ADVERTISEMENT

ಮಕ್ಕಳ ಮನಸ್ಸಿಗೆ ಮುದ ನೀಡಿದ ಜಾತ್ರೆ

ವಿಜಯಪುರ ನಗರದ ಆರಾಧ್ಯ ದೈವ ಸಿದ್ಧೇಶ್ವರ ಜಾತ್ರೆಯಲ್ಲೊಂದು ಸುತ್ತು...ಗಮನ ಸೆಳೆದ ಧಾರ್ಮಿಕ ವಿಧಿವಿಧಾನ

ಡಿ.ಬಿ, ನಾಗರಾಜ
Published 23 ಜನವರಿ 2017, 12:10 IST
Last Updated 23 ಜನವರಿ 2017, 12:10 IST
ಮಕ್ಕಳ ಮನಸ್ಸಿಗೆ ಮುದ ನೀಡಿದ ಜಾತ್ರೆ
ಮಕ್ಕಳ ಮನಸ್ಸಿಗೆ ಮುದ ನೀಡಿದ ಜಾತ್ರೆ   

ವಿಜಯಪುರ: ನಗರದ ಆರಾಧ್ಯ ದೈವ ಸಿದ್ಧೇಶ್ವರರ ಸಂಕ್ರಮಣ ಜಾತ್ರೆ, ನಮ್ಮೂರ ಜಾತ್ರೆಯ ಧಾರ್ಮಿಕ ವಿಧಿ–ವಿಧಾನ ಪೂರ್ಣಗೊಂಡಿವೆ. ಜಾತ್ರಾ ಮಹೋತ್ಸವ ಮುಗಿದಿ ದ್ದರೂ ಸಿದ್ಧೇಶ್ವರ ದೇಗುಲ ರಸ್ತೆಯಲ್ಲಿ ಇನ್ನೂ ಜಾತ್ರೆಯ ವಾತಾವರಣ ಜೀವಂತವಿದೆ. ರಸ್ತೆಯ ಎರಡೂ ಬದಿ ಒಂದು ಕಿ.ಮೀ.ಗೂ ಹೆಚ್ಚಿನ ದೂರ ಮಳಿಗೆಗಳು ಭಾನುವಾರವೂ ತೆರೆದಿದ್ದವು.

ನಗರವೂ ಸೇರಿದಂತೆ ಗ್ರಾಮೀಣ ಪ್ರದೇಶದ ಜನತೆ ಜಾತ್ರೆಗೆ ಕುಟುಂಬ ಸಮೇತರಾಗಿ ದಾಂಗುಡಿಯಿಟ್ಟು, ಸಿದ್ಧೇಶ್ವರನ ದರ್ಶನದ ಜತೆಗೆ, ಮಕ್ಕಳಿಗಾಗಿ ವಿವಿಧ ಆಟಿಕೆ ಕೊಳ್ಳುವ ಜತೆ ಜತೆಯಲ್ಲಿ ವಿಭಿನ್ನ ಆಟೋಟಗಳ ಮನೋರಂಜನಾ ಪಾರ್ಕ್‌ನಲ್ಲಿ ಸುತ್ತಾಡಿ ಸಂಭ್ರಮಿಸಿದ ದೃಶ್ಯಾವಳಿಗಳು ಗೋಚರಿಸಿದವು.

ಮನಸೆಳೆದ ವಾಟರ್‌ ಪಾರ್ಕ್‌: ಜಾತ್ರೆಯ ಬೀದಿಯಲ್ಲಿ ಮನಮೋಹಕ ಜಲ ಉದ್ಯಾನವೇ ಸೃಷ್ಟಿ ಯಾಗಿದೆ. ಹರಿ ಯುವ ನೀರಿನಲ್ಲಿ ಚಿಕ್ಕ ಮಕ್ಕಳು ಜಲ ಕ್ರೀಡೆಯಲ್ಲಿ ತಲ್ಲೀನರಾಗಿ ಸಂತಸದ ಲೋಕದಲ್ಲಿ ವಿಹರಿಸುವುದನ್ನೇ ಕಣ್ತುಂಬಿಕೊಳ್ಳುವುದು ಅಂದವಾಗಿ ಪರಿಣಮಿಸಿದೆ. ಬಹುತೇಕ ಪೋಷಕರು ಮುದ್ದು ಮಕ್ಕಳ ಜಲಕ್ರೀಡೆಯ ಚಿತ್ರೀಕರಣವನ್ನು ತಮ್ಮ ಮೊಬೈಲ್‌ಗ ಳಲ್ಲಿ ಮಾಡಿಕೊಂಡಿದ್ದು ವಿಶೇಷ.

ಇದೊಂದೇ ಅಲ್ಲ. ಜಾತ್ರೆ ಅಂಗ ವಾಗಿ ದೇಗುಲದಿಂದ ಅನತಿ ದೂರದಲ್ಲೇ ಪುಟ್ಟ ಫ್ಯಾಂಟಸಿ ಪಾರ್ಕ್‌ ನಿರ್ಮಾಣಗೊಂಡಿದೆ. ಇದರೊಳಗೆ ವಾಟರ್ ಪಾರ್ಕ್‌, ಚಕಿತಗೊಳಿಸುವ ಜಾದೂ... ಸೇರಿದಂತೆ ಹತ್ತಾರು ವೈವಿಧ್ಯ ಮಯವಾದ ವಸ್ತು-, ವಿವಿಧ ಸಾಧನ ಗಳು ಚಿಕ್ಕಮಕ್ಕಳನ್ನು ಕೈ ಬೀಸಿ ಕರೆಯು ತ್ತಿವೆ. ಝಗಮಗಿಸುವ ವಿದ್ಯುತ್ ದೀಪ ಗಳು ಜಾತ್ರೆಯ ವೈಭವವನ್ನು ಮತ್ತಷ್ಟು ಹೆಚ್ಚಿಸಿವೆ.

ಜಲಕ್ರೀಡೆ ಈ ಬಾರಿಯ ಜಾತ್ರಾ ಮಹೋತ್ಸವದ ವಿಶೇಷ. ಸುಂದರ ವಾದ ನೀರಿನ ಕೊಳದಲ್ಲಿ ಹತ್ತಾರು ಬೋಟ್‌ಗಳಿವೆ. ಅಲ್ಲಿ ಚಿಣ್ಣರು ಕೈಯ ಲ್ಲಿರುವ ಪೆಡಲ್ ತುಳಿಯುತ್ತಾ ಬೋಟಿಂಗ್ ಮಾಡುತ್ತಾ ಮಜಾ ಅನುಭವಿಸುತ್ತಿದ್ದಾರೆ.

ಇನ್ನೊಂದೆಡೆ ಇನ್ನೊಂದು ಕೊಳ ದಲ್ಲಿ ಜಂಪಿಂಗ್ ಬಾಲ್ ಮಾದರಿಯ ಕ್ರೀಡೆ ಮಕ್ಕಳಿಗೆ ಖುಷಿ ಕೊಡುತ್ತಿದೆ. ಆ ಜಂಪಿಂಗ್ ಬಾಲ್‌ನಲ್ಲಿ ಮಕ್ಕಳು ಕುಣಿದು -ಕುಣಿದು ಕುಪ್ಪಳಿಸಿ ಸಂತಸ ಪಡುತ್ತಿದ್ದಾರೆ. ಮನರಂಜನಾ ಲೋಕದಲ್ಲಿ ವಿಹರಿಸಲು ಮಕ್ಕಳಾದಿ ಯಾಗಿ ಪ್ರತಿಯೊಬ್ಬರು ಆಸಕ್ತಿಯಿಂದ ಜಾತ್ರಾ ಬೀದಿಗೆ ಭೇಟಿ ನೀಡುತ್ತಿದ್ದಾರೆ.

50 ಅಡಿ ಎತ್ತರದ ಬಣ್ಣ-ಬಣ್ಣದ ಟ್ಯೂಬ್‌ಲೈಟ್‌ಗಳಿಂದ ಸಾಲಂಕೃತ ಗೊಂಡಿರುವ ಚಿರಕಿ ಗಾಣಾದಲ್ಲಿ ಕುಳಿತುಕೊಳ್ಳುವ ಆನಂದವೇ ಬೇರೆ. ಚಿಕ್ಕಮಕ್ಕಳು, ಯುವಕರು ಅತ್ಯುತ್ಸಾಹ ದಿಂದ ಚಿರಕಿ ಗಾಣಾದಲ್ಲಿ ಕುಳಿತು ಗಗನ ದಲ್ಲಿ ಜಾತ್ರೆಯ ವೈಭವವನ್ನು ಸವಿಯು ತ್ತಿದ್ದಾರೆ. ಚಿರಕಿ ಗಾಣಾ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಅದೇ ರೀತಿ ಮೂನ್ ಡ್ಯಾನ್ಸ್, ಬ್ರೇಕ್ ಡ್ಯಾನ್ಸ್, ಅಕ್ಟೋಪಸ್ ರೈಡಿಂಗ್, ಸ್ಪೀಡ್ ಹೆಲಿಕ್ಯಾಪ್ಟರ್, ಸ್ಪೀಡ್ ಫೋರ್ ವ್ಹೀಲರ್, ಸ್ಲಂಬೋ, ಟೂ ವ್ಹೀಲರ್‌, ಚುಕು-ಬುಕು ಟ್ರೇನು ಹೀಗೆ ಹತ್ತಾರು ಮನರಂಜನಾ ಪರಿಕರಗಳು ಮಕ್ಕಳನ್ನು ಆಕರ್ಷಿಸುತ್ತಿವೆ. ಮಕ್ಕಳಿಗೆ ಅತ್ಯಂತ ಪ್ರಿಯವಾಗಿರುವ ಡೋನಾಲ್ಡ್ ಡಕ್ ಹಾಗೂ ಮಿಕ್ಕಿ ಮೌಸ್ ಮಾದರಿಯಲ್ಲಿ ಮಕ್ಕಳು ಜಿಗಿದು ಜಿಗಿದು ಸಂತೋಷ ಅನುಭವಿಸುತ್ತಿದ್ದಾರೆ.

ಜಾದೂ ಕಮಾಲ್..! ಜಾದೂಗಾರ್ತಿ ಭೈರವಿ ಜಾದೂ ಎಲ್ಲರನ್ನೂ ಚಕಿತ ಗೊಳಿಸುವುದಂತೂ ಸತ್ಯ. ಭೈರವಿ ಅನೇಕ ಜಾದೂ ಪ್ರದರ್ಶನ ನೀಡಿ ಆಶ್ಚರ್ಯ ಮೂಡಿಸುತ್ತಾರೆ.

ನೋಡು ನೋಡುತ್ತಲೇ ಸಹ ಕಲಾವಿದೆ ಮೊದಲು ಗಾಳಿಯಲ್ಲಿ ತೇಲುತ್ತಾರೆ, ನಂತರ ಭೈರವಿಯೂ ಗಾಳಿಯಲ್ಲಿ ತೇಲಾಡುತ್ತಾರೆ.  ಇದ್ದಕ್ಕಿದ್ದಂತೆ ಒಂದೇ ನೋಟಿನಿಂದ ನೋಟಿನ ಸುರಿಮಳೆಯೇ ಸುರಿ ಯುತ್ತದೆ. ಖಾಲಿ ಬಾಕ್ಸ್ ಒಂದು ಕ್ಷಣ ತಿರುಗಿಸಿದಾಗ ಕ್ಷಣಾರ್ಧದಲ್ಲೇ ಅದರೊಳಗೆ ನಾಯಿ ಪತ್ತೆ. ಕೊನೆಯ ಜಾದೂವಾಗಿ ವುಡ್ ಕಟಿಂಗ್ ಮಷೀನ್‌ನ ಜಾದೂ ಮೈಮನವನ್ನು ರೋಮಾಂಚನಗೊಳಿಸುತ್ತದೆ. ಇಷ್ಟೇ ಅಲ್ಲದೇ ರೋಲಿಂಗ್ ಕಾರ್ ಎಂಬ ವಿಶೇಷ ಗೋಲಾಕಾರದಲ್ಲಿ ಕಾರನ್ನು ಓಡಿಸುವ ಸಾಹಸ ಪ್ರದರ್ಶನ ವಂತೂ ಮೈ ಜುಂ ಎನಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.