ADVERTISEMENT

ನಿಡಗುಂದಿಮಠಗೆ ‘ಮಹಾವಿದ್ಯಾಪತಿ’ ಪಟ್ಟ

ಟಕ್ಕಳಕಿಯಲ್ಲಿ ಮಕ್ಕಳಿಗಾಗಿ ನಡೆದ ವಿಶಿಷ್ಟ ಕಾರ್ಯಕ್ರಮ: ವಿಜೇತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 6:34 IST
Last Updated 6 ಫೆಬ್ರುವರಿ 2017, 6:34 IST

ಬಸವನಬಾಗೇವಾಡಿ: ಹಾಟ್ ಸೀಟ್ ಮೂಲಕ ತೀವ್ರ ಕುತೂಹಲ ಕೆರಳಿಸಿದ್ದ ಕೌನ್‌ಬನೇಗಾ ವಿದ್ಯಾಪತಿ ಸೀಸನ್-2ನ ವಿದ್ಯಾಪತಿಯಾಗಿ ಭಾನುವಾರ ಟಕ್ಕಳ ಕಿಯ ಮೊರಾರ್ಜಿ ವಸತಿ ಶಾಲೆಯ ಮಲ್ಲಯ್ಯ ನಿಡಗುಂದಿಮಠ ಆಯ್ಕೆಯಾದನು.

ಅಂತಿಮ ಸುತ್ತು ತೀವ್ರ ಕುತೂಹಲ ಕೆರಳಿಸಿತ್ತು. ಎಲ್ಲ ಆರು ಸುತ್ತಿನಲ್ಲಿ ಗರಿಷ್ಠ ಪ್ರಶ್ನೆಗಳಿಗೆ ಉತ್ತರಿಸಿದ ಮಲ್ಲಯ್ಯ ಪ್ರಥಮ ಸ್ಥಾನ ಪಡೆದು ₹ 35 ಸಾವಿರ ಮೌಲ್ಯದ ಲ್ಯಾಪ್‌ಟಾಪ್‌ ತನ್ನದಾಗಿಸಿ ಕೊಂಡ. ದ್ವಿತೀಯ ಸ್ಥಾನ ಪಡೆದ ಗೊಳಸಂಗಿಯ ಎಸ್ಆರ್ಎಡಿ ಪ್ರೌಢ ಶಾಲೆಯ ಶೈಲಾ ದಳವಾಯಿ ₹ 25 ಸಾವಿರ  ಮೌಲ್ಯದ ಲ್ಯಾಪ್‌ಟಾಪ್ ಬಹು ಮಾನವಾಗಿ ಪಡೆದಳು. ನಿಡಗುಂದಿಯ ಜಿವಿವಿಎಸ್ ಪ್ರೌಢಶಾಲೆಯ ಗೌರಮ್ಮ ಗೌಡರ ತೃತೀಯ ಸ್ಥಾನ ಪಡೆದು ₹ 20 ಸಾವಿರ ಮೌಲ್ಯದ ಲ್ಯಾಪ್‌ಟಾಪ್‌ ಪಡೆದಳು.

ತಾಲ್ಲೂಕಿನ 75 ಪ್ರೌಢಶಾಲೆಗಳ ಒಟ್ಟು 4500 ವಿದ್ಯಾರ್ಥಿಗಳು ಕೌನ್‌ ಬನೇಗಾ ವಿದ್ಯಾಪತಿಯ ಮೊದಲ ಸುತ್ತಿ ನಲ್ಲಿ ಭಾಗವಹಿಸಿದ್ದರು. ಎರಡನೇ ಸುತ್ತಿಗೆ ಆಯ್ಕೆಯಾದ 225 ವಿದ್ಯಾರ್ಥಿಗಳಲ್ಲಿ 12 ವಿದ್ಯಾರ್ಥಿಗಳು ಅಂತಿಮ ಹಂತದ ಹಾಟ್‌ಸೀಟ್ ಸ್ಪರ್ಧೆಗೆ ಆಯ್ಕೆಯಾಗಿ ದ್ದರು.

ಈ 12 ಜನ ಅಂತಿಮ ಸ್ಪರ್ಧೆಯಲ್ಲಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಪ್ರಥಮ ಸ್ಥಾನ ಪಡೆದಿರುವುದು ವಿಶೇಷ. ಖಾಸಗಿ ಶಾಲೆ ಮೀರಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕೌನ್ ಬನೇಗಾ ವಿದ್ಯಾಪತಿಯಾಗಿ ಆಯ್ಕೆಯಾಗಿದ್ದು ವಿಶೇಷ ಎಂದು ಬಹುಮಾನ ವಿತರಿಸಿದ ವಿಜಯಪುರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನೀಲಮ್ಮ ಮೇಟಿ ಅಭಿಪ್ರಾಯಪಟ್ಟರು.

ಕುಟುಂಬ ಬಡತನದಲ್ಲಿದ್ದರೂ ಕಲಿಕೆಗೆ ಬಡತನವಿಲ್ಲ, ಕಲಿಯುವರಿಗೆ ಪ್ರೋತ್ಸಾಹ, ಸಹಾಯ ಧನ ನೀಡುವವರು ಸಮಾಜದಲ್ಲಿ ಸಾಕಷ್ಟು ಜನರಿದ್ದಾರೆ, ಕಲಿಯಬೇಕೆಂಬ ಮನಸ್ಸು ವಿದ್ಯಾರ್ಥಿಗಳಲ್ಲಿ ಮೂಡಬೇಕಾಗಿದೆ ಎಂದು ಮೇಟಿ ಹೇಳಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಶಾಂತಾ ಬಾಯಿ ತಾನಾಜಿ ನಾಗರಾಳ, ಬಸವನ ಬಾಗೇವಾಡಿ ಕಾಂಗ್ರೆಸ್ ಬ್ಲಾಕ್ ಘಟಕದ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ವಿಜಯಪುರ ಚಾಣಕ್ಯ ಕರಿಯರ್ ಅಕಾಡೆಮಿಯ ಆರ್.ಆರ್.ಬಿರಾದಾರ, ಲೋಕನಾಥ ಅಗರವಾಲ, ಬಸವರಾಜ ಸಿದ್ದಾಪುರ, ತಾಲ್ಲೂಕು ಪಂಚಾಯ್ತಿ ಇಓ ಬಿ.ಎಸ್. ರಾಠೋಡ, ಲೋಕನಾಥ ಅಗರವಾಲ, ಡಿ.ಎಂ.ಚಲವಾದಿ, ಕಾರ್ಯಕ್ರಮದ ರೂವಾರಿ ಬಿಇಓ ಎಂ.ಎ. ಗುಳೇದಗುಡ್ಡ, ಇಸಿಓ ಎಂ. ಎಸ್‌.ಝಳಕಿ ಮೊದಲಾದವರಿದ್ದರು. ಸಂಗಮೇಶ ಪೂಜಾರಿ ಸ್ವಾಗತಿಸಿ ದರು. ಬಿ.ಎಚ್. ತಿಳಗೂಳ ನಿರೂಪಿಸಿ ದರು. ಶರಣು ಗಡೇದ ವಂದಿಸಿದರು.

ಶಾಸಕರ ಅಭಿನಂದನೆ: ಕೌನಬನೇಗಾ ವಿದ್ಯಾಪತಿ ಶಾಸಕ ಶಿವಾನಂದ ಪಾಟೀಲ ರಲ್ಲಿಯೂ ತೀವ್ರ ಕುತೂಹಲ ಮೂಡಿ ಸಿತ್ತು.  ಕೌನ್‌ಬನೇಗಾ ವಿದ್ಯಾಪತಿಯ ಸ್ಪರ್ಧೆಯ ವಿಜೇತರ ಮಾಹಿತಿ ಪಡೆದ ತಕ್ಷಣ. ಈ ಸ್ಪರ್ಧೆಯ ವಿಜೇತ ಮಲ್ಲಯ್ಯ ನಿಡಗುಂದಿಮಠ ಅವರನ್ನು ಸ್ವತಃ ಶಾಸಕರೇ ದೂರವಾಣಿ ಮೂಲಕ ಸಂಪ ರ್ಕಿಸಿ ಅಭಿನಂದನೆ ಸಲ್ಲಿಸಿದ್ದು ವಿಶೇಷ.

*
‘ಶಾಲೆ ಯಾವುದಾದರೇನು, ಅರ್ಥಪೂರ್ಣವಾಗಿ ಬದುಕುವ ಕಲೆ ಸರ್ಕಾರಿ ಶಾಲೆಗಳಲ್ಲಿ ಮಾತ್ರ ದೊರೆಯುತ್ತದೆ. ಶಿಕ್ಷಣ ಇಲಾಖೆಯ ಈ ಕಾರ್ಯಕ್ರಮ ಆತ್ಮವಿಶ್ವಾಸ ತುಂಬಿದೆ.
-ಮಲ್ಲಯ್ಯ ನಂದಿಕೋಲಮಠ,
ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT