ, ರಾಮಪ್ಪ ಬೂದಿಹಾಳ, ಶಂಕರಗೌಡ ಸನದೊಡ್ಡಿ, ಆಬೀದ ಹೊನವಾಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.