ADVERTISEMENT

ಬಣ್ಣದಲ್ಲಿ ಮೀಯಲು ಸಜ್ಜಾದ ಗುಮ್ಮಟನಗರಿ

ಮಲ್ಲಿಕಾರ್ಜುನ ಹೂಗಾರ
Published 13 ಮಾರ್ಚ್ 2017, 6:50 IST
Last Updated 13 ಮಾರ್ಚ್ 2017, 6:50 IST

ವಿಜಯಪುರ: ಗುಮ್ಮಟ ನಗರಿಯ ಗಲ್ಲಿ, ಗಲ್ಲಿಗಳಲ್ಲಿ ಹಲಗೆಯ ವಾದನ ಎರಡು ವಾರಗಳಿಂದ ಸಂಜೆ ವೇಳೆ ಅನುರಣಿಸತೊಡಗಿದೆ. ಚಿಣ್ಣರು, ಯುವಕರ ಕೊರಳಿಗೆ ಹಲಗೆಯನ್ನು ನೇತುಹಾಕಿಕೊಂಡು ಪ್ರಾಸಪದ್ಧವಾಗಿ ಬಾರಿಸುವ ಮೂಲಕ ರಂಜಿಸ ತೊಡಗಿದ್ದಾರೆ.

ಹೋಳಿ ಹಬ್ಬದ ಸಾಂಪ್ರದಾಯಿಕ ಹಾಡು, ಕುಣಿತ, ಬಣ್ಣದೋಕುಳಿಯಲ್ಲಿ ಮಿಂದೇಳಲು ಗುಮ್ಮಟನಗರಿ ಸಜ್ಜಾ ಗಿದೆ.  ನಗರದಲ್ಲಿ ಬಣ್ಣದದ ಓಕುಳಿಯ ಸಂಭ್ರಮ ವಿಭಿನ್ನವಾದುದು. ನಗರದಲ್ಲಿ ನಡೆಯುವ ಬಣ್ಣದ ಓಕುಳಿಗೆ ಗಲ್ಲಿ, ಗಲ್ಲಿಗಳಲ್ಲಿ ಯುವಕರು, ಚಿಣ್ಣರು ಬಗೆ ಬಗೆಯ ಬಣ್ಣದ ಪಿಚಗಾರಿ ಹಿಡಿದು ಸಜ್ಜಾಗಿದ್ದಾರೆ. ಪರಸ್ಪರ ಬಣ್ಣ ಎರಚಿ ಸಂಭ್ರಮಿಸುವ ಕ್ಷಣಕ್ಕಾಗಿ ಕಾತರ ರಾಗಿದ್ದಾರೆ.

ನಗರದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಹೋಳಿ ಹಬ್ಬವನ್ನು ಸಂಭ್ರಮ ದಿಂದ ಆಚರಿಸಲಾಗುತ್ತಿದೆ. ಕಳೆದ 15 ದಿನಗಳಿಂದ ಬಡಾವಣೆಯ ಯುವಕರು ಕುಳ್ಳು, ಕಟ್ಟಿಗೆಯನ್ನು ಕದ್ದು ತಂದು ಸಂಗ್ರಹಿಸಿಟ್ಟಿದ್ದರು.

ADVERTISEMENT

ಹೋಳಿ ಹುಣ್ಣಿಮೆಯ ಅಂಗವಾಗಿ ಭಾನುವಾರ ಸಂಜೆಯೇ ಮಹಿಳೆಯ ತಮ್ಮ ಮನೆಯ ಮುಂದಿನ ಅಂಗಳ ಸಾರಸಿ, ರಂಗೋಲಿ ಹಾಕಿ,  ಕುಳ್ಳನ್ನು ಇಟ್ಟು ಪೂಜಿಸುತ್ತಿದ್ದ ದೃಶ್ಯ ಕಂಡು ಬಂದಿತು. ಯುವಕರು, ಚಿಣ್ಣರು ಕೊರ ಳಲ್ಲಿ ಸಕ್ಕರೆ ಸರ ಹಾಕಿಕೊಂಡು ಇದಕ್ಕೆ ಬೆಂಕಿ ಹಚ್ಚಿ 5 ಸುತ್ತು ಹಾಕಿ ಬೊಬ್ಬೆ ಹಾಕಿ ಸಂಭ್ರಮಿಸಿದರು.

ಮಹಿಳೆಯರು ಈ ಬೆಂಕಿಯ ಮೇಲೆ ತವೆಯನ್ನು ಇಟ್ಟು ಒಣಗಿದ ಕಡಲೆ ಯನ್ನು ಹುರಿದು ಹಂಚಿ ತಿಂದ ನೋಟ  ಕಂಡುಬಂದಿತು. ಹೋಳಿ ಸಂಭ್ರಮಕ್ಕೆ ಬೇಕಾದ ಬಣ್ಣ, ಹಲಗೆ, ಸಕ್ಕರೆ ಸರದ ವ್ಯಾಪಾರ ಬಲು ಜೋರಾಗಿ ನಡೆಯಿತು.

‘ಇತ್ತೀಚಿನ ವರ್ಷಗಳಲ್ಲಿ ಈ ಹಬ್ಬ ತನ್ನ ಮಹತ್ವವನ್ನೆ ಕಳೆದುಕೊಂಡಿದೆ. ಕಾಮ ಭಾವನೆಯನ್ನು ಸುಡಬೇಕಾದ ಜನರು ಕೇವಲ ಕಟ್ಟಿಗೆಯನ್ನು ಸುಡುತ್ತಿ ದ್ದಾರೆ. ಅಶ್ಲೀಲ ಪದಗಳನ್ನು ಹಾಡಿ ಸಂಸ್ಕೃತಿಯನ್ನು ಹಾಳು ಮಾಡುತ್ತಿ ದ್ದಾರೆ. ವಿಷಕಾರಿ ಬಣ್ಣ ಎರಚುವುದು ಆರೋಗ್ಯಕ್ಕೆ ಹಾನಿಕರ ಇದು ನಿಲ್ಲಬೇಕು. ಬದಲಾಗಿ ಓಕುಳಿಗೆ ಉತ್ತಮ ಬಣ್ಣ ಬಳಸಬೇಕು ಎನ್ನುತ್ತಾರೆ ಜಾನಪದ ಸಾಹಿತಿ ಎಂ.ಎನ್‌. ವಾಲಿ. ಓಕುಳಿಯ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.