ADVERTISEMENT

‘ನಿಷೇಧಿತ ಪ್ರದೇಶದಲ್ಲಿ ಮೀನುಗಾರಿಕೆ ಬೇಡ’

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2017, 6:17 IST
Last Updated 7 ಸೆಪ್ಟೆಂಬರ್ 2017, 6:17 IST

ಆಲಮಟ್ಟಿ(ನಿಡಗುಂದಿ): ಮೀನುಗಾರರು ನಿಷೇಧಿತ ಪ್ರದೇಶದಲ್ಲಿ ಮೀನು ಹಿಡಿಯಲು ಒಳಪ್ರವೇಶ ಮಾಡಿ ದರೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್ಐಎಸ್‌ಎಫ್ ಮೇಲ್ವಿಚಾರಣಾ ಪಿಎಸೈ ಈರಪ್ಪ ವಾಲಿ ಎಚ್ಚರಿಸಿದರು.

ಸ್ಥಳೀಯ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಪೊಲೀಸ್ ಠಾಣೆಯಲ್ಲಿ ನಡೆದ ಪೊಲೀಸ್ ಸಿಬ್ಬಂದಿ ಹಾಗೂ ಮೀನುಗಾರರಿಗೆ ಮುನ್ನೆಚ್ಚರಿಕೆ ಸಭೆಯಲ್ಲಿ ಮಾತನಾಡಿದರು.

ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರಿ ಜಲಾಶಯ ಭದ್ರತೆಗಾಗಿ ರಾಜ್ಯ ಭದ್ರತಾ ಪಡೆಯನ್ನು ನಿಯೋಜನೆ ಮಾಡಿದೆ ಈ ಕುರಿತು ಮೀನುಗಾರರು ಮಳೆಗಾಲದಲ್ಲಿ ಜಲಾಶಯದ ಮುಂಭಾಗದಲ್ಲಿ ಹಾಗೂ ಬೇಸಿಗೆಯಲ್ಲಿ ಹಿನ್ನೀರು ಪ್ರದೇಶದಲ್ಲಿ ಮೀನು ಹಿಡಿಯಲು ಆಗಮಿಸುತ್ತಿದ್ದೀರಿ ಇದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ ಆದರೆ ನಿಷೇಧಿತ ಪ್ರದೇಶದಲ್ಲಿ ಒಳ ಪ್ರವೇಶ ಮಾಡಿದರೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು.

ADVERTISEMENT

ಈ ಹಿಂದೆಯೂ ಕೂಡ ಎಚ್ಚರಿಕೆ ನೀಡಲಾಗಿದ್ದರೂ ಕೂಡ ಅಕ್ರಮವಾಗಿ ನಿಷೇಧಿತ ಪ್ರದೇಶದಲ್ಲಿ ಮೀನು ಹಿಡಿಯಲು ಬಂದ ವೇಳೆಯಲ್ಲಿ ಎಚ್ಚರಿಕೆ ನೀಡಿ ಮರಳಿ ಕಳಿಸಲಾಗಿದೆ ಇನ್ನು ಮುಂದೆ ಇಂಥ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ ಎಚ್ಚರಿಸಿದರು.

ನಂತರ ಮಾತನಾಡಿದ ಮಹಾಂತೇಶ ಧನವೆ, ‘ನಮ್ಮ ತಂಡದ ಸದಸ್ಯರಾರೂ ಜಲಾಶಯದ ಸಮೀಪ ದಲ್ಲಿ ಮೀನು ಹಿಡಿಯುವುದಿಲ್ಲ, ಈ ಹಿಂದೆಯೂ ಕೂಡ ನಮ್ಮರಾರೂ ಇಂಥ ಕೃತ್ಯದಲ್ಲಿ ಬಾಗಿಯಾಗಿಲ್ಲ, ಇನ್ನು ಬೇರೆ ತಂಡಗಳ ಕುರಿತು ನಾವು ಏನೂ ಹೇಳಲು ಆಗುವುದಿಲ್ಲ’ಎಂದರು.

ಅನಿಲ ವಾಲಿಕಾರ, ಮಹೇಶ ಮಾದರ,ಗೈಬೂಸಾಬ ಕಂಕಣ ಪೀರ, ಬಾಗೋಜಿ ಮೇಹ್ತಾ, ನರಸಪ್ಪ ದಂಡೂ, ಬಾಲು ಮೇಹ್ತಾ ಹಾಗೂ ಎಎಸೈ ಎ.ಎಂಮ್.ಗಾಳಪ್ಪಗೊಳ ಹಾಜರಿದ್ದರು.

ಜಲಾಶಯಕ್ಕೆ ಹೊಂಂದಿಕೊಂಡು ಮೀನುಗಾರಿಕೆ:  ಜಲಾಶಯದ ಹಿಂಭಾಗ ಐದುನೂರು ಮೀಟರ್ ಹಾಗೂ ಮುಂಭಾಗದ 500 ಮೀ ವ್ಯಾಪ್ತಿಯಲ್ಲಿ ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶ ನಿಷೇಧಿ ಸಿದ ನಿರ್ಬಂಧಿತ ಸ್ಥಳದಲ್ಲಿ ಮೀನುಗಾರಿಕೆ ಸೇರಿದಂತೆ ಎಲ್ಲವನ್ನೂ ನಿಷೇಧಿಸಲಾಗಿದೆ.

ಈ ಕುರಿತು ಜಲಾಶಯದ ಭದ್ರತಾ ಹೊಣೆ ಹೊತ್ತಿರುವ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಪೊಲೀಸ್ ಟಾಣೆಯಲ್ಲಿ ನಿಷೇಧಿತ ಪ್ರದೇಶದಲ್ಲಿ ಪ್ರವೇಶ ಮಾಡಬಾರದು ಎಂದೂ ತಿಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.