ADVERTISEMENT

ದಡಾರ ಲಸಿಕಾ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 9:10 IST
Last Updated 8 ಫೆಬ್ರುವರಿ 2017, 9:10 IST

ಬಂಡೆಪ್ಪನ ಸಾಲವಾಡಗಿ(ತಾಳಿಕೋಟೆ): ‘ರುಬೆಲ್ಲಾ' ಕೂಡ ವೈರಾಣುವಿನಿಂದ ಆಗುವ ಸೋಂಕಾಗಿದ್ದು, ಮಕ್ಕಳು ಹಾಗೂ ಪ್ರಾಯದವರಲ್ಲಿ (ದೊಡ್ಡವ ರಲ್ಲಿ) ಕಂಡುಬರುತ್ತದೆ ಎಂದು  ಕಾರಗನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತೆ ಸವಿತಾ ಇನಾಮದಾರ ಹೇಳಿದರು.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಬಡಾವಣೆ)ಯಲ್ಲಿ  ಮಂಗಳವಾರ ದಡಾರ ಮತ್ತು ರುಬೆಲ್ಲಾ ಲಸಿಕೆ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಡಾರ ಎನ್ನುವುದು,  ಹೆಚ್ಚಾಗಿ ಮಕ್ಕಳಲ್ಲಿ  ಕಂಡುಬರುವ ಒಂದು ಮಾರಕ ಹಾಗೂ ಸಾಂಕ್ರಾಮಿಕ ಕಾಯಿಲೆಯಾಗಿರುತ್ತದೆ. ದಡಾರದಿಂದ ಪ್ರತೀ ವರ್ಷ 1 ಲಕ್ಷದಷ್ಟು  ಮಕ್ಕಳು ಸಾವನ್ನಪ್ಪುತ್ತಾರೆ. ಇದರಲ್ಲಿ  ಮೂರನೇ ಒಂದು ಭಾಗದಷ್ಟು  ಮಕ್ಕಳು ಭಾರತದಲ್ಲಿ ಸಾವಿಗೀಡಾಗುತ್ತಾರೆ ಎಂದು ಅವರು ತಿಳಿಸಿದರು.

ಇದರಿಂದ ಪಾರಾಗಲೂ 15 ವಯೋಮಾನದೊಳಗಿನ ಎಲ್ಲ ಮಕ್ಕಳಿಗೂ ಲಸಿಕೆ ಹಾಕುವ ಮೂಲಕ ಸಂಭವನೀಯ ಅಪಾಯದಿಂದ ಪಾರಾಗಬಹುದು. ಆದ್ದರಿಂದ ಎಲ್ಲ ಪಾಲಕರು ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯ ದೈಹಿಕ ಶಿಕ್ಷಣ ಪರಿವೀಕ್ಷಕ  ಎಸ್.ಬಿ. ಚಲವಾದಿ ಮಾತನಾಡಿ, ದಡಾರವು ವೈರಾಣುವಿನಿಂದ ಹರಡುವ ಸೋಂಕಾಗಿದ್ದು ಮನುಷ್ಯರಲ್ಲಿ  ಮಾತ್ರ ಕಂಡು ಬರುತ್ತದೆ. ಈ ಕಾಯಿಲೆಯು ಉಸಿರಾಟದ ಮೂಲಕ ಅಥವಾ ನೇರ ಸಂಪರ್ಕದಿಂದ ಹರಡುತ್ತದೆ. ಆದ್ದರಿಂದ ರೋಗ ಬಂದ ನಂತರ ಪರದಾಡು ವುದಕ್ಕಿಂತ ಮೊದಲೆ ಸೂಕ್ತ ಚಿಕಿತ್ಸೆ ಪಡೆದು ದೇಶವನ್ನು ದಡಾರ ಮುಕ್ತಗೊಳಿಸೋಣ ಎಂದರು.

ಶಿಕ್ಷಣ ಸಂಯೋಜಕ  ಎನ್.ಬಿ. ಪಿಂಜಾರ. ಸಿ.ಆರ್.ಪಿ.  ಎಸ್.ಎಸ್. ಕುಲಕರ್ಣಿ  ಶಿಕ್ಷಕ ವೃಂದ ಇದ್ದರು. ಭಾಗವಹಿಸಿದ್ದರು. ಮುಖ್ಯ ಶಿಕ್ಷಕ  ಡಿ.ಬಿ. ಬಿರಾದಾರ ಸ್ವಾಗತಿಸಿದರು.  ಎಸ್.ಬಿ. ಕೂಗಲ್ ವಂದಿಸಿದರು.

ಹೊರ್ತಿ ವರದಿ
ದಡಾರ ಮತ್ತು ರುಬೆಲ್ಲಾ (ಎಂಆರ್)ಲಸಿಕೆಯು ದಡಾರ ಮತ್ತು ರುಬೆಲ್ಲಾ ಎಂಬ ಎರಡು ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. ಆದ ಕಾರಣ ಎಂಆರ್ ಲಸಿಕೆಯನ್ನು ತಪ್ಪದೇ ಹಾಕಿಸಿ ರೋಗ ವನ್ನು ಹೋಗಲಾಡಿಸಲು ಎಲ್ಲರೂ ಸಹಕರಿಸಬೇಕು ಎಂದು ಇಂಚಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಾಯಬಣ್ಣ ಗುಣಕಿ ಸಲಹೆ ನೀಡಿದರು.

ಇಲ್ಲಿಗೆ ಸಮೀಪದ ಇಂಚಗೇರಿ ಗ್ರಾಮದಲ್ಲಿ ದಡಾರ ಮತ್ತು ರುಬೆಲ್ಲಾ ತಡೆಗಟ್ಟುವ ಕುರಿತು ಸ್ಥಳೀಯ ಪ್ರಾಥಮಿಕ ಆ ರೋಗ್ಯ ಕೇಂದ್ರ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ಎಚ್‌ಪಿಎಸ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ದಡಾರ ಮತ್ತು ರುಬೆಲ್ಲಾ ರೋಗ ಹೋಗಲಾಡಿ ಸುವ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಕೆ. ಕಳಸದವರ, ಇಂಚಗೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಿಎಚ್‌ಇಓ ಎಸ್.ಆರ್.ಪಾಟೀಲ, ಡಾ.ಅಶ್ವಿನಿ ಚೌಗುಲೆ, ಎಸ್.ಐ.ಹುನ್ನೂರ, ಎಸ್.ಡಿ.ಅಂಕಲಗಿ, ಶ್ರೀನಿವಾಸ ಚಿಕ್ಕಲಕಿ, ಮುಖ್ಯ ಶಿಕ್ಷಕ ಆರ್.ಎನ್.ಕಂದಗಲ್, ರಮೇಶ ಬೆಳ್ಳೆನವರ, ಚಿದಾನಂದ ಸಾತಲಗಾಂವ, ಸ್ಥಳೀಯ ಆರೋಗ್ಯ ಸಿಬ್ಬಂದಿ ಆಶಾ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.